Monday, 4 July 2016

ನೀನಿಲ್ಲದ ನಾನು:-

ಹೂರಣವಿಲ್ಲದ ಹೋಳಿಗೆ, ದಾರಿತೋರದ ದೀವಿಗೆ
ತೋರಣವಿಲ್ಲದ ಹಬ್ಬ
ಸತ್ವವಿಲ್ಲದ ಭಾವನೆ,  ಭಾವನೆ ಇಲ್ಲದ ಬಣ್ಣನೆ
ಆಸೆ ಇಲ್ಲದ ಬದುಕು
ಅರ್ಥವಿರದ ಗಾಯನ, ಮೌಲ್ಯವಿರದ ಜೀವನ
ಚಂದ್ರನಿಲ್ಲದ ಹುಣ್ಣಿಮೆ
ನೀನಿಲ್ಲದ ನಾನು, ನಾನಿಲ್ಲದ ನನ್ನ ಬಾಳ ದಾರಿ
ಕಡಲ ಸೇರದ ನದಿಯಂತೆ.

- ಮುಕಮಾಸು

No comments:

Post a Comment