Thursday, 31 December 2015

Happy New Year 2016

ಬರುತಿದೆ ಹೊಸ ವರುಷ ಹರಸುತ ಶುಭ ಹಾರೈಕೆಯ ಹರುಷದಲಿ
ಹೊರಟಿದೆ ಹೇಳುತ ವಂದನೆ ಹಳೆಯ ವರುಷ ನೀಡಿ ಸಾಕಷ್ಟು ಅನುಭವ ಸುಖದುಃಖದಲಿ
ಆಚರಣೆ ಏನೇ ಇರಲಿ, ಆಗದಿರಲಿ ಪ್ರಥಮ ದಿನವದು ಕಡೆಯದಿನ ನಮ್ಮ ಬಾಳಿಗೆ
ಅಸುಭವಿಸುವುದು ಎಲ್ಲವನ್ನೂ ಸರಿಸಮ ಅದಲ್ಲವೆ ಸಮರಸ ಬಾಳಿಗೆ ತುಪ್ಪ ಹಚ್ಚಿದ ಹೋಳಿಗೆ

- ಮುಕಮಾಸು

Saturday, 26 December 2015

ತಾಯಿ

ತಾಯೆ ಏನಿದು ನಿನ್ನ ಮಾಯೆ ಈ ಜಗದೊಳೊ
ಈ ಜಗವೆಲ್ಲ ನಿನ್ನ ನಗುವ ತಂಬೆಲರ ಛಾಯೆ ಮನದೊಳು
ಅದೆನು ಅಮರ ಶಕ್ತಿ ನಿನಗೆ ಜಗದೆಲ್ಲ ನೋವ ನಂಗುವೆ
ನಿನಿಲ್ಲದಿರೆ ಜಗವೆಲ್ಲ ಕಲ್ಪನೆಗೆ ನಿಲುಕದ ಬರಡು ಭೂಮಿ ಅಲ್ಲವೆ

ಅಳುವಿನ ಆಕ್ರಂದನವ ತನ್ನೊಡಲಲಿ ಮುಚ್ಚಿ, ಬೀರುವೆ ನಗೆಯ ತುಂಬಿದ ಬಾಳೆಯಲಿ ಮುಡುವ ಮಾತೆಯಂತೆ
ಮಮತೆಯ ಪರಿಯದು ಸುಡುವ ಬಿಸಿಲಿನ ಜಳಕೆ ಜಗ್ಗದೆ ಕುಗ್ಗದೆ ಹೊರ ಬರುವ ಹೊಂಬಾಳೆಯ ಮಿಂಚಂತೆ
ಹರಸುತ ಹರುಷದಲಿ ತನ್ನ ರಕ್ತದಮೃತ ಉಣಿಸಿ ಬೆಳೆಸುತ ಬಳಲಿರುವೆ ಜಗನ್ಮಾತೆ
ಸಹಿಸುತ ಎಲ್ಲಾ ದುಃಖ ದುಮ್ಮಾನಗಳ ನಗುವೆ ಅಗಲುರಾತ್ರಿ ನಿನಲ್ಲವೆ ಗೋಮಾತೆ

ತಾಯೆ ಏನಿದು ನಿನ್ನ ಮಾಯೆ ಈ ಜಗದೊಳೊ||

- ಮುಕಮಾಸು

Tuesday, 8 December 2015

ಆಳದ ಯೋಚನೆ

ಯೋಚನೆ ಯೋಚಿಸಿದಷ್ಟು ಆಳ
ಯೋಚನೆಯನ್ನು ಯೋಚಿಸುವುದು ಬಿಟ್ಟರೆ ಮನಸಿಗೆ ನಿರಾಳ.
ನಾವು ಯಾತನೆಯನು ಅನುಭವಿಸುವುದು ಆರಂಭ
ಯಾತನೆ ನಮ್ಮನ್ನು ಅನುಭವಿಸುವುದು ಅಂತ್ಯದ ಆರಂಭ.

- ಮುಕಮಾಸು