Wednesday, 18 November 2015

ಕಣ್ಗನ್ನಡಿ

ಮಳೆಯದು ಒಂದೆ ಹಟ ನೆನೆಯಲು ಭೂಮಿ, ಹೊದಿಸುವುದು ಸೊನೆಯ ಮುತ್ತಿನೊದಿಕೆ
ಭೂಮಿಯದು ತಿರದ ಚಟ ಅತಿಯಾಗಿರಲು ಮಳೆಯ ಒಲವಿನೂಟ, ಬಯಸುವುದು ಸೂರ್ಯನ ಸನಿಹಕೆ.
ಮಿಂಚೊಂದು ಮಿಂಚಿ ನೋಡಬಯಸಿದೆ ತನ್ನ ಬಿಂಬ, ಸುರಿಮಳೆಯ ಸೂರಿನಡಿ
ಮನವು ಕಾದು ಕಾಣಬಯಸಿದೆ ತನ್ನ ಪ್ರತಿಬಿಂಬವ, ಚುಂಬಿಸಿ ನಿನ್ನ ಕಣ್ಗನ್ನಡಿ.

- ಮುಕಮಾಸು

No comments:

Post a Comment