Thursday, 13 July 2017

ನಗು :-

ನಗುವುದು ಸ್ವ ಧರ್ಮ
ನಗಿಸುವುದು ಪರಧರ್ಮ
ನಗಿಸಿ ನಗುವುದು ಸರ್ವ ಧರ್ಮ.


- ಮುಕಮಾಸು

Wednesday, 14 June 2017

ನಿ ನಿಲ್ಲದೆ :-

ಕೂಗಿದೆ ಮನ ನಿನ್ನೆಸರ ಸ್ವರವಿಲ್ಲದ ದನಿಯಲಿ, ನಿಂತು ಸಂತೆಯೊಳಗಿನ ಸಂಭ್ರಮದಲ್ಲಿ
ಬಯಸಿದೆ ತುಂಪು ದಿನ ಜಪಿಸುತ ನಿನ್ನೆಸರ, ಸುಡು ಸೂರ್ಯನ ನಡುಹಗಲಲ್ಲಿ
ನೋಡಲು ಚಡಪಡಿಸಿದೆ ಕನಸಲಿ ನಿನ್ನ ನಗುಮುಖ, ಬಂದಿರಲು ನಿದಿರೆಗೆ ಬರಗಾಲ
ಸಹಿಸುವುದು ಕಷ್ಟವಾಗಿದೆ ನೀನಿಲ್ಲದೆ ಸನಿಹ, ಬಯಸದೆ ಬಂದಿರಲು ಈ ವಿರಹದ ಸವಿಗಾಲ.


- ಮುಕಮಾಸು

Wednesday, 7 June 2017

ನೀನಿಲ್ಲದೆ :-

ಹಾರುವ ಮರಿ ಗುಬ್ಬಿ ಆಯತಪ್ಪಿ ಉರಗದ ಊರಿಗೆ ಬಿದ್ದಂತೆ, ನನ್ನ ಮನಸಿಗೆ ಸಹಿಸುವುದು ನಿನ್ನ ಮೌನ
ತಾಯೊಡಲ ಬಿಟ್ಟು ಚದುರಿದ ಮರಿಗೆ, ಹಸಿದಬ್ಬರಿಸಿದ ಸಿಂಹದೆದುರಾದಗ ಆಗುವ ದಿಗಿಲು, ಕಾಣದಿರಲು ನಿನ್ನ ಮನ.

ಅರುಣರಾಗಕೆ ಕಣ್ಬಿಟ್ಟ ತಾವರೆ ಮತ್ತದೆ ಅರುಣನ ಕಂಗಣ್ಣಿಗೆ ಸಿಕ್ಕಿ ಕಮರಿದಂತೆ, ಮುಡದಿರಲು ಕನಸಲಿ ನಿನ್ನ ಕಣ್ಗವನ
ಜೋಡಿಹಕ್ಕಿಯ ನಲ್ಮೆಯ ಗೂಡು ಬಿರುಗಾಳಿಯ ನಗುವಿಗೆ ತತ್ತರಿಸಿದಾಗ ಜೋಡಿಗಾದಂತೆ ನೋವು, ಖಾಲಿ ಇರಲು ನನ್ನ ಮನದ ಚಂದನವನ "ನೀ 👉ನಿಲ್ಲದೆ.


- ಮುಕಮಾಸು

Tuesday, 6 June 2017

ಗೆಲುವಿನ ಸೋಲು :-

ಸೋಲನ್ನು ಗೆದ್ದವರು ಮಾತ್ರ ಗೆಲುವನ್ನು ಸೋಲಿಸಲು ಸಾಧ್ಯ.


- ಮುಕಮಾಸು

Tuesday, 30 May 2017

ಜೀವನ :-

ಜೀವನ ಚಿಂತೆಗಳ ಸಂತೆಯ ಸಮರವೊ, ಸಂತೆಯೊಳಗಿನ ಶಬ್ದದ ಸ್ವರಸ್ಯಕರವೊ....
ಸುಖ ದುಃಖಗಳ ಹಾಲ್ಜೇನ ಸಮ್ಮಿಶ್ರಣವೊ, ಹಾಲ್ಜೇನಿನ ಅನುರಾಗದ ಅತಃಕರಣವೊ....
ಸರಿ ತಪ್ಪುಗಳ ನಲ್ಮೆಯ ಪಯಣವೊ, ನಲ್ಮೆಯೋಳಗಿನ ನಗುವಿನ ಹರಣವೊ......
ತಿರುವುಗಳೆ ತುಂಬಿರುವ ಒಲವಿನ ದಾರಿಯೊ, ಒಲವಿನ ದಾರಿಯಲ್ಲಿನ ಸಾವಿನ ಪರಿಯೊ.....
ತಿಳಿಯದೆ ಆಗುವ ಅಪರಾಧದಾಗರವೊ, ಅಪರಾಧವನ್ನೆ ಮಾಡಲಿರುವ ಬದುಕಿನ ಭರವೊ........ಈ ಜೀವನ.


ಮುಕಮಾಸು

Sunday, 28 May 2017

ಮುರ್ಖತನ:-

ಯಾರು ಈ ಪ್ರಪಂಚದಲ್ಲಿ ನಾನೆ ಹೆಚ್ಚು ಕಷ್ಟಪಡುತ್ತಿದ್ದೆನೆ ಮತ್ತು ನನಗೆ ಹೆಚ್ಚು ಕಷ್ಟ ಎದುರಾಗುತ್ತಿದೆ ಎಂದು ನಿರ್ಧರಿಸುತ್ತಾರೋ ಅದೇ ಅತಿವ ದೊಡ್ಡ ಮೂರ್ಖತನ.


ಮುಕಮಾಸು

Tuesday, 16 May 2017

ಜೀವನ ಮತ್ತು ಸಾಗರ :-

ಜೀವನ ಅನ್ನೋದು ಬಹು ದೊಡ್ಡ ಸಾಗರದಂತೆ ಕಳೆವ ಒಂದೊಂದು ಕ್ಷಣ ಒಂದೊಂದು ಅಲೆಗಳ ಪ್ರತಿರೂಪ.  ಎದುರಾಗುವ ಪ್ರತಿ ಅಲೆಗಳಿಗನುಗುಣವಾಗಿ ಮುನ್ನಡೆದರೆ ಸಾಗರದಾಳದಲಿ ಹುದುಗಿರುವ ಮುತ್ತು,ರತ್ನ, ಹರಳು ಮತ್ತನೇಕ ಬೆಲೆಬಾಳುವ ವಸ್ತುಗಳು ಸಿಗಬಹುದು, ಅದೇ ರೀತಿ ಜೀವನ ಪಥದಲ್ಲಿ ಬರುವ ಎಲ್ಲಾ ಕ್ಷಣಗಳನ್ನು ನಿರ್ಭೀತ, ನಿರಾಳ, ನಿರಾತಂಕ ಮತ್ತು ಆಶಾದಾಯಕವಾಗಿ ಅನುಭವಿಸಿ ಸದ್ಮಾರ್ಗದಲಿ ಜಾಗರುಕರಿಗಿ ನಡೆದರೆ "ಮುತ್ತು ರತ್ನಗಳೆ" ನಾವಾಗಬಹುದು.


ಎಂ ಕೆ ಎಂ ಎಸ್

Monday, 15 May 2017

ಪ್ರಯತ್ನ :-

ಯಾವುದೇ ಕೆಲಸ ಅಥವಾ ಜೀವನದಲ್ಲಿ ನಮ್ಮನ್ನು ನಾವು ಸಂಪೂರ್ಣ, ಸಮರ್ಥ, ಸಮಯೋಚಿತ, ಸಮರ್ಪಕ ಹಾಗೂ ಅರ್ಥಪೂರ್ಣವಾಗಿ ಅರ್ಪಿಸಿಕೋಳ್ಳುವ ದಿಕ್ಕಿನೆಡೆಗೆ ತಾಳ್ಮೆಯುಕ್ತ ಪ್ರಯತ್ನ ನಿರಂತರವಾಗಿ ನಿರ್ವಹಿಸಿದರೆ, ಸಾಧನೆಯ ಶಿಖರದಲ್ಲಿ ಸದಾಕಾಲ ರಾರಾಜಿಸುವ ಶಕ್ತಿ ನಮದಾಗುತ್ತದೆ.


ಎಂ ಕೆ ಎಂ ಎಸ್

Tuesday, 9 May 2017

ಪ್ರೀತಿ - ಜೀವನ :-

               "ಪ್ರೀತಿ"

ಕಾಣದ ಕಡಲು, ತೀರದ ಮೌನ
ಮುಗಿಯದ ಪಯಣ, ನೋವಿನ ಕದನ

           "ಪ್ರೀತಿಯ ಜೀವನ"
          
ನಲ್ಮೆಯ ಗಾಯನಕೆ ಮೌನದ ರಾಗ
ಒಲುಮೆಯ ಜೀವನಕೆ ತುಂಬಿದ ಮೇಘ.


ಎಂ ಕೆ ಎಂ ಎಸ್

Monday, 8 May 2017

ಬದುಕಿನ ಪಥ :-

ಮಾತು ಮನಸ್ಸನ್ನ ಹಾಳು ಮಾಡುತ್ತೆ
ಮೌನ ಪ್ರೀತಿನ ಹೆಚ್ಚು ಮಾಡುತ್ತೆ
ಕೋಪ ಕನಸನ್ನ ಸುಟ್ಟು ಹಾಕುತ್ತೆ
ಸಹನೆ ಬಾಳಿನ ದಾರಿಗೆ ದೀಪವಾಗುತ್ತೆ

ಪ್ರೀತಿ ಮತ್ತು ಸಹಬಾಳ್ವೆಯ ಶಿಖರವನ್ನೆರಲು ಮೌನದ ಕನಸಿಗೆ ಸಹನೆಯ ಮಾತು ದಾರಿ ದೀಪವಾದರೆ ಬದುಕು ಅತ್ಯದ್ಭುತ.


ಎಂ ಕೆ ಎಂ ಎಸ್

Saturday, 22 April 2017

ಜೀವನ :-

ಭಯ ದೆವ್ವದ ರೂಪ, ದೈರ್ಯ ದೈವದ ಪ್ರತಿರೂಪ
ಕೋಪ ತಾಳ್ಮೆಯ ಶತ್ರು, ತಾಳ್ಮೆ ಜೀವನಕೆ ಅಘನ್ಯ ತುತ್ತು
ಸರಸ ರಸಮಯ ಜೀವನಕ್ಕೆ ಹರುಷದ ಔಷಧ
ವಿರಸ ಸಮರಸ ಬಾಳಿನ ಪಥಕೆ ವಿಶೇಷ ವಿಷ
ನಾನಿಲ್ಲದಿರೆ ಬಾಳಲಿ ಇರುವುದಿಲ್ಲ ಒಂಚುರು ಬೆಳವಣಿಗೆ
ನೀನಿಲ್ಲದಿರೆ ಅದೆ ಬಾಳಿನ ಬೆಳೆವಣಿಗೆಗೆ ಕೋನೆ ಮೆರವಣಿಗೆ.


- ಮುಕಮಾಸು

Tuesday, 18 April 2017

ಬುಲಾದೇನ :-🎈

ನನ್ನಾಸೆಯ ಮನ, ಒದ್ದಾಡಿದೆ ದಿನ, ನೆನೆ ನೆನೆದು ಈ ನಿನ್ನೊಲವನು
ಕಣ್ಣಹನಿ ಬಂದು, ಕಣ್ಣಂಚಲಿ ನಿಂತು, ಹೇಳುತಿದೆ ತನ್ನ ನೋವನು.

ಹೊನ್ನ ರಷ್ಮಿ ಬೆಳಕು ನೀನು ನನ್ನ ಬಾಳಿಗೆ
ಚಂದ ಖುಷಿಯ ಕನಸು ನೀನು ನನ್ನ ನಿದಿರೆಗೆ

ಕಪ್ಪು ಕಣ್ಣ ಕನ್ನಡಿಯಲ್ಲಿ, ನನ್ನ ಬಾಳ ಮುನ್ನುಡಿ ಬರೆದೆ
ಚಿಂತೆನೆಲ್ಲ ದೂರ ಮಾಡೊ, ನಗುವ ಅಂಗಡಿಯನ್ನು ತೆರೆದೆ
ಒಲವಿನ ಆಸೆ ಇಮ್ಮಡಿ ಮಾಡಿ, ಬಾಳಿನಲ್ಲಿ ನಿನೆಯಿಲ್ಲ

ನಿನಿಲ್ಲದೆ ಚಿನ್ನ, ಈ ಜೀವನ ಶೂನ್ಯ
ಆವರಿಸು ನಿ ಬೆಳಕಂತೆ ||2||

ಮನಸನು ಅರಳಿಸೊ ಖಾಯಿಲೆ ಪ್ರೀತಿಯನ
ಮರಣವ ಮರಳಿಸೊ ಔಷದ ಈ ವಿರಹವ

ಒಂದೆ ಒಂದು ಆಸೆ ನಂದು ನಿನ್ನ ಸೇರಿ
ಸಾಗಿಸೊದು ಬಾಳ ಬಂಡಿ ಪ್ರೀತಿ ಏರಿ

ಮರೆಯದಿರು ನಿ ಎಂದೆಂದಿಗೂ ||2||

ನನ್ನಾಸೆಯ ಮನ, ಒದ್ದಾಡಿದೆ ದಿನ, ನೆನೆ ನೆನೆದು ಈ ನಿನ್ನೊಲವನು ||2||


- ಮುಕಮಾಸು

Sunday, 16 April 2017

ರೋಜ :-

ಹೆಣ್ಣೆ ನೀನೇನಾ ಒಲವ ಹೊಂಬೆಳಕು ನನ್ನ ಹೃದಯದ ಮನೆಗೆ
ಕಣ್ಣೆ ನಿನ್ನಿಂದ ಕನಸ ಸಂಚಾರ ಪ್ರೀತಿ ಉಸಿರಿನ ಜೋತೆಗೆ
ಅಂದದ ತೋಟಕೆ,  ರೋಜ ಹೂ ಚಂದ
ಈ ಜೀವ ಬದುಕಿದೆ, ನಿನ್ನ ನೆನಪಿಂದ
ಆಸೆಗಳ ಪೂರೈಸಲು ಬಾರೆ

ಹೆಣ್ಣೆ ನೀನೇನಾ ಒಲವ ಉಯ್ಯಾಲೆ ನನ್ನ ಹೃದಯದ ಮನೆಗೆ ||

ನೆನಪಿನ ಹಕ್ಕಿಗಳು ರೆಕ್ಕೆ ಬಿಚ್ಚಿ ಹಾರಿದೆ
ಬಾನಿನ ದಾರಿಲಿ ಪ್ರೀತಿಗಾಗಿ ಕಾದಿದೆ
ಚಲುವಿನ ಮನೆಯನು ಗಾಳಿಯಲಿ ಕಟ್ಟುತ
ಪ್ರೀತಿಯ ಶಿಖರವ ಮತ್ತೆ ಮತ್ತೆ ಮುಟ್ಟುತ

ಇರವೆಯ ಗೂಡಿಗೆ, ಸಕ್ಕರೆ ಸವಿಯಂತೆ
ಇರುವೆಯ ನನ್ನಲಿ, ಧಮನಿಯ ನುಡಿಯಂತೆ

ಈ ಮನಸನು, ಸಂತೈಸಲು ಬಾರೆ

ಹೆಣ್ಣೆ ನೀನೇನಾ ಒಲವ ಉಯ್ಯಾಲೆ ನನ್ನ ಹೃದಯದ ಮನೆಗೆ||

ತಂಪು ತಂಪು ಚಳಿಯಲು ಬೆವರಿದೆ ಈ ಮನ
ನಿನ್ನ ಉಸಿರ ಶಾಖವು ಮರಳಿ ಬಂದು ಅನುದಿನ
ಕಣ್ಣ ಮುಚ್ಚಿ ಕುಳಿತರು ನೀನೆ ಎದುರು ಬಂದಂತೆ
ಸಮಯವು ಕೆಲಸಕೆ ರಜೆ ಹಾಕಿ ನಿಂತಂತೆ

ಆ ರತಿಯಂತೆ ಧರೆಗಿಳಿ ನೀನು
ಆರತಿಯಾಗಿ ಬೆಳಗುವೆ ನಾನು

ಮುಂಗಾರಿನ, ಮಿಂಚಂತೆ ನಿ ಬಾರೆ

ಹೆಣ್ಣೆ ನೀನೇನಾ ಒಲವ ಉಯ್ಯಾಲೆ ನನ್ನ ಹೃದಯದ ಮನೆಗೆ ||


ಮಕಮಾಸು

Thursday, 30 March 2017

ಪ್ರೀತಿ ಸಂತೆ :-

ಜೀವನ ಹೊಸ ರಾಗವೊ ಒಲವೆ ಒಮ್ಮೆ ನಿ ನಗುವಿನ ತಿಳಿ ತಂದರೆ
ಮುಗಿಯದ ಅನುರಾಗವೊ ಚಲುವೆ ಬದುಕಲಿ ನಿ ಜೋತೆ ಇದ್ದರೆ
ಬಿಡು ಮನವೆ  ಈ ಜಗದ ಚಿಂತೆಯ ಅದೆಲ್ಲ ಅರ್ಥವಿಲ್ಲದ ಕಂತೆ
ನೋಡೊಮ್ಮೆ ಸುಪ್ತ ಮನಸಿನ ಕಣ್ತೆರೆದು ನನ್ನೆದೆ ಪ್ರೀತಿಯ ಸಂತೆ

✍ - ಮುಕಮಾಸು

Tuesday, 28 March 2017

ಯುಗಾದಿ

ವರುಷಗಳು ಎಷ್ಟೇ ಉರುಳಿದರು, ಮತ್ತೊಂದು ವರುಷ ಮರಳಿ ಬರುತ್ತಿದೆ, ನಮ್ಮ ಸ್ವಾರಸ್ಯಕರ ಜೀವನದಲ್ಲಿ ಎದುರಾಗುವ ಆಶ್ಚರ್ಯಕರ ಕಷ್ಟವೇನಲ್ಲ ಮೀರಿ ಹೊಸದೊಂದು ಸಂತಸದ ಯುಗವಿದೆ.

ಅದು ಸುಖ ದುಃಖಗಳ ಸಮ್ಮಿಶ್ರಣದ ಆಶಾಕಿರಣ
ಪ್ರತಿ ಸಂವತ್ಸರದ ಹೊಸ ಮನ್ವಂತರ
ಬೆಸಿಗೆಯಲಿ ಚಿಗುರೊಡೆಯುವ ವನಸಿರಿಯ ಚೇತನ -

ಯುಗಾದಿ.

✍ ಮುಕಮಾಸು

Wednesday, 22 March 2017

ಒಲವು :-

ಅತೀಯಾಗಿ ಆಗಿರುವ ಒಲವಿಗೆ ಮಿತವಾಗಿ ಬೀಸೊ ತಂಗಾಳಿ ನಿನಾಗು
ಎದೆ ಆಳದಲಿ ಅಳಿಯದ ಕೊಳವೊಂದ ಮಾಡಿರುವೆ  ಮಂದಾರದ ಮೀನಾಗು
ಮನಸು ಮುಗಿಯದ ಚಳುವಳಿ ಮಾಡಿದೆ ಚಲುವೆ ಬಯಸಿ ನಿನ್ನ ಬಳಿಗೆ
ಹೆಮ್ಮರವಾಗಿ ಬೆಳೆದಿದೆ ಹರಸಿ ಹರಿಸು ನಿನ್ನೊಲವ ಪನ್ನೀರು ಪ್ರೀತಿ ಬೇರಿಗೆ.

- ಮುಕಮಾಸು