Thursday, 13 May 2021

ಅರ್ಥ:-

ಸಮಸ್ಯೆಗಳು ನಮಗೆ ಹೆಚ್ಚು ಹೆಚ್ಚು ಎದುರಾಗತ್ತಿರುವುದರ ಅರ್ಥ, ಆ ಪ್ರತಿ ಸಮಸ್ಯೆಗಳನ್ನು ಬಿಡಿಸಲು (ಎದುರಿಸಲು) ನಾವು ಸರಿಯಾದ ಸಮರ್ಥರು ಎಂದು.

✍️ ಮುಕಮಾಸು

Wednesday, 12 May 2021

ಕೋಪ - ಮೌನ

ಕೋಪ ಅರಿತವಾದ ಖಡ್ಗದಂತೆ, ಮೌನ ಅದನ್ನು ಬಂಧಿಸಿಡುವ ಕವಚದಂತೆ. 

✍️ ಮುಕಮಾಸು


Monday, 12 April 2021

ಯುಗಾದಿ

ಬೆಲ್ಲ-ಬೇವು, ನಾನು-ನೀನು, ಯಾರೇ ಆದರು ನಿತ್ಯ ಯುಗಾದಿಯೇ !?

✍️ಮುಕಮಾಸು

Wednesday, 24 March 2021

Thursday, 16 July 2020

ಎಷ್ಟು ಸರಿ:-

ಸುರಿವ ಮಳೆಗೆ ಮೈಯನೊಡ್ಡಿ, ಮಿಂದಮೇಲೆ ಬಂದ ಜ್ವರಕೆ, ಮಳೆಯ ದೂರುವುದೇಷ್ಟು ಸರಿ ...? 
ಹರಿವ ನದಿಯ ಅಡ್ಡಗಟ್ಟಿ, ಪಡೆದ ನೀರ ಕೊಚ್ಚೆ ಮಾಡಿ, ಮರಳಿ ನದಿಗೆ ಹರಿಸುವುದೇಷ್ಟು ಸರಿ ...?
ಚಂದದ ನೆನ್ನೆಯ ಹಣಕೆ ಮಾರಿ, ಇಂದು ಮಾರಿಯಂತ ರೋಗ ಕೊಂಡು, ನಾಳೆಯ ಬೈವುದೇಷ್ಟು ಸರಿ...?
ಕೂಡಿಬಾಳಿ ಸುಖವ ಪಡದೆ, ಸಿಗದ ಸುಖದ ಮರಿಚೆಕೆಗೆ ಅಲೆದು, ಲೋಕವ ಅಣಕಿಸುವುದೇಷ್ಟು ಸರಿ...?

✍️ ಮುಕಮಾಸು
 

Wednesday, 15 July 2020

ರೈತರು

ಕಾಸು ಕೊಟ್ಟು ಅರಿದ ಬಟ್ಟೆಯನು ಕೋಳ್ಳುವ ನಾವು ಮೂರ್ಖರು
ಅರುಕಲು ಬಟ್ಟೆಯನು ತೊಟ್ಟು ದೇಶಕ್ಕಾಗಿ ದುಡಿಯುವವರು ರೈತರು.

ನೀತಿ ನಿಯಮಗಳನು ಗಾಳಿಗೆ ತೂರಿ ಬಾಳುವ ನಾವು  ಅಧಮರು
ರೀತಿ ನೀತಿಗಳ ಕಾನೂನಿನ ಬಿರುಗಾಳಿಗೆ ಸಿಲುಕಿ ನಲುಗುತಿರುವ ದೈವ ರೈತರು.

ಹಣ,ಆಸ್ತಿ, ಸಂಪಾದನೆಯೆ ಗುರಿ ಎಂಬ ಬ್ರಮೆಯಲಿ ಬಾಳುವ ನಾವು  ಅಂಧರು
ಹಣದ ಚಿಂತೆ ಬಿಟ್ಟು ಮುರುಕಲು ಆಸ್ತಿಯಲಿ ಲೋಕಕೆ ಅನ್ನ ನೀಡುವ ಧನಿಕರು ರೈತರು.

✍️ಮುಕಮಾಸು

Thursday, 9 July 2020

ಪರಿಸ್ಥಿತಿಯ - ಮನಸ್ಥಿತಿ

ನಾವು ತೆಗೆದುಕೋಳ್ಳುವ ಪ್ರತಿ ನಿರ್ಧಾರ ಪರಿಸ್ಥಿತಿಗೆ ಅನುಗುಣವಾಗಿರಬೇಕೆ ಹೊರತು ಮನಸ್ಥಿತಿಗಲ್ಲ, ಯಾಕೆಂದ್ರೆ ಪರಿಸ್ಥಿತಿಗೆ ಮನಸ್ಥಿಯನ್ನ ಬದಲಾಯಿಸೊ ಶಕ್ತಿ ಇರುತ್ತದೆ.

✍️ಮುಕಮಾಸು