Tuesday, 23 February 2016

ನನ್ನ ನಲ್ಲೆ :-

ಚಂದ್ರ ಚಳಿ ತಾಳದೆ ಮೊಡದ ಮೊರೆ ಹೊದಂತೆ, ಗೆಳತಿ ನಿ ರೇಷಿಮೆಯ ನೆರಿಗೆಯ ಸೆರಗಲ್ಲಿ ಮರೆಯಾಗಲು
ನಕ್ಷತ್ರಕ್ಕೆ ನಗುವ ಪಾಠ ಕಲಿಸಿದಂತೆ, ನಲ್ಲೆ ಸಿಂಧೂರ ನಿನ್ನಣೆಯ ಮೇಲೆ ನಾಚುತಿರಲು
ಕಾಡಿಗೆಯ ಕಣ್ಣದು ಕಾಡುತಿದೆ ಕನಸಲಿ, ಹುಣ್ಣಿಮೆಯದು
ರಮಿಸುವಂತೆ ಕಡಲ
ಬಾಡುತಿದೆ ನನ್ನೆದೆಯ ಕಮಲ, ಸೆರದಿರಲು ಪ್ರೀತಿ ಪನ್ನಿರಂತ ನಿನ್ನೊಡಲ.

- ಮುಕಮಾಸು

Monday, 22 February 2016

ಕಾಲ :-

ಮಿಂಚಿಹೊದ ಕಾಲಕ್ಕೆ ಚಿಂತಿಸಿ, ಮುಂದೆಂದೊ ಬರುವ ಬರಗಾಲದ ಬಗ್ಗೆ ಯೋಚಿಸಿ, ಕೈಲಿರುವ ಸವಿಗಾಲವನು ಕೈ ಚೆಲ್ಲಿ ಕೂರುವುದು ಮುರ್ಖತನದ ಪರಮಾವಧಿ ಅಲ್ಲವೆ....?

- ಮುಕಮಾಸು

Sunday, 21 February 2016

ಮನದ ಅಲೆದಾಟ :-

ಅಲೆಯೊಂದು ಅಲೆದಾಡಿ, ಅನುರಾಗ ತಾ ಬಯಸಿ ಬಂದಾಗಿದೆ ದಡಕೆ
ಅಲೆದಾಟ ಸಾಕಾಗಿ, ಮನಸಾರೆ ನಿನ್ನೊಲವ ಸಿಹಿ ಕಾಟ ಬೇಕಾಗಿದೆ ಮನಕೆ
ಹಿಮದ ಚಲುವೆಲ್ಲ ಕರಗಿ ನೀರಾಗಿ ಹರಿಯುತಿದೆ, ಸೂರ್ಯನ ಸಿಹಿ ಶಾಖಕೆ
ನನ್ನ ಮನದ ಹಸಿರಿಲ್ಲ ಕೋರಗಿ ಸೊರಗುತಿದೆ, ಚಂದ್ರನ ಹಸಿ ತಾಪಕೆ

- ಮುಕಮಾಸು

Sunday, 14 February 2016

ಪ್ರೀತಿಯ ಅಮೃತ

ಎನೊ ಒಂತರ ಮನಸಿಗೆ ಹರುಷ ಕಂಡಗ ನಿನ್ನ, ತಾಯಿ ಹಾಲ್ಕುಡಿದು ಬಿಗುವ ಕರುತರ
ಕಣದ ಮರುಕ್ಷಣ ತಾಳದ ತಳಮಳ ನನ್ನೊಳಗೆ, ತಾಯಿ ಹಾಲ್ ಬಿಡಿಸಿದ ಮಗುತರ
ಮನಸು ಹೆದರಿ ಅಳುತಿದೆ ನೋವಲಿ, ರಣ ಹದ್ದುಗಳ ಗುಂಪಲಿ ಸಿಕ್ಕ ಪಾರಿವಾಳದಂಗೆ
ಉಳಿಸು ನಿ ಬಂದು ಈ ಜೀವವ, ಸಾವನ್ನೆ ಸಾಯಿಸೊ ಪ್ರೀತಿ ಅಮೃತದಂಗೆ.

- ಮುಕಮಾಸು

Saturday, 13 February 2016

ಮನ :-

ಮನ ಕೋರಗಿ ಕರಗುತಿದೆ, ಆಸೆಯಲ್ಲ
ನನ್ನ, ನಗು ಮರೆಯಾಗುತಿದೆ, ನಿನ್ನ ನಗುವಲ್ಲ
ನನ್ನ ಜೀವನದ ದಿನ ಸವೆಯುತಿದೆ, ನಿನ್ನ ನೆನಪಲ್ಲ
ನಾ ಹಿಂತಿರುಗಿ ನೋಡಲು ನಾ ಬಂದ ಜೀವನದ ದಾರಿಯಿದೆ, ನೀನಿಲ್ಲ.
ನೀನಿರದ ಮೇಲೆ ನಾನಿಲ್ಲ, ನೀ ಇಲ್ಲದಿರೊ ನನ್ನ ಈ ಬಾಳ ದಾರಿಗೆ ಅರ್ಥವೇ ಇಲ್ಲ.
ಅರ್ಥವಿರದ ಈ ಸ್ವಾರ್ಥ ಬದುಕಿನಲಿ ಪ್ರೀತಿಯ ಪಾತ್ರವೆ ಇಲ್ಲದ ಮೇಲೆ ನಾ ಬದುಕಿ, ಏನು ತಪ್ಪನ್ನೆ ಮಾಡದ ನನ್ನ ಹಾಗು ಹಲವು ಮುಗ್ಧ ಮನಗಳಿಗೆ ನೋವು ನೀಡುವುದು ಕನಸಲ್ಲಿ ಕಾಣದ ಮರಿಚಿಕೆಗೆ ಅರಿಯದೆ ಭೇಟಿಯಾಗಿ ಭೇಟೆಯಾದಂತೆ.

- ಮುಕಮಾಸು

Friday, 12 February 2016

ಜೀವನ :-

ನಮ್ಮ ಬುದ್ಧಿಯನ್ನು ಕೋಪದ ಕೈಗೆ ಕೊಡದೆ, ಪರಿಸ್ಥಿತಿಗಳನ್ನು ಸಮಯದ ಬುನಾದಿಯ ಮೇಲಿಟ್ಟು, ಹೊಂದಾಣಿಕೆ ಮತ್ತು ಪರಿಶ್ರಮದ ಗೋಡೆಗಳನ್ನು ಕಟ್ಟಿ, ತಾಳ್ಮೆಯ ಚಾವಣಿ ಹಾಕಿದರೆ ಜೀವನವೆನ್ನುವುದು ಮುತೈದೆ ಪೂಜಿಸುವ ತುಳಸಿಕಟ್ಟೆಯ ಆರೋಗ್ಯಕರ ನಗುವಿನಂತೆ.

- ಮುಕಮಾಸು

ಪ್ರೀತಿ ದುಡಿಮೆಯ ಮಾತು :-

ದೂರವಿದ್ದರು ಮನದ ಪ್ರೀತಿಯ ದುಡಿಮೆಗೆ ಕಮ್ಮಿಯಿಲ್ಲ
ನೆನೆದಾಗ ನಿನ್ನ ನನ್ನಿಯಿ ಮನ ಎನಿದ್ದರೂ ಕಡಿಮೆನೆ ಎಲ್ಲ.
ಯಾರು ಎನೆ ಹೇಳಿದ್ರು ಕೇಳೋಕೆ ರೆಡಿಯಿಲ್ಲ ನನ್ನ ಕಟ್ಟತನ
ಹಟದ ಮನೆಯಲ್ಲೇ ವಾಸ ಮಾಡುತಿದೆ ಗೊತ್ತಿದ್ರು ನನ್ನ ಹುಚ್ಚತನ.
ನಿನ್ನ ಮರೆಯುವುದು ಮನಕೆ ಮುಗಿಯದ ಕರಿಮೊಡ ಚಂದ್ರನ ಆವರಿಸಿದಂತೆ
ಇದಕೆಲ್ಲ ಪರಿಹಾರ ನಿನ್ನ ವರಿಸಿ ನಾವಿಬ್ಬರು ನಡೆಸುವುದು ಜೀವನದ ಸಂತೆ.

- ಮುಕಮಾಸು

Wednesday, 10 February 2016

ಒಲವಿನಾಟ :-

ಮುಂಜಾವಿನ ಮಂಜದು ಹಾಸುತಿದೆ ಒಲವಿನ ಮುತ್ತಿನ ಹನಿ ಹೃದಯದೂರಿಗೆ
ಮತ್ತೆಕೆ ತಡವರಿಕೆ ಮುಂದಿಟ್ಟು ಬಾ ಹಸಿ ಬಿಸಿ ಪಾದಗಳ ನೀಡುತ ಪ್ರೀತಿ ದೇಣಿಗೆ
ಮನಸದು ಕೇಳದೆ ಮನದ ಮಾತು ಹೆಜ್ಜೆ ಹಾಕಿದೆ ಒಂಟಿ ಒಲವಿನಾಟಕೆ
ಹಟವೆಕೆ ಚಲುವೆ ದಯಮಾಡಿ ಬಾ ನೀಡಬೇಡ ಭಡ್ತಿ ಈ ವಿರಹದೂಟಕೆ

- ಮುಕಮಾಸು

Tuesday, 9 February 2016

ಮನದ ನೋವಿನ ಮಾತು:-

ನೀರ್ಗನ್ನಡಿಯಲಿ ನೋಡಲೆತ್ನಿಸಿ ನಿನ್ನ ನಗು ಮುಖವ, ಚೂರಾಗಿದೆ ಮನಸು
ಮಾಡುತ ಪದೆ ಪದೆ ದಾಳಿ, ಪ್ರೀತಿ ಅನಭವಿಸುತ್ತಿದೆ ನನ್ನ ನೋವಿನ ಸೊಗಸು
ಅಳಲು ಖಾಲಿಯಾಗಿದೆ ನೀರು ಕಣ್ಕೋಳದಲಿ, ಮರೆತು ಬದುಕಿದೆ ಮನಸು ನಗುವ
ಕೊಟ್ಟ ಬಿಡು ಚಲುವೆ ಪುಟ್ಟ ಮನವ, ಸುಡಬೆಡ ವಿರಹದ ಕಿಡಿಯಲಿ  ಈ ಬಾಳ ಬನವ.

- ಮುಕಮಾಸು

Sunday, 7 February 2016

ನಲ್ಲೆ :-

ಬೆಂಬಿಡದೆ ಹಿಂಬಾಲಿಸಿದಂತೆ ಸೂರ್ಯ, ನೀ ಭೂಮಿಯಲ್ಲಿ ಕಾಂತೀಯ ಶಿಲೆಯಾಗಿ ಸೆಳೆಯುತಿರಲು
ಹಂಬಲಿಸಿ ಬಂದಂತೆ ರಶ್ಮಿ ಭೂಮಿಗೆ ತಂಪನುಡುಕುತ ಸೂರ್ಯನ ಶಾಖ ಅತಿಯಾಗಿರಲು
ನಲ್ಲೆ ನಯನಗಳು ಕೋರಗುತಿವೆ ಹುಡುಕಿ ನಿನ್ನ, ಯುದ್ಧದಲ್ಲಿ ಎಲ್ಲವನ್ನು ಕಳೆದುಕೊಂಡ ರಾಜನಂತೆ
ಮನಸು ಮಾಸಿ ಹೋಗುತಿದೆ ಚಲುವೆ ಕಣದೆ ನಿನ್ನ, ಸೂರ್ಯನಿಲ್ಲದ ತಾವರೆ ಮುದುಡಿದಂತೆ.

- ಮುಕಮಾಸು

Friday, 5 February 2016

ಸುಳ್ಳಿನ ನಿಜ :-

ನಿಜ ಹೇಳಿದ್ರೆ ತಾತ್ಕಾಲಿಕವಾಗಿ ಬೆಲೆ ಸಿಗಲ್ಲ, ಅದೆ ಸುಳ್ಳು ಹೇಳಿದ್ರೆ ಶಾಶ್ವತವಾಗಿ ಜೀವನನೆ ಸಿಗಲ್ಲ.
ಅದ್ದರಿಂದ ಸುಳ್ಳು ಹೇಳಿ ಬೆರೆಯವರ ಜೀವನದಿಂದ ದೂರ ಅಥವಾ ಬೇರೊಬ್ಬರನ್ನ ನಮ್ಮ ಜೀವನದಿಂದ ಶಾಶ್ವತವಾಗಿ ಕಳೆದುಕೋಳ್ಳುವ ಬದಲು, ನಿಜ ಹೇಳಿ ತಾತ್ಕಾಲಿಕವಾಗಿ ಬೆಲೆ ಕಳೆದುಕೋಳ್ಳುವುದು ಎಷ್ಟೋ ಮೇಲು, ಯಾಕೆಂದರೆ ಸತ್ಯ ಗೊತ್ತಾದಾಗ ಬೆಲೆ ಸಿಗುತ್ತೆ, ಜೀವನ ಅಲ್ಲ.

- ಮುಕಮಾಸು

Thursday, 4 February 2016

ನೀ

ಅರಳುತಿದೆ ಪ್ರೇಮಕವನ, ಮುಗಿಯುತಿರಲು ಜೀವನ ಪಯಣ
ಉಕ್ಕಿದಂತೆ ಮನದ ಕಡಲು ಗೆಳತಿ, ಅತಿಯಾಗಿ ಮೌನದಳಲು||

ಮನಸೆ ನಿನ್ನೆಸರು ಕನಸು, ಕನಸಲ್ಲಿ ಬರೊಕೆ ನಿಂಗ್ಯಾಕೆ ಮುನಿಸು
ಹೇಳೋಕೆ ಸಾಲಲ್ಲ ಪದಗಳ ಸಾಲು, ನೊರೆಹಾಲ ಸಿರಿಯಂತ ನಿನ್ನೊಲವ ಸೊಗಸು
ಅಕ್ಕರೆಯ ಮಾತಾಡಲು ನಿ ಸಕ್ಕರೆಯ ಗೊಂಬೆ, ಬೀರಿದಾಗ ಬಾಯ್ತುಂಬ ದಾಳಿಂಬೆ ಸಂತೆ
ಹಸಿ ಕೆನ್ನೆ ಕುಡಿನೋಟ ಕತ್ತಿಯಂತೆ, ಅಂಬರದ ಅಂಚಲ್ಲಿ  ಬುಗಿಲೆದ್ದ ಹಿಮರಾಶಿಯ ಕಂತೆ

ಅರಳುತಿದೆ ಪ್ರೇಮಕವನ, ಮುಗಿಯುತಿರಲು ಜೀವನ ಪಯಣ||

ನಿನ್ನೋಡಲ ದನಿಯದು ಬೆಳಗೆದ್ದು ಕಾಜಾಣ ಕಾನನದ ನಡುವಲ್ಲಿ ನನ್ನೆಸರ ಕರೆದಂತೆ
ತರುಣಿ ನಿನ್ನ ಕಣ್ಣೋಟದ ಕರೆಯದು ಹರಿಣಿಯ ಮೈ ಮೇಲೆ ಬರೆದ ರಂಗೋಲಿಯ ಚುಕ್ಕಿಯಂತೆ
ಮಯುರ ಮರೆತಂತೆ ನಾಟ್ಯವ ನವಿಲೆ ನೋಡಿ ನಿನ್ನ ವಾಯ್ಯರದ ಬಿಂಕದ ನಡತಿ
ನಿನೊಂತರ ನಿರಂತರ ಹರಿಯವ ಮಹಾನದಿಗಳ ಚಲವಿನ ಚಿಲುಮೆಯ ನಗೆಹಬ್ಬದ ಒಡತಿ.

- ಮುಕಮಾಸು

Tuesday, 2 February 2016

ಸಮಯ -

ಜೀವನದಲ್ಲಿ ಬರುವ ಎಲ್ಲಾ ಪರಿಸ್ಥಿತಿ, ಘಟನೆ ಮತ್ತು ಪ್ರಶ್ನೆಗಳಿಗೆ  ಸಮಯ ಎನ್ನುವುದು ಪರಿಪಕ್ವವಾದ ಸೂಕ್ತ ಉತ್ತರವನ್ನು ನೀಡುತ್ತದೆ, ಅದು ನಮ್ಮ ಪ್ರಯತ್ನ ಮತ್ತು ಪರಿಶ್ರಮ ಸಮಯಪ್ರಙ್ನೆ ಮತ್ತು ಸಮಯೋಚಿತವಾಗಿದ್ದರೆ. ಏಕೆಂದರೆ ಹಲವಾರು ಸಂದರ್ಭಗಳಲ್ಲಿ ನಮ್ಮ ಪ್ರಯತ್ನ ಎಷ್ಟೇ ಇದ್ದರೂ ಸೂಕ್ತ ಉತ್ತರಕ್ಕಾಗಿ ನಾವು ಸರಿಯಾದ ಸಮಯ ಬರುವ ತನಕ ಕಾಯಲೆಬೇಕು.

- ಮುಕಮಾಸು