Thursday, 16 July 2020

ಎಷ್ಟು ಸರಿ:-

ಸುರಿವ ಮಳೆಗೆ ಮೈಯನೊಡ್ಡಿ, ಮಿಂದಮೇಲೆ ಬಂದ ಜ್ವರಕೆ, ಮಳೆಯ ದೂರುವುದೇಷ್ಟು ಸರಿ ...? 
ಹರಿವ ನದಿಯ ಅಡ್ಡಗಟ್ಟಿ, ಪಡೆದ ನೀರ ಕೊಚ್ಚೆ ಮಾಡಿ, ಮರಳಿ ನದಿಗೆ ಹರಿಸುವುದೇಷ್ಟು ಸರಿ ...?
ಚಂದದ ನೆನ್ನೆಯ ಹಣಕೆ ಮಾರಿ, ಇಂದು ಮಾರಿಯಂತ ರೋಗ ಕೊಂಡು, ನಾಳೆಯ ಬೈವುದೇಷ್ಟು ಸರಿ...?
ಕೂಡಿಬಾಳಿ ಸುಖವ ಪಡದೆ, ಸಿಗದ ಸುಖದ ಮರಿಚೆಕೆಗೆ ಅಲೆದು, ಲೋಕವ ಅಣಕಿಸುವುದೇಷ್ಟು ಸರಿ...?

✍️ ಮುಕಮಾಸು
 

No comments:

Post a Comment