Thursday, 7 July 2016

ಮನದ ಆಸೆ ☺

ಮನದ ಸೂರಿನಡಿ ಮನಸೂರೆ ಮಾಡಿರುವ ಮನಸೆ ಎಲ್ಲಿರುವೆ
ಕಣ್ಣಣತೆಯ ಬೆಳಕಲಿ ಬಾಳ ದಾರಿತೋರಿದ ಸೊಗಸೆ ಎಲ್ಲಿರುವೆ ||

ನಿನಿಲ್ಲದೆ ಸುಖ ಮರಿಚಿಕೆಯಾಗಿ ಖುಷಿ ಕಣ್ಮುಚ್ಚಿ ಬೆನ್ನು ಮಾಡಿ ಹೊರಟಿದೆ
ಕಣ್ಣಿರು ಇಂಗಿ ಬಿಸಿ ನೋವಿನ ಶಾಖಕೆ ಮನದಲ್ಲಿ ದುಗುಡ ಮನೆ ಮಾಡಿದೆ ನಿನಿಲ್ಲದೆ
ನಗು ಮರೆತ ತುಟಿಗಳು ಮೌನದ ಮನೆಯಲಿ ಸೆರೆಯಾಗಿ ಅಳುತಿವೆ
ಮನದ ಅಳುವ ಆಕ್ರಂದನ ಕೇಳಿ ಕೇಕೆ ಹಾಕಿ ನಗುತ ಕುಳಿತಿವೆ ನಗು

ಮನದ ಸೂರಿನಡಿ ಮನಸೂರೆ ಮಾಡಿರುವ ಮನಸೆ ಎಲ್ಲಿರುವೆ||

ಹೃದಯದಲಿ ಹೂದೋಟ ಬಾಡಿದೆ ನಿನ್ನ ಮುನಿಸು ಮರುಕಳಿಸಿ ಅರಳಿಸು ಒಲವಿನ ಹೂಗಳ ನಿ ಸುರಿಸಿ ನಗುವಿನ ಪನ್ನಿರು  ಹೃದಯದಲಿ
ಕಣ್ಮುಚ್ಚಿ ಮನ ಸಾಗಿದೆ ಪ್ರೀತಿ ಹೆದ್ದಾರಿಯಲಿ ಯಾರ ಮಾತಿಗು ಕಿವಿಗೊಡದೆ
ಒಪ್ಪಿಗೆಯ ನೀಡು ಕೈಹಿಡಿದು ನೆಡೆಸಲು ಜೀವನ ರಸದಾರಿಯಲಿ ಕಣ್ಮುಚ್ಚಿ.

ಮನದ ಸೂರಿನಡಿ ಮನಸೂರೆ ಮಾಡಿರುವ ಮನಸೆ ಎಲ್ಲಿರುವೆ||

- ಮುಕಮಾಸು

No comments:

Post a Comment