Thursday, 26 May 2016

ಆಸೆ ಇಲ್ಲದ ಬದುಕು :-

ಬದುಕುವ ಆಸೆ ಕ್ಷಿಣಿಸುತ್ತಿದೆ, ಸಾಯುವ ಕನಸು ಶುರುವಾಗಿದೆ
ನೋವಿನ ಮೂಟೆಯ ಪ್ರಮಾಣ ಅತಿಯಾಗಿದೆ, ನಾ ಹೇಗೆ ಎಳೆಯಲಿ ಜೀವನದ ಗಾಡಿಯ ನೀನಿಲ್ಲದೆ.
ಸುಡುತಿದೆ ಮನ ಬೆಂಕಿಯ ಸುಳಿವಿಲ್ಲದೆ, ನಗುತಿದೆ ದಿನ ಸಾವಿನ ಅರಿವಿಲ್ಲದೆ
ಪ್ರತಿ ದಿನ ಬದುಕಿ ಸಾಯುವುದಕಿಂತ, ಸತ್ತು ನೆನಪಿನಲ್ಲಿ ಬದುಕುವುದು ಸುಖವಲ್ಲವೆ...ನೀನಿಲ್ಲದೆ ನಾ.....?

- ಮುಕಮಸು

Wednesday, 11 May 2016

ನಿ ಇಲ್ಲದ ಸ್ವರ್ಗ :-

ಮುಳ್ಳಿನ ಹಾಸಿಗೆ ಮುದ ನೀಡದು
ಮುರಿದ ಕೊಳಲಲಿ ಸ್ವರ ಹೊಮ್ಮದು.
ನಲ್ಮೆಯ, ನನ್ನೊಲುಮೆಯ,
ಚೆಲುವಿನ ಚಿಲುಮೆಯ,
ನನ್ನೋಲವೆ, ನೀನಿಲ್ಲದ ಸ್ವರ್ಗ ಎಂದು ಸುಖ ತರದು.

- ಮುಕಮಾಸು.

ಮೈತ್ರಿ

ನದಿಗಳ ಮೈತ್ರಿ ಸಂಗಮ
ಭಾವನೆಗಳ ಮೈತ್ರಿ ಸಂಬಂಧ
ಮನಸ್ಸುಗಳ ಮೈತ್ರಿ ಸಂಸಾರ
ಸ್ವರಗಳ ಮೈತ್ರಿ ಸರಿಗಮ
ನನ್ನ ನಿನ್ನ ಮೈತ್ರಿ ಸುಮೈತ್ರಿ.

- ಮುಕಮಾಸು.

ಶ್ರೀಮಂತ...

ಈ ಪ್ರಪಂಚದಲ್ಲಿ ಕಳೆದು ಹೋದ ಕಾಲವನ್ನು ಮರಳಿ ಪಡೆಯುವಷ್ಟು ಶ್ರೀಮಂತರೆ ಇಲ್ಲ. ಕೈಯಲ್ಲಿ ಇರುವ  ಅಮೂಲ್ಯವಾದ ಕಾಲವನ್ನು ಯಾರು ಸಂಪೂರ್ಣವಾಗಿ ಬಳಸಿಕೊಂಡು ಅನುಭವಿಸುತ್ತಾರೊ ಅವರೆ ಶ್ರೀಮಂತರು.....

-ಮುಕಮಾಸು