ಜಗವೆ ಹಗೆಯಾಗಲಿ, ಯುಗವೆ ಕೊನೆಯಾಗಲಿ
ಹಿಮ ಪರ್ವತ ಕರಗಿ ಹರಿಯಲಿ, ಲಾವ ಮುಗಿಲು ಮುಟ್ಟಲಿ
ಸಪ್ತ ಸ್ವರವೆ ರಾಗವ ಮರೆಯಲಿ , ಸುಪ್ತ ಸಾಗರವೆ ಉಕ್ಕಿ ಹರಿಯಲಿ
ಸೂರ್ಯ ಧರೆಯ ತೊರೆಯಲಿ, ಚಂದ್ರ ಉರಿದು ಬಿಳಲಿ
ಉಸಿರೆ ದೇಹವ ಕೊಲ್ಲಲಿ, ಹಸಿರೆ ಭೂಮಿಯ ಸುಡಲಿ
ಓ ತಾಯೇ, ಮಹಾನ್ ದಾತೆ, ನೀ ಶಾಂತಿಯ ತೋರೆಯದೆ ಜಗದೆಲ್ಲ ಸಕಲ ಜೀವವ ಕಾಪಾಡು ಭುವನೇಶ್ವರಿ ಮಾತೆ.
✍️ -ಮುಕಮಾಸು
No comments:
Post a Comment