Wednesday, 18 November 2015

ಕಣ್ಗನ್ನಡಿ

ಮಳೆಯದು ಒಂದೆ ಹಟ ನೆನೆಯಲು ಭೂಮಿ, ಹೊದಿಸುವುದು ಸೊನೆಯ ಮುತ್ತಿನೊದಿಕೆ
ಭೂಮಿಯದು ತಿರದ ಚಟ ಅತಿಯಾಗಿರಲು ಮಳೆಯ ಒಲವಿನೂಟ, ಬಯಸುವುದು ಸೂರ್ಯನ ಸನಿಹಕೆ.
ಮಿಂಚೊಂದು ಮಿಂಚಿ ನೋಡಬಯಸಿದೆ ತನ್ನ ಬಿಂಬ, ಸುರಿಮಳೆಯ ಸೂರಿನಡಿ
ಮನವು ಕಾದು ಕಾಣಬಯಸಿದೆ ತನ್ನ ಪ್ರತಿಬಿಂಬವ, ಚುಂಬಿಸಿ ನಿನ್ನ ಕಣ್ಗನ್ನಡಿ.

- ಮುಕಮಾಸು

Friday, 13 November 2015

ಜೀವನ

ಬದುಕಿನಲ್ಲಿ ಯೋಜನೆ & ಯೋಚನೆ ಇರಬೇಕು
ಆದರೆ ಯೋಚನೆಯಲ್ಲಿ ಬದುಕಿರಬಾರದು.
ಕಲಿತು ನಾ ಬದುಕುವುದು ಜೀವನ
ಬದುಕಿ ಇತರರಿಗೆ ಕಲಿಸುವುದೆ ಸನ್ಮಾನ.

- ಮುಕಮಾಸು

Tuesday, 10 November 2015

ದೀಪಾವಳಿ ಶುಭಾಶಯಗಳು

ದೀಪಗಳ ಹಾವಳಿ ಸದಾ ನಮ್ಮ ಬಾಳಲಿ
ಚಲ್ಲುತಲಿರಲಿ ಹೊಂಬೆಳಕ ಸುಧೆ ಒಲವಲಿ.
ಲಕ್ಷ್ಮಿಯ ಕೃಪೆ ಇರಲಿ ಒಲಿಯುವಂತೆ ರಾಶಿ ರಾಶಿ ಧನ ಕನಕ
ಪ್ರೀತಿಯ ಬೆಳ್ಳಿ ನಗುವಿನ ಗೆಲುವಿರಲಿ ಬಾಳಿನ ಕೊನೆತನಕ.

- ಮುಕಮಾಸು

Sunday, 8 November 2015

ಭರವಸೆಯ ಬೆಳಕು

ಕತ್ತಲಾಯಿತೆಂದು ಅಳುತ್ತಾ ಕುಳಿತರೆ, ಚಂದ್ರನ ಬೆಳದಿಂಗಳನ್ನು ನೋಡುವ ಭಾಗ್ಯವನೆ ಕಳೆದುಕೊಳ್ಳುತ್ತೇವೆ.

- ಮುಕಮಾಸು

Tuesday, 3 November 2015

ಚಂದ್ರನ ಬೆಳಕು

ಕತ್ತಲಾಯಿತೆಂದು ಅಳುತ್ತಾ ಕುಳಿತರೆ, ಚಂದ್ರನ ಬೆಳದಿಂಗಳನ್ನು ನೋಡುವ ಭಾಗ್ಯವನೆ ಕಳೆದುಕೊಳ್ಳುತ್ತೇವೆ.

- ಮುಕಮಾಸು

Monday, 2 November 2015

ನೀನು

ನೀನು ಮಗುವಂತೆ, ಹಾಲ್ಗೆನ್ನೆ ನಗುವಂತೆ
ನೀನು ಕನ್ನಡಿಯಂತೆ, ನನ್ನ ಪ್ರತಿರೂಪವಂತೆ
ನೀನು ನಗುವಂತೆ, ತುಂಬಿಬರುವ ಅಲೆಯಂತೆ
ನೀನು ಕಣ್ಣಂತೆ, ಕಂಬನಿಯ ಮೂಲವಂತೆ
ನೀನು ಹೂವಂತೆ, ಬಿರಿದಾಗ ಸೊಗಸಂತೆ
ನೀನು ಕಡಲಂತೆ, ಮುತ್ತಿನ ರಾಶಿಯಂತೆ
ಬರಿ ಅಂತೆ, ಕಂತೆ, ಚಿಂತೆಗಳೆ, ತುಂಬಿರುವ ಈ ಸಂತೆಯಲಿ
ನೀನು, ನೀನಿಲ್ಲದ ನಾನು, ನನೀಲ್ಲದ ಈ ಬದುಕು,
ಕಾರ್ಮೊಡದ ಕತ್ತಲಲಿ ಹುಚ್ಚೆದ್ದು ಕುಣಿವ ಹೊಂಬೆಳಕಿನ ಮಿಂಚೆಂಬ ಮರಿಚಿಕೆಯನು ಹಿಡಿಯಲೊರಟ ಬೇಟೆಗಾರನಂತೆ.

- ಮುಕಮಾಸು

Sunday, 1 November 2015

ಉಪ್ಪು ಮತ್ತು ದುಡ್ಡು -

"ಉಪ್ಪು" ಉಟದ ರುಚಿಯಲ್ಲಿ ಬಹುಮುಖ್ಯ ಪಾತ್ರವನ್ನ ವಹಿಸುತ್ತದೆ, ಹಾಗಂತ ಬರಿ ಉಪ್ಪನ್ನ ತಿಂದು ನಮ್ಮ ಉಟದ ರುಚಿಯನ್ನ ಅನುಭವಿಸಲಗುವುದಿಲ್ಲ.
ಹಾಗೆಯೇ "ದುಡ್ಡು" ಪ್ರತಿಯೂಬ್ಬರ ಜೀವನದಲ್ಲಿ ಬಹುಮುಖ್ಯ ಪಾತ್ರವನ್ನ ವಹಿಸುತ್ತದೆ ಆದ್ರೆ ದುಡ್ಡೇ ಜೀವನವಲ್ಲ.....!!!!
ಜೀವನದ ಪ್ರತಿ ಅಂತದಲ್ಲಿ ದುಡ್ಡು ಬೇಕು ನಿಜ ಹಾಗಂತ ಪ್ರತಿ ದಿನ ಸಿಗೋ ಪ್ರತಿ ಕ್ಷಣನ, ನಮ್ಮ ಅತ್ತಿರದವರ ಪ್ರೀತಿ ಹಾಗು ನಂಬಿಕೆನ ಡುಡ್ಡಿಗಾಗಿ ಮಿಸ್ ಮತ್ತು ಮಿಸ್ಯುಸ್  ಮಾಡ್ಕೊಳ್ಳೋದು ಎಷ್ಟು ಸರಿ.....?

- ಮುಕಮಾಸು