ಹೆಣ್ಣೆ ನೀನೇನಾ ಒಲವ ಹೊಂಬೆಳಕು ನನ್ನ ಹೃದಯದ ಮನೆಗೆ
ಕಣ್ಣೆ ನಿನ್ನಿಂದ ಕನಸ ಸಂಚಾರ ಪ್ರೀತಿ ಉಸಿರಿನ ಜೋತೆಗೆ
ಅಂದದ ತೋಟಕೆ, ರೋಜ ಹೂ ಚಂದ
ಈ ಜೀವ ಬದುಕಿದೆ, ನಿನ್ನ ನೆನಪಿಂದ
ಆಸೆಗಳ ಪೂರೈಸಲು ಬಾರೆ
ಹೆಣ್ಣೆ ನೀನೇನಾ ಒಲವ ಉಯ್ಯಾಲೆ ನನ್ನ ಹೃದಯದ ಮನೆಗೆ ||
ನೆನಪಿನ ಹಕ್ಕಿಗಳು ರೆಕ್ಕೆ ಬಿಚ್ಚಿ ಹಾರಿದೆ
ಬಾನಿನ ದಾರಿಲಿ ಪ್ರೀತಿಗಾಗಿ ಕಾದಿದೆ
ಚಲುವಿನ ಮನೆಯನು ಗಾಳಿಯಲಿ ಕಟ್ಟುತ
ಪ್ರೀತಿಯ ಶಿಖರವ ಮತ್ತೆ ಮತ್ತೆ ಮುಟ್ಟುತ
ಇರವೆಯ ಗೂಡಿಗೆ, ಸಕ್ಕರೆ ಸವಿಯಂತೆ
ಇರುವೆಯ ನನ್ನಲಿ, ಧಮನಿಯ ನುಡಿಯಂತೆ
ಈ ಮನಸನು, ಸಂತೈಸಲು ಬಾರೆ
ಹೆಣ್ಣೆ ನೀನೇನಾ ಒಲವ ಉಯ್ಯಾಲೆ ನನ್ನ ಹೃದಯದ ಮನೆಗೆ||
ತಂಪು ತಂಪು ಚಳಿಯಲು ಬೆವರಿದೆ ಈ ಮನ
ನಿನ್ನ ಉಸಿರ ಶಾಖವು ಮರಳಿ ಬಂದು ಅನುದಿನ
ಕಣ್ಣ ಮುಚ್ಚಿ ಕುಳಿತರು ನೀನೆ ಎದುರು ಬಂದಂತೆ
ಸಮಯವು ಕೆಲಸಕೆ ರಜೆ ಹಾಕಿ ನಿಂತಂತೆ
ಆ ರತಿಯಂತೆ ಧರೆಗಿಳಿ ನೀನು
ಆರತಿಯಾಗಿ ಬೆಳಗುವೆ ನಾನು
ಮುಂಗಾರಿನ, ಮಿಂಚಂತೆ ನಿ ಬಾರೆ
ಹೆಣ್ಣೆ ನೀನೇನಾ ಒಲವ ಉಯ್ಯಾಲೆ ನನ್ನ ಹೃದಯದ ಮನೆಗೆ ||
✍
ಮಕಮಾಸು
No comments:
Post a Comment