Monday, 2 November 2015

ನೀನು

ನೀನು ಮಗುವಂತೆ, ಹಾಲ್ಗೆನ್ನೆ ನಗುವಂತೆ
ನೀನು ಕನ್ನಡಿಯಂತೆ, ನನ್ನ ಪ್ರತಿರೂಪವಂತೆ
ನೀನು ನಗುವಂತೆ, ತುಂಬಿಬರುವ ಅಲೆಯಂತೆ
ನೀನು ಕಣ್ಣಂತೆ, ಕಂಬನಿಯ ಮೂಲವಂತೆ
ನೀನು ಹೂವಂತೆ, ಬಿರಿದಾಗ ಸೊಗಸಂತೆ
ನೀನು ಕಡಲಂತೆ, ಮುತ್ತಿನ ರಾಶಿಯಂತೆ
ಬರಿ ಅಂತೆ, ಕಂತೆ, ಚಿಂತೆಗಳೆ, ತುಂಬಿರುವ ಈ ಸಂತೆಯಲಿ
ನೀನು, ನೀನಿಲ್ಲದ ನಾನು, ನನೀಲ್ಲದ ಈ ಬದುಕು,
ಕಾರ್ಮೊಡದ ಕತ್ತಲಲಿ ಹುಚ್ಚೆದ್ದು ಕುಣಿವ ಹೊಂಬೆಳಕಿನ ಮಿಂಚೆಂಬ ಮರಿಚಿಕೆಯನು ಹಿಡಿಯಲೊರಟ ಬೇಟೆಗಾರನಂತೆ.

- ಮುಕಮಾಸು

No comments:

Post a Comment