ಕಾಣದ ದಾರಿಯಲ್ಲಿ ಎಲ್ಲಿಗೊ ಈ ಪಯಣ
ಮೌನದ ಮಾತಿಗೆ ಆಗುತಿರಲು ಒಲವಿನ ಅವಸಾನ
ಪ್ರೀತಿ ನದಿಯ ಸುಳಿಯಲಿ ಸಿಕ್ಕ ಅರುಗಲ ನಾ
ಗುಟ್ಟಾಗಿ ಬಂದು ನೀಡುಬಾ ಮರು ಹುಟ್ಟು ನೀ.
- ಮುಕಮಾಸು.
ಕಾಣದ ದಾರಿಯಲ್ಲಿ ಎಲ್ಲಿಗೊ ಈ ಪಯಣ
ಮೌನದ ಮಾತಿಗೆ ಆಗುತಿರಲು ಒಲವಿನ ಅವಸಾನ
ಪ್ರೀತಿ ನದಿಯ ಸುಳಿಯಲಿ ಸಿಕ್ಕ ಅರುಗಲ ನಾ
ಗುಟ್ಟಾಗಿ ಬಂದು ನೀಡುಬಾ ಮರು ಹುಟ್ಟು ನೀ.
- ಮುಕಮಾಸು.
ನಿಲ್ಲಲು ನೀ ನಸುನಾಚಿ, ಇಳಿಸಂಜೆಯ ತಿಳಿಸ್ವರ್ಣ ಬಣ್ಣದ ಬೆಳಕಿನೋಕುಳಿ ಭುವಿಯಲಿ ಮೂಡಿಸಿದಂತೆ ಅಚ್ಚರಿ
ಕೇಷರಾಶಿಗೆ ಮುಡಿದ ಕಣಗಲೆ ಹೂ, ಸೂರ್ಯನೆ ಖುದ್ದು ತಂದು ಮುಡಿಸಿದಂತೆ ಪಾರಿಜಾತವ ಮರೆತು ತನ್ನೆಲ್ಲ ದಿನಚರಿ.
ಕಣ್ಣ ಹೊಳಪದು, ರಾತ್ರಿಯೆಲ್ಲ ನೆನೆದು, ಮಳೆಯ ಮುಂಜಾವಲಿ ಮಂಜಿನೊದಿಕೆಯಿಂದೆದ್ದು ಬಂದ ಮರಿ ಅಣಬೆಯ ನಗುವಂತೆ
ಚಂದದ ಕಾರಳ್ಳದು, ಮೊಗದರಮನೆಯ ಬಾಗಿಲುಗಳಿಗಾಕಿದ ಸೊಗಸಿನ ಬೀಗಕೆ ಮೌನದ ಕೀಲಿಕೈಯಂತೆ.
- ಮುಕಮಾಸು
ಉರಣವಿಲ್ಲದ ಹೊಬ್ಬಟ್ಟು, ತೋರಣವಿಲ್ಲದ ಹಬ್ಬ
ಸತ್ವವಿಲ್ಲದ ಭಾವನೆ, ಸ್ವಾಥ೯ವಿಲ್ಲದ ಬದುಕು
ಅರ್ಥವಿರದ ಮಾತು, ಮೌಲ್ಯವಿರದ ಜೀವನ
ಚಂದ್ರನಿಲ್ಲದ ಹುಣ್ಣಿಮೆ, ಭಾವನೆ ಇಲ್ಲದ ಬಣ್ಣನೆ
ನೀನಿಲ್ಲದ ನಾನು, ನಾನಿಲ್ಲದ ಈ ಬಾಳ ದಾರಿ
ಕಡಲ ಸೇರದ ನದಿಯಂತೆ.
- ಮುಕಮಾಸು
ಮೌಲ್ಯ ನಿ ಅಪರೂಪ, ಅಮೂಲ್ಯ
ಬರಿಬೇಕು ನೀನಗೊಂದು ಸುಂದರ ಕಾವ್ಯ.
ಸದ್ಯಕ್ಕೆ ಇರಿಸಿಕೊ ಈ ಸಣ್ಣದೊಂದು ಕವನ
ನಿನ್ನ ಸೃಷ್ಟಿಸಿದ ಭಗವಂತನಿಗಿರಲಿ ನನ್ನ ನಮನ.
ಬಯಸಿದೆ ಮನಸು ಬರೆಯಲು ಬಾಳ ಮುನ್ನುಡಿಯ, ತನ್ನ ತಾ ಕಂಡು ನಿನ್ನ ಕಣ್ಕನ್ನಡಿಯಲಿ
ನಿನಿದ್ದೆ ಬಲಬದಿಯಲಿ, ನಾ ದಿಟ್ಟಿಸಲಿಲ್ಲ, ಆದರೂ ಬರೆದೆ ಹೇಗೆ, ಏಕೆ...? ಅಳಿಸಲಾಗದ ನಿನ್ನ ಚಿತ್ರವ ನನ್ನ ಕಣ್ಣಲಿ.
ಮರೆಸಿತು ಮನಸ ಕೆಲ ಕಾಲ ಕಂಡಮೇಲಂತೂ, ಮಲ್ಲಿಗೆ ದಿಂಡ ಮೇಲಿನ ದುಂಬಿಯಂತ ಕಾರಳ್ಳನಾ ನಾಸಿಕದ ಕೇಳಗೆ
ನಿ ಯೋಚಿಸಿ, ನಾಚಿ, ಉತ್ತರಿಸಿದ ಪರಿಯದು, ಕಡಲಾಳದಲಿ ಚಿಪ್ಪೊಂದು ಬಾಯ್ತೆರೆದು ಮುತ್ತನು ಮುದ್ದಿಸಿದಂತೆ ಮೆಲ್ಲಗೆ.
- ಮುಕಮಾಸು
ಕರಿ ಉಬ್ಬು ಆಡುತಿವೆ ಕತಕಳಿ ಕಣ್ಣ ಜೋತೆಸೆರಿ ನೀ ಕಾಣದಿರೆ ಕ್ಷಣ
ಕಾಣೊ ಪ್ರತಿ ನೋಟದಲು ನಿನ್ನ ಗುರುತಿರುವಂತೆ ಬಯಸುತಿದೆ ನನ್ನ ಈ ಮನ
ನಗುವ ಚಲ್ಲಿ ಚದುರಂಗದ ಮನೆಯಂತೆ ಚಲಿಸುತಿದೆ ಸಾಗರವ ಸೇರಲು ನೀರು
ನಲ್ಲೆ ಚಂದ್ರನ ಊರ ದಾರಿಗೆ ಬೆಳಕ ನೀಡುತಿರುವೆ ನೀ ಯಾರು, ಯಾವ ಊರು.
- ಮುಕಮಾಸು
ಮೊದಲ ಸೊನೆ ಮಳೆಯಲಿ ನೆನೆದ ಭೂಮಿಯಿಂದೊರಬರುವ ಸುವಾಸನೆಯಂತೆ ನಿನ್ನ ಮೈ ಕಂಪು
ಗಿಳಿ ಕಚ್ಚಿದ ಮೇಲೆ ಮಾಗಿ ರಂಗಾದ ಸೀಬೆಯಂತೆ, ನೀ ನಾಚಲು ಕೆನ್ನೆಯ ಕೆಂಪು.
ಮಳೆನಿಂತ ಮೇಲೆ ಸೂರ್ಯನೊಡಗುಡಿ ಬಂದ ಮಳೆ ಬಿಲ್ಲಂತೆ ನಿನ್ನ ಮೈಮಾಟ
ಒಮ್ಮೆ ಬಿಟ್ಟರೆ ಗುರಿ ತಪ್ಪದ ರಾಮ ಬಾಣದಂತೆ, ಆ ನಿನ್ನ ಸವಿಗಣ್ಣ ಕುಡಿನೋಟ.
- ಮುಕಮಾಸು
ನೀನು ತಿಳಿದಿರೊದು ನನಗೆ ಈಗೀಗ, ಆದರೆ ನನ್ನ ಮನಕೆ ಈಗ ನೀನೇ ಎಲ್ಲಾ.........
ಯಾವತ್ತೂ ನಾವಿರಲಿಲ್ಲ ಮಾತಾಡದೆ, ನಿ ಎದುರು ಕುಳಿತಿದ್ದರು ನಾನಿದ್ದೆ ಜೀವಂತ ಶವದಂತೆ.
ಮನಸು ವರ್ತಸಿದೆ ತನಗಿಷ್ಟ ಬಂದಂತೆ, ಒಮ್ಮೆ ಅಳಲು, ಮತ್ತೊಮ್ಮೆ ನಗಲು
ಈಗೀಗ ಮೌನದ ಮಾತು ಜಾಸ್ತಿ, ಮನಸಿನ ಮಾತು ಕಡಿಮೆ, ಮರೆಮಾಚಲು ಮನದಳಲು.
- ಮುಕಮಾಸು
ಜೀವನ ಚಿಂತೆಗಳ ಸಂತೆಯ ಸಮರವೊ, ಸಂತೆಯೊಳಗಿನ ಶಬ್ದದ ಸ್ವರಸ್ಯಕರವೊ
ಸುಖ ದುಃಖಗಳ ಹಾಲ್ಜೇನ ಸಮ್ಮಿಶ್ರಣವೊ, ಹಾಲ್ಜೇನಿನ ಅನುರಾಗದ ಅತಃಕರಣವೊ
ಸರಿ ತಪ್ಪುಗಳ ನಲ್ಮೆಯ ಪಯಣವೊ, ನಲ್ಮೆಯೋಳಗಿನ ನಗುವಿನ ಹರಣವೊ
ತಿರುವುಗಳೆ ತುಂಬಿರುವ ಒಲವಿನ ದಾರಿಯೊ, ಒಲವಿನ ದಾರಿಯಲ್ಲಿನ ಸಾವಿನ ಪರಿಯೊ
ತಿಳಿಯದೆ ಹಾಗುವ ಅಪರಾಧದಾಗರವೊ, ಅಪರಾಧವನ್ನೆ ಮಾಡಲಿರುವ ಬದುಕಿನ ಭರವೊ........
- ಮುಕಮಾಸು