Wednesday, 8 May 2019

ನೆನಪು:-

ಬತ್ತಿ ಹೋಗದಂತ ತುಂಬು ತೋರೆ ನಿನ್ನ ನೆನಪಿನ ಬುತ್ತಿ
ಮರಳುತಿವೆ ಮನದ ಮೌನ ಬೆಗುದಿ ಬಾರದಂತೆ ಯಾವ ಚುತಿ.
ಬಿಟ್ಟು ಹೋಗು ನನ್ನ, ಕೊಟ್ಟ ಮಾತಿಗೆ ತೆತ್ತಿರುವೆ ನೋವಿನ ದಂಡ
ಅಳೆಯಲು ಈ ಸರಿತಪ್ಪುಗಳ ಕಾಲವೆಂಬುದೆ ಮಾನದಂಡ.

✍️ ಮುಕಮಾಸು

Sunday, 24 March 2019

ಹರುಷ

ಬೇಕುಗಳ ಬಿಟ್ಟು ದುರಾಸೆಗಳ ಕಟ್ಟೀಹಿಡು ಅದೇ ಹರುಷದ ರುವಾರಿ.

✍️ - ಮುಕಮಾಸು

Sunday, 24 February 2019

ನೀನು :-

ಕರಿಯುಬ್ಬ ಕಾನನ ಕಣ್ಣಮೇಲೆ, ಕಾವೇರಿ ನದಿಯ ಪಾತ್ರದಂತೆ
ಕಾರುಣ್ಯದ ಹಾಲ್ಬೆಳಕು ಕಣ್ಣಲಿ, ಕಡಲುಣ್ಣಿಮೆಯ ಚಂದ್ರನಂತ
ಕನ್ನೆಗಳು ಮಿರುಗುತಿವೆ ಇಬ್ಬನಿಯಲಿ ಮಿಂದೆದ್ದ ಬ್ರಹ್ಮಕಮಲದಂತೆ
ಒಟ್ಟಾರೆ ನಿನೊಂದು ಹೇಳಿ ಮಾಡಿಸಿದ ಮಾಹ ನದಿಗಳ ಮೈತ್ರಿಯಂತೆ

✍️ - ಮುಕಮಾಸು

Friday, 15 February 2019

ಜೀವನ ಸತ್ಯ:

ಶರಾಣಗತಿ ಅಸಹಾಯಕತೆಯಲ್ಲ
ಅತಿಕ್ರಮಣ ವಿಜಯವಲ್ಲ
ಸೋಲೇ ಜೀವನವಲ್ಲ
ಸ್ವಾರ್ಥ ಬದುಕಲ್ಲ.

✍️ - ಮುಕಮಾಸು

Monday, 28 January 2019

ಸಿಹಿಜೇನ ಭಾವ:

ಅರಳು ಮಲ್ಲಿಗೆಯ ಅರಸಿ ಬಂದ ಹರಯದ ದುಂಬಿ ನಾ
ನಿನ್ನ ರೂಪ ರಾಶಿ ಮೋಹದ ಬಲೆಗೆ ಸಿಕ್ಕ ಜೇಡರವು ನಾ.
ಸುರುಳಿಯಾಕಾರದ ಮುಂಗುರುಳ ಕಂಡು ಮಂಕಾಗಿದೆ ನೋಟ
ಚಂದುಟಿಯ ಬಯಲಲಿ ಆಡಬಯಸಿದೆ ಅಧರ ಅದರದೆ ಆಟ.
ಮುಗ್ಧ ಮನಸಿನ ಮುದ್ದು ಮಾತು ಕೇಳಲು ಕಾದಿದೆ ಜೀವ
ಕಾದ ಮನಕೆ ಹರಿಸು ಬಾ ನಿನ್ನೋಲವ ಬೆರಸಿ ಸಿಹಿಜೇನ ಭಾವ.

✍️ - ಮುಕಮಾಸು

Thursday, 24 January 2019

ಜೈ ಭುವನೇಶ್ವರಿ:

ಜಗವೆ ಹಗೆಯಾಗಲಿ, ಯುಗವೆ ಕೊನೆಯಾಗಲಿ
ಹಿಮ ಪರ್ವತ ಕರಗಿ ಹರಿಯಲಿ, ಲಾವ ಮುಗಿಲು ಮುಟ್ಟಲಿ
ಸಪ್ತ ಸ್ವರವೆ ರಾ‌‌ಗವ ಮರೆಯಲಿ , ಸುಪ್ತ ಸಾಗರವೆ ಉಕ್ಕಿ ಹರಿಯಲಿ
ಸೂರ್ಯ ಧರೆಯ ತೊರೆಯಲಿ, ಚಂದ್ರ ಉರಿದು ಬಿಳಲಿ
ಉಸಿರೆ ದೇಹವ ಕೊಲ್ಲಲಿ, ಹಸಿರೆ ಭೂಮಿಯ ಸುಡಲಿ
ಓ ತಾಯೇ, ಮಹಾನ್ ದಾತೆ, ನೀ ಶಾಂತಿಯ ತೋರೆಯದೆ ಜಗದೆಲ್ಲ ಸಕಲ ಜೀವವ ಕಾಪಾಡು ಭುವನೇಶ್ವರಿ ಮಾತೆ.

✍️ -ಮುಕಮಾಸು

Wednesday, 23 January 2019

ಶುಭ ಸೂಚನೆ:

"ನೀವು ಜೀವನದಲ್ಲಿ ಒಳ್ಳೆಯದನ್ನು ಕಳೆದುಕೊಳ್ಳುತ್ತಿದ್ದರೆ,
ಅದು ಅತ್ಯುತ್ತಮವಾದುದನ್ನು ಪಡೆಯುವ ಮುನ್ಸೂಚನೆ.".

✍️ - ಮುಕಮಾಸು.

Tuesday, 22 January 2019

ಪ್ರೀತಿ ಬೇಸಾಯ:

ಕಣ್ಣ ಹನಿಯೊಂದು ಕಾದು ಕುಳಿತಿದೆ ಹುಡುಕುತ ದಾರಿ ಜಾರಿಬಿಡಲು
ಕೆನ್ನೆಗಳು ಅರಳುತಿವೆ ಬಿಡದಂತೆ ಕಂಬನಿಗೆ ದಾರಿ ನಿನ್ನ ನೆನೆಯಲು.
ಮನದ ಹೊಲದಲಿ ಮಾಡಬಯಸಿದೆ ಪ್ರೀತಿ ಬೇಸಾಯ
ನಗುವ ನೀರ್ಚಲ್ಲಿ ಸಹಕರಿಸು ಬಾ ಮಾಡಲು ಒಲವ ಕಸಿಯ.

✍️ - ಮುಕಮಾಸು.

Friday, 18 January 2019

ಒಲವಿನ ಬಲೆ:

ಒಲವಿನ ಬಲೆಯ ಎಣೆದಿದೆ ಮನಸು ಸಾವಿರ ಕನಸಿನ ದಾರದಲಿ.
ತಿಳಿಯದ ನಾಳೆಯ ಕಂಡು, ಬೀಗಿದೆ ಮನಸು ಪ್ರೀತಿಯಲಿ..
ಎಣೆದ ಬಲೆಯೆ ಕೊಲ್ಲುವ ಹುರುಳಾಗಿ ಸುತ್ತುತಿದೆ ಕೊರಳಿನಲಿ
ಅರಿಯದೆ ಹೊಯಿತೆ ಮನಕೆ ಸಿಲುಕುವ ಮುನ್ನ ಈ ಒಲವಿನ ಬಲೆಯಲಿ.

✍️
- ಮುಕಮಾಸು

Thursday, 17 January 2019

ದಡವಿಲ್ಲದ ಕಡಲು ಈ ಪ್ರೀತಿ

ದಡವಿಲ್ಲದ ಕಡಲಿಗೆ ಈಜಲಿಳಿದ ಪ್ರೇಮಿ ನಾನು
ಸುಳಿವಿಲ್ಲದೆ ಬಂದು ಹೋಗೋ ಮಾಯ ಮೀನು ನೀನು
ತುಂಬ ದಿನದಿಂದ ಕಾದಿರುವೆ ಮನದ ಬಾಯ್ತೆರೆದು ಚಿಪ್ಪಿನಂತೆ
ದಣಿದ ಮನಕೆ ನೀರೆರೆಯುವೆಯ ನೀರೆ ಪ್ರೀತಿ ಸ್ವಾತಿಮುತ್ತಿನಂತೆ.

✍️ ಮುಕಮಾಸು