ಏನೆಂದು ಬಣ್ಣಿಸಲಿ ನಿನ್ನ ನಗುವ ಬಗೆ :-
ಅದ ನೋಡಲು ತಾಯಾಲು ಕುಡಿದ ಮಗುವಿನ ಉಲ್ಲಸದ ಹೂ ನಗೆ
ಕಂಡಾಗ ತಾಯಿಯ ಕರುವೊಂದು ನಿಮಿರಿ ಕೂಗಿ ಕುಣಿವ ನಗೆ
ಹೂ ತಾಕಿದ ದುಂಬಿಯ ಮನಸಿನಲಿ ಹರಿವ ಹರುಷದ ನಗೆ
ಕರೆದಾಗ ಹಾಲ ಕಂಚಿನ ಪಾತ್ರೆಯ ಕೋಳಲಿಂದ ಹೊಮ್ಮುವ ಜೇಂಕಾರದ ನಗೆ
ಗಾಳಿಯ ಕಲರವಕೆ ಮಂಜಾನೆ ಹೂ ಬೀರುವ ಮೋಹಕ ನಗೆ
ಅಲೆಯೊಂದು ಕಡಲ ದಡವ ಬಿಗಿದಪ್ಪುವ ಪ್ರೀತಿಯ ನಗೆ
ಇದರೆಲ್ಲರ ಸಮ್ಮಿಶ್ರಣವೆ ನಿ ನಗುವ ನಗೆಯ ಬಗೆ
ಗೆಳತಿ ಏನಂದು ಬಣ್ಣಿಸಲಿ ನಿನ್ನ ನಗುವ ಬಗೆ.🙂
:- ಮುಕಮಾಸು
No comments:
Post a Comment