Thursday, 16 July 2020

ಎಷ್ಟು ಸರಿ:-

ಸುರಿವ ಮಳೆಗೆ ಮೈಯನೊಡ್ಡಿ, ಮಿಂದಮೇಲೆ ಬಂದ ಜ್ವರಕೆ, ಮಳೆಯ ದೂರುವುದೇಷ್ಟು ಸರಿ ...? 
ಹರಿವ ನದಿಯ ಅಡ್ಡಗಟ್ಟಿ, ಪಡೆದ ನೀರ ಕೊಚ್ಚೆ ಮಾಡಿ, ಮರಳಿ ನದಿಗೆ ಹರಿಸುವುದೇಷ್ಟು ಸರಿ ...?
ಚಂದದ ನೆನ್ನೆಯ ಹಣಕೆ ಮಾರಿ, ಇಂದು ಮಾರಿಯಂತ ರೋಗ ಕೊಂಡು, ನಾಳೆಯ ಬೈವುದೇಷ್ಟು ಸರಿ...?
ಕೂಡಿಬಾಳಿ ಸುಖವ ಪಡದೆ, ಸಿಗದ ಸುಖದ ಮರಿಚೆಕೆಗೆ ಅಲೆದು, ಲೋಕವ ಅಣಕಿಸುವುದೇಷ್ಟು ಸರಿ...?

✍️ ಮುಕಮಾಸು
 

Wednesday, 15 July 2020

ರೈತರು

ಕಾಸು ಕೊಟ್ಟು ಅರಿದ ಬಟ್ಟೆಯನು ಕೋಳ್ಳುವ ನಾವು ಮೂರ್ಖರು
ಅರುಕಲು ಬಟ್ಟೆಯನು ತೊಟ್ಟು ದೇಶಕ್ಕಾಗಿ ದುಡಿಯುವವರು ರೈತರು.

ನೀತಿ ನಿಯಮಗಳನು ಗಾಳಿಗೆ ತೂರಿ ಬಾಳುವ ನಾವು  ಅಧಮರು
ರೀತಿ ನೀತಿಗಳ ಕಾನೂನಿನ ಬಿರುಗಾಳಿಗೆ ಸಿಲುಕಿ ನಲುಗುತಿರುವ ದೈವ ರೈತರು.

ಹಣ,ಆಸ್ತಿ, ಸಂಪಾದನೆಯೆ ಗುರಿ ಎಂಬ ಬ್ರಮೆಯಲಿ ಬಾಳುವ ನಾವು  ಅಂಧರು
ಹಣದ ಚಿಂತೆ ಬಿಟ್ಟು ಮುರುಕಲು ಆಸ್ತಿಯಲಿ ಲೋಕಕೆ ಅನ್ನ ನೀಡುವ ಧನಿಕರು ರೈತರು.

✍️ಮುಕಮಾಸು

Thursday, 9 July 2020

ಪರಿಸ್ಥಿತಿಯ - ಮನಸ್ಥಿತಿ

ನಾವು ತೆಗೆದುಕೋಳ್ಳುವ ಪ್ರತಿ ನಿರ್ಧಾರ ಪರಿಸ್ಥಿತಿಗೆ ಅನುಗುಣವಾಗಿರಬೇಕೆ ಹೊರತು ಮನಸ್ಥಿತಿಗಲ್ಲ, ಯಾಕೆಂದ್ರೆ ಪರಿಸ್ಥಿತಿಗೆ ಮನಸ್ಥಿಯನ್ನ ಬದಲಾಯಿಸೊ ಶಕ್ತಿ ಇರುತ್ತದೆ.

✍️ಮುಕಮಾಸು

Wednesday, 8 July 2020

ಜೀವನ:-

ಸತ್ತ ನೆನ್ನಗಳ ಬಿಟ್ಟು, 
ಹುಟ್ಟಿರದ ನಾಳೆಗಳ ಪಕ್ಕಕ್ಕೆ ಇಟ್ಟು, 
ಹುಟ್ಟಿ ಸಾಯುತಿರುವ ಇಂದು, 
ಸತ್ತಮೇಲು ಬದುಕುವ ಅಣಿ ಮುತ್ತಿನ ಬರವಣಿಗೆಯಾಗಬೇಕು ಜೀವನ.

✍️ ಮುಕಮಾಸು