Thursday, 29 October 2015

ಮೀನಿನ ಜೀವ

ಒದ್ದಾಡುತಿದೆ ಜೀವ ದಡದಲಿ ಬಿದ್ದ ಮೀನಿನ ಹಾಗೆ
ಗುದ್ದಾಡುತಿದೆ ದೇಹ ಸಾವು ಬದುಕಿನ ನಡುವೆ ಅಸುಗುಸಿನಾಗೆ.
ಶಕ್ತಿಯಿಲ್ಲ ಮನಸಿಗೆ ಅನುಭವಿಸಲು ನೋವಿನ ಸಡಗರ
ಹಟವೆಕೆ ಒಲವೆ ನಿನಗೆ, ಕಾಡಿಸಲು ನನ್ನ ಈ ಹೊಸ ತರ.

- ಮಕಮಾಸು

Sunday, 25 October 2015

ಕಣ್ಣಿನ ಮಾತು

ಕಣ್ಣಿನಲಿ ಮೌನದ ಸಂವಾದ
ಕನಸಿನಲಿ ಮುಗಿಯದ ವಾಗ್ವಾದ
ಮಾತಿನಲಿ ನವಿರಾದ ಹೂಗಂಧ
ಪ್ರೀತಿಯಲಿ ಅರಿಯದ ಮಕರಂದ
ಅನುಭವಿಸಲೆಂದೆ ಬದುಕಿರುವೆ ನಾ ನಿನ್ನಿಂದ.
- ಮುಕಮಾಸು

ಕತ್ತಲೆಯ ಬೆಳಕು

ಕತ್ತಲಲಿ ಸಾಗಿದೆ ಮನ, ಸುತ್ತೆಲ್ಲ ಸುಂದರ ಬೆಳಕಿದ್ದರು
ನಗುತಿದೆ ಮೈಮನ, ಎದೆಯಲಿ ಸಾವಿರ ನೋವಿದ್ದರು.
ಬದುಕುತಿದೆ ಜೀವನ ಸತ್ತಕನಸುಗಳ ಸಂತೆಯಲಿ
ಸಾಯುತಿದೆ ದಿನ ಆಸೆಯಿರದ ಈ ಬದುಕಿನಲಿ.
- ಮುಕಮಾಸು

Thursday, 15 October 2015

ಮನಸಿನ ಮಾತು

ಏ ತಂಗಾಳಿ ತುಸು ಜೋರು ನೀ ಬಿಸು, ನನ್ನೋಳ ಮುಂಗುರುಳು ಗರಿ ಬಿಚ್ಚುವಂತೆ.
ಎಳೆ ಗರಿಕೆ ನೀನು ಸಂಪಾಗಿ ಬೆಳೆದು ನಿಲ್ಲು,  ನನ್ನೋಳ ಪಾದಗಳಿಗೆ ಮುದನಿಡುವಂತೆ.
ಏ ಸೂರ್ಯ ಕಣ್ಮುಚ್ಚಿ ನೀ ಕೂರು, ನನ್ನಾಕೆ ನೋಡಿ ನಗದೆಲೆನೆ.
ಹೊಂಬಿಸಿಲ ನೀ ಚೆಲ್ಲು ನನ್ನೋಳು ಬರುವಾಗ ತುಸು ಮೆಲ್ಲನೆ.
ಏ ಮೊಡ ಮೈದುಂಬಿ ಓಲವಿನ ಮಳೆ ನೀ ಸುರಿಸು, ಚಲುವಿನ ಕೊಡೆ ನಾನಿಡಿಯಲು.
ಏ ಮಳೆಯೇ ನಿನಗೆಷ್ಟು ದೈರ್ಯ ನನ್ನೋಳ ಕೆನ್ನೆಗೆ ಮುತ್ತಿಡಲು ನಾ ಎದುರು ಎದುರಾಗಲು.
- ಮುಕಮಾಸು