ಕಾಸು ಕೊಟ್ಟು ಅರಿದ ಬಟ್ಟೆಯನು ಕೋಳ್ಳುವ ನಾವು ಮೂರ್ಖರು
ಅರುಕಲು ಬಟ್ಟೆಯನು ತೊಟ್ಟು ದೇಶಕ್ಕಾಗಿ ದುಡಿಯುವವರು ರೈತರು.
ನೀತಿ ನಿಯಮಗಳನು ಗಾಳಿಗೆ ತೂರಿ ಬಾಳುವ ನಾವು ಅಧಮರು
ರೀತಿ ನೀತಿಗಳ ಕಾನೂನಿನ ಬಿರುಗಾಳಿಗೆ ಸಿಲುಕಿ ನಲುಗುತಿರುವ ದೈವ ರೈತರು.
ಹಣ,ಆಸ್ತಿ, ಸಂಪಾದನೆಯೆ ಗುರಿ ಎಂಬ ಬ್ರಮೆಯಲಿ ಬಾಳುವ ನಾವು ಅಂಧರು
ಹಣದ ಚಿಂತೆ ಬಿಟ್ಟು ಮುರುಕಲು ಆಸ್ತಿಯಲಿ ಲೋಕಕೆ ಅನ್ನ ನೀಡುವ ಧನಿಕರು ರೈತರು.
✍️ಮುಕಮಾಸು
No comments:
Post a Comment