Wednesday, 22 June 2016

ನೀ :-

ನಿಲ್ಲಲು ನೀ ನಸುನಾಚಿ, ಇಳಿಸಂಜೆಯ ತಿಳಿಸ್ವರ್ಣ ಬಣ್ಣದ ಬೆಳಕಿನೋಕುಳಿ ಭುವಿಯಲಿ ಮೂಡಿಸಿದಂತೆ ಅಚ್ಚರಿ
ಕೇಷರಾಶಿಗೆ ಮುಡಿದ ಕಣಗಲೆ ಹೂ, ಸೂರ್ಯನೆ ಖುದ್ದು ತಂದು ಮುಡಿಸಿದಂತೆ ಪಾರಿಜಾತವ ಮರೆತು ತನ್ನೆಲ್ಲ ದಿನಚರಿ.

ಕಣ್ಣ ಹೊಳಪದು, ರಾತ್ರಿಯೆಲ್ಲ ನೆನೆದು, ಮಳೆಯ ಮುಂಜಾವಲಿ ಮಂಜಿನೊದಿಕೆಯಿಂದೆದ್ದು ಬಂದ ಮರಿ ಅಣಬೆಯ ನಗುವಂತೆ
ಚಂದದ ಕಾರಳ್ಳದು, ಮೊಗದರಮನೆಯ ಬಾಗಿಲುಗಳಿಗಾಕಿದ ಸೊಗಸಿನ ಬೀಗಕೆ ಮೌನದ ಕೀಲಿಕೈಯಂತೆ.

- ಮುಕಮಾಸು

No comments:

Post a Comment