Monday, 24 October 2016

ಸಮಯದ ನಿರ್ಧಾರ :-

ಸಮಯ ಮತ್ತು ಪರಿಸ್ಥಿತಿ ಎನ್ನುವುದು ಚಂಡಮಾರುತದ ಅಲೆಗಳಂತೆ, ಅಲೆಗಳ ಏರಿಳಿತಕ್ಕನುಸಾರವಾಗಿ ಈಜಿದವರು ದಡ ಸೇರುತ್ತಾರೆ, ಅಲೆಗಳೆದುರು ಈಜಲೊದವರು ಜೀವನದ ಗತಿಯಲ್ಲಿ ಕೊಚ್ಚಿ ಹೋಗುತ್ತಾರೆ. ಹಾಗೆಯೇ ಬದುಕಿನ ಪ್ರತಿ ನಡೆ ಮತ್ತು ನಿರ್ಧಾರ ಸ್ವಲ್ಪ ಸೂಕ್ಷ್ಮವಾಗಿರಲಿ, ಇಲ್ಲದಿದ್ದರೆ ಜೀವನವೆ ಚಂಡಮಾರುತವಾಗಿ ಮಾರ್ಪಾಡಾಗುತ್ತದೆ

:- ಮುಕಮಾಸು

Tuesday, 18 October 2016

ಜೀವನ :-

ಅತಿಯಾದ ಆಸೆಯಿಂದ ಸಿಗುವುದು ಕೇವಲ ನಿರಾಸೆ ಮತ್ತು ದುಃಖ,
ಅತಿಯಾದ ನಂಬಿಕೆಯಿಂದ ಸಿಗುವುದು ನೋವು ಮತ್ತು ಬೇಸರ,
ಅತಿಯಾದ ಪ್ರೀತಿಯಿಂದ ಸಿಗುವುದು ಮೋಸ ಮತ್ತು ವಂಚನೆ.
ಆಸೆ, ನಂಬಿಕೆ ಮತ್ತು ಪ್ರೀತಿ ಈ ಮೂರನ್ನು ಮಿತವಾಗಿ ಬಯಸುವುದು ಮತ್ತು ಬಳಸುವುದು ಸುಖಕರ ಜೀವನಕ್ಕೆ ನಾಂದಿ ಮತ್ತು ಬುನಾದಿ.

:- ಮುಕಮಾಸು

Monday, 17 October 2016

ನಗೆ :-

ಏನೆಂದು ಬಣ್ಣಿಸಲಿ ನಿನ್ನ ನಗುವ ಬಗೆ :-
ಅದ ನೋಡಲು ತಾಯಾಲು ಕುಡಿದ ಮಗುವಿನ ಉಲ್ಲಸದ ಹೂ ನಗೆ
ಕಂಡಾಗ ತಾಯಿಯ ಕರುವೊಂದು ನಿಮಿರಿ ಕೂಗಿ ಕುಣಿವ ನಗೆ
ಹೂ ತಾಕಿದ ದುಂಬಿಯ ಮನಸಿನಲಿ ಹರಿವ ಹರುಷದ ನಗೆ
ಕರೆದಾಗ ಹಾಲ ಕಂಚಿನ ಪಾತ್ರೆಯ ಕೋಳಲಿಂದ ಹೊಮ್ಮುವ ಜೇಂಕಾರದ ನಗೆ
ಗಾಳಿಯ ಕಲರವಕೆ ಮಂಜಾನೆ ಹೂ ಬೀರುವ ಮೋಹಕ ನಗೆ
ಅಲೆಯೊಂದು ಕಡಲ ದಡವ ಬಿಗಿದಪ್ಪುವ ಪ್ರೀತಿಯ ನಗೆ
ಇದರೆಲ್ಲರ ಸಮ್ಮಿಶ್ರಣವೆ ನಿ ನಗುವ ನಗೆಯ ಬಗೆ
ಗೆಳತಿ ಏನಂದು ಬಣ್ಣಿಸಲಿ ನಿನ್ನ ನಗುವ ಬಗೆ.🙂

:- ಮುಕಮಾಸು