ಏ ತಂಗಾಳಿ ತುಸು ಜೋರು ನೀ ಬಿಸು, ನನ್ನೋಳ ಮುಂಗುರುಳು ಗರಿ ಬಿಚ್ಚುವಂತೆ.
ಎಳೆ ಗರಿಕೆ ನೀನು ಸಂಪಾಗಿ ಬೆಳೆದು ನಿಲ್ಲು, ನನ್ನೋಳ ಪಾದಗಳಿಗೆ ಮುದನಿಡುವಂತೆ.
ಏ ಸೂರ್ಯ ಕಣ್ಮುಚ್ಚಿ ನೀ ಕೂರು, ನನ್ನಾಕೆ ನೋಡಿ ನಗದೆಲೆನೆ.
ಹೊಂಬಿಸಿಲ ನೀ ಚೆಲ್ಲು ನನ್ನೋಳು ಬರುವಾಗ ತುಸು ಮೆಲ್ಲನೆ.
ಏ ಮೊಡ ಮೈದುಂಬಿ ಓಲವಿನ ಮಳೆ ನೀ ಸುರಿಸು, ಚಲುವಿನ ಕೊಡೆ ನಾನಿಡಿಯಲು.
ಏ ಮಳೆಯೇ ನಿನಗೆಷ್ಟು ದೈರ್ಯ ನನ್ನೋಳ ಕೆನ್ನೆಗೆ ಮುತ್ತಿಡಲು ನಾ ಎದುರು ಎದುರಾಗಲು.
- ಮುಕಮಾಸು
ಕಣ್ಣಿನ ಮಾತು
ReplyDeleteಕಣ್ಣಿನಲಿ ಮೌನದ ಸಂವಾದ
ಕನಸಿನಲಿ ಮುಗಿಯದ ವಾಗ್ವಾದ
ಮಾತಿನಲಿ ನವಿರಾದ ಹೂಗಂಧ
ಪ್ರೀತಿಯಲಿ ಅರಿಯದ ಮಕರಂದ
ಅನುಭವಿಸಲೆಂದೆ ಬದುಕಿರುವೆ ನಾ ನಿನ್ನಿಂದ.
- ಮುಕಮಾಸು