ತಾಯೆ ಏನಿದು ನಿನ್ನ ಮಾಯೆ ಈ ಜಗದೊಳೊ
ಈ ಜಗವೆಲ್ಲ ನಿನ್ನ ನಗುವ ತಂಬೆಲರ ಛಾಯೆ ಮನದೊಳು
ಅದೆನು ಅಮರ ಶಕ್ತಿ ನಿನಗೆ ಜಗದೆಲ್ಲ ನೋವ ನಂಗುವೆ
ನಿನಿಲ್ಲದಿರೆ ಜಗವೆಲ್ಲ ಕಲ್ಪನೆಗೆ ನಿಲುಕದ ಬರಡು ಭೂಮಿ ಅಲ್ಲವೆ
ಅಳುವಿನ ಆಕ್ರಂದನವ ತನ್ನೊಡಲಲಿ ಮುಚ್ಚಿ, ಬೀರುವೆ ನಗೆಯ ತುಂಬಿದ ಬಾಳೆಯಲಿ ಮುಡುವ ಮಾತೆಯಂತೆ
ಮಮತೆಯ ಪರಿಯದು ಸುಡುವ ಬಿಸಿಲಿನ ಜಳಕೆ ಜಗ್ಗದೆ ಕುಗ್ಗದೆ ಹೊರ ಬರುವ ಹೊಂಬಾಳೆಯ ಮಿಂಚಂತೆ
ಹರಸುತ ಹರುಷದಲಿ ತನ್ನ ರಕ್ತದಮೃತ ಉಣಿಸಿ ಬೆಳೆಸುತ ಬಳಲಿರುವೆ ಜಗನ್ಮಾತೆ
ಸಹಿಸುತ ಎಲ್ಲಾ ದುಃಖ ದುಮ್ಮಾನಗಳ ನಗುವೆ ಅಗಲುರಾತ್ರಿ ನಿನಲ್ಲವೆ ಗೋಮಾತೆ
ತಾಯೆ ಏನಿದು ನಿನ್ನ ಮಾಯೆ ಈ ಜಗದೊಳೊ||
- ಮುಕಮಾಸು
No comments:
Post a Comment