Wednesday, 20 April 2016

ನಿ :-

ಜಗದೆಲ್ಲ ಮಹಾಕವಿಗಳು ಸೇರಿ ಮಾಡಿದ ಸ್ವರ ಯಾಗದಲುಟ್ಟಿ ಪಸರಿಸಿದ ಸಾಹಿತ್ಯ ಭಂಡಾರ ನಿ
ಮಲೆನಾಡಿನ ಬೆಟ್ಟದಸಿರ ಸಿರಿ ಸೊಬಗಿನಲಿ ಕವಿಯೊಬ್ಬನ ಕಲ್ಪನೆಗರಳಿದ ಪ್ರೇಮ ಕುಸುಮ ನಿ
ಸುಡು ಭೂಮಿಗೆ ವರುಣನ ವಿರಹದ ಕಕಂಬನಿ ತಾಕಲು ಜನಿಸಿದ ಸರಸದ ಜೆಂಕಾರ ನಿ
ವಿಶ್ವದೆಲ್ಲೆಡೆ ಅರ್ಥಪೂರ್ಣ ಜೀವನದ ತತ್ವ ಸಾರಲು ಉದಯಿಸಿದ ಶಾಂತಿಯುತ ಓಂಕಾರ ನಿ

- ಮುಕಮಾಸು

Tuesday, 19 April 2016

ಜೀವನ ಸಾರ:-

"ನಾನು" ನನ್ನದೆಂಬುದನ್ನು ಬಿಟ್ಟು, ನಿನ್ನದೆಂದು ಬದುಕಿ ದುಡಿದರೆ, ನೀನೆಂಬ ಪರಮಾತ್ಮ "ನಾನು" ಸಾಯುವತನಕ ಸಂತ್ರುಪ್ತಿಯ ಜೀವನವನ್ನು ಕೊಟ್ಟು ಕಾಪಾಡುತ್ತಾನೆ.

- ಮುಕಮಾಸು

Monday, 18 April 2016

ಮನದ ಮಾತು:-

ಜೋಡಿಹಕ್ಕಿ ರೆಕ್ಕೆಯ ಗಾಳಿಯೆ ಹುಡುಕಿ ಆರಿದಂತೆ
ಅನುರಾಗ ಬಯಸಿ ಬಂದ ದುಂಬಿಯ ಹೂವೆ ಇರಿದಂತೆ
ದಾರಿಯೆ ಎದುರಾಗಿ ನಿಂತು ದಿಕ್ಕನ್ನೆ ದಿಕ್ಕು ತಪ್ಪಿಸಿದಂತೆ
ನೀರೆ ಬಾಯಾರಿ ಕಡಲನ್ನೆ ಬರಿದು ಮಾಡಿದಂತೆ
ಅಮೃತ ಉಣಿಸೊ ತಾಯೆ ಕಂದನ ಕೊಂದಂತೆ
ಹಿಮ ಬೀರುವ ಚಂದ್ರ ಬೆಂಕಿಯ ಮಳೆಗರೆದಂತೆ
ಜಗ ಕಯ್ವ ದೈವವೆ ಮನುಜನ ಶಿರ ಕಡಿದಂತೆ
ಸುರ ಪಾನವೆ ಅಸುರರ ಹುಡುಕಿ ಕರೆದಂತೆ
ಚಲುವಿನೊಲವೆ, ನನ್ನೆದೆಯ ಮನೆಗೆ ನಿ ಬೆನ್ನು ಮಾಡಿ ನಿಲ್ಲಲು  ಮನದಳದಲಿ ನೋವಿನ ತರಂಗ ತಳಮಳ.......|||

- ಮುಕಮಾಸು

Thursday, 14 April 2016

ಪ್ರೀತಿ ಮಾತು:-

ಕಲ್ಮನಸ ಮೇಲೆ ಚಲ್ಲಿ ನಸುನಗೆಯ ಪನ್ನೀರು ಬೆಳೆದವಳೆ ಪ್ರೀತಿಯ ಗರಿಕೆ
ನನ್ನೊಳು ಬೆಳೆದಾಳೆ ಪ್ರೀತಿಯ ಗರಿಕೆ
ಬಿಂಕವ ಮೈತುಂಬಿ ಬಂದವಳೆ ಕನಸಿನ ಮನೆಯಗೆ, ತಿರಿಸೊಕೆ ಒಲವಿನ ಹರಿಕಿ
ಚಲ್ವಿ ಬಂದಾಳೆ ತಿರಿಸೊಕೆ ಒಲವಿನ ಹರಿಕಿ
ಕಣ್ಣೆರಡು ನೀಡಿರಲು ಬೆಳಕು ತುಪ್ಪದಾರತಿಯಂತೆ, ಚೆಂದಿರನು ಬಂದಿಹ ಪಡುತ್ತ ಸೊಜಿಗ
ಎದುರಾಗಿ ಚೆಂದ್ರ ಪಡುತಿಹನು ಸೊಜಿಗ
ತಲೆ ಬಾಗಿ ನಗುತ ಲಯವಾಗಿ ನಡೆದಿರಲು ನಿ, ದಾರ ಸೆರೆಯಾದಂತೆ ಸೂಜಿಗ
ಸೆರೆಯಾದಂತೆ ದಾರ ಕಣ್ಣಿನ ಸೂಜಿಗ
ಅರಿಯದೆ ಪ್ರೀತಿ ಪ್ರಮಾಣ ಇಳಿದಿಹೆನು ಒಲವಿನ ಕಡಲಿಗೆ ಮಾಡಿ ಮೌನ ಪ್ರಣಾಮ
ಮೌನದಲಿ ಮಾಡಿ ಒಲವ ಕಡಲಿಗೆ ಪ್ರಣಾಮ
ಸುರಿಮಳೆಯ ನುಡುವಲ್ಲಿ ದಾಟಿ ವಿರಹದ ಕೋಟೆ ಬಂದಿರುವೆ ಬಯಸಿ ನಿನ್ನ ಕೊಡಬೇಡ ವಿರಾಮ
ಗೆಳತಿ ಚಲುವಿನಾಟಕೆ ಕೊಡಬೇಡ ನಿ ವಿರಾಮ.

- ಮುಕಮಾಸು

Wednesday, 13 April 2016

ಮನ್ಸಿನ್ ನೋವು:-

ಭೂಮಿಯೊಳಗೆ ಜ್ವಾಲೆಯಿದೆ, ಆದ್ರು ಮ್ಯಾಲೆ ಹಸಿರು ತುಂಬೈತೆ
ಎದೆಯ ಒಳಗೆ ನೋವುಯಿದೆ, ಅದ್ರು ಮನ್ಸು ತುಂಬ ಹರ್ಸಾಗೈತೆ
ಬೆಂಕಿ ಉರಿದು ಬದ್ಕೊದಕ್ಕೆ ಬೇಕು ಗಾಳಿಯುಸಿರು
ನಾನು ಸಾಯ್ದೆ ಉಳಿಯೊದಕ್ಕೆ ಸಾಕು ನಿನ್ನ ಹೆಸರು
ನಾ ಮಾಡೊ ಪ್ರತಿ ನಿದ್ದೆಲಿ ಅತಿಯಾದ ಕನ್ಸು ನಿನ್ದಿರ್ಬೇಕು
ಕನಸಲ್ಲಿ ಬಂದು ಪ್ರೀತಿಯ ಕಾಗುಣಿತ ನೀನೆ ಕಲಿಸ್ಬೆಕು
ಜೀವ ಸೊರಗೊಗುತ್ತೆ ದೂರ ಸರಿದ್ರೆ ನನ್ನಿಂದ
ಮತ್ತೆ ಬದುಕೈತೆ ನೋವಲ್ಲು, ನೆನೆದು ನಿನ್ನಂದ

- ಮುಕಮಾಸು

Sunday, 3 April 2016

ಚಿಂತೆಯ ಚಿತೆ:-

ಚಿಂತೆ ಮನಸ್ಸನ್ನು ಸುಟ್ಟು ಚಿತೆಯನ್ನೆರಿಸುತ್ತದೆ
ಚಿತೆ ದೇಹವನ್ನ ಸುಟ್ಟು ಚಿಂತೆಯನ್ನಳಿಸುತ್ತದೆ.

- ಮುಕಮಾಸು

Friday, 1 April 2016

ಮುಂಗುರುಳು:-

ಮುಂಗುರುಳು ನಿನ್ನ ಕಣ್ಣ ಮರೆ ಮಾಡೊ ಪರಿ ಚನ್ನ
ನೋಡು ಕೂದಲೆಳೆಯ ನಡುವಲಿ ಕೊಲ್ಲುವಂತೆ ನನ್ನ
ಕಲ್ಲು ಶಿಲೆಯಾಗುವುದು ತಿಂದ ಮೇಲೆ ಹುಳಿ ಪೆಟ್ಟ ಅನ್ನ
ಪೂಜಿಸುವೆ ನಿನ್ನಾಕೃತಿಯ ನನ್ನ ಎದೆಗೂಡಿಯಲ್ಲಿಟ್ಟು ಚಿನ್ನ

- ಮುಕಮಾಸು