Saturday, 30 January 2016

ನೀ

ನಿನ್ನ ಮೈ ಕಾಂತಿಯದು ಸೂರ್ಯನ ರಷ್ಮಿಗೆ ಪೊರೆ ಬಿಟ್ಟ ಮರಿ ಹಾವು ಮಿಂಚಿದಂಗೆ
ನೆನಪಿನ ಪರಿಪಾಠವದು ಬೆಳಗ್ಗೆ ಎದ್ದು ಅರುಣ ಕಡಲಲಿ ಮಿಂದು ತನ್ನ ತಾನೆ ನೋಡಿದಂಗೆ
ಅರಿಯದ ಹೃದಯಕೆ ನಿನ್ನಾಗಮನ ಶಾಂತ ಕಡಲಿಗೆ ಸಣ್ಣ ಕಲ್ಲಿನ ಚುಂಬನದ ನಗೆಅಲೆಯಂತೆ
ಅಗಲಿಕೆಯ ನೋವದು ದಡದಲ್ಲಿ ಬಿದ್ದಿರುವ ಅರೆಜೀವದ ಕರಿಮೀನನ್ನು ರಣಹದ್ದು ಹೆಕ್ಕಿದಂತೆ

- ಮುಕಮಾಸು

Friday, 29 January 2016

ಬೆಲೆ

ನಮ್ಮ ಜೀವನದ ದಾರಿಯಲ್ಲಿ ನಡೆಯುವ ಪ್ರತಿಯೊಂದು ಘಟನೆಗಳಿಗೆ ಅದರದೇ ಆದ ಬೆಲೆ ಇರುತ್ತದೆ, ಕೇಲವೊಂದು ನಮಗೆ ಬೆಲೆ ತಂದು ಕೋಡುತ್ತವೆ, ಮತ್ತೆ ಕೇಲವಕ್ಕೆ ನಾವು ಬೆಲೆ ತೆರಬೇಕಾಗುತ್ತದೆ, ಮುಖ್ಯವಾಗಿ ಖುಷಿ ಮತ್ತು ದುಃಖ.ಖುಷಿಗಿಂತ ದುಃಖದ ನೋವಿಗೆ ಬೆಲೆ ಜಾಸ್ತಿ.
ಯಾಕೆಂದರೆ ಖುಷಿ,ಸಂತೋಷ,ಸಡಗರ, ಹೆಚ್ಚೆಂದರೆ ಮರೆಯಲಾರದ ನೆನಪೊಂದನ್ನ ಕೊಡಬಹುದು, ಅದೆ ದುಃಖದ ನೋವಿನ ಸಂಕಟ ಮರೆಯಲಾರದ ನೆನಪನ್ನ ಮತ್ತೆಂದು ನೆನೆಯದಂತೆ ಬೆಲೆ ಕಟ್ಟಲಾಗದ ನಮ್ಮನ್ನೆ ಶಾಶ್ವತವಾಗಿ ಮರೆಮಾಡಬಹುದು.

- ಮುಕಮಾಸು

Monday, 25 January 2016

ಜೀವನ

ಜೀವನ ಅನ್ನೋದು ಕಡಲಿದ್ದಂಗೆ, ಹೊರಗೆ ನಿಂತು ನೋಡಿದವರಿಗಲ್ಲ ಕೇವಲ ಅಲೆಗಳ ಅಬ್ಬರ ಮತ್ತು ನೀರಿನ ಭಯದ ಸೌಂದರ್ಯ ಇವೆರಡರ ಗೊಂದಲದ ಅನುಭವ ಸಿಗುತ್ತೆ, ಆದರೆ ನಿಜವಾದ ಜೀವನದ ಸುಖ ಮತ್ತು ಸುಖದ ಪ್ರಶಾಂತತೆಯ ನೈಜ ಅನುಭವ ಸಿಗಬೆಕೆಂದರೆ, ಕಡಲ ಆಳಕ್ಕಿಳಿದು ಛಲ ಬಿಡದೆ ಹುಡುಕಿ ಮುತ್ತು ಪಡೆವ ಅಂಬಿಗನಂತೆ ಜೀವನವನ್ನು ತಾಳ್ಮೆಯ ತರ್ಕದ ತಕ್ಕಡಿಯಲಿಟ್ಟು ತೂಗಬೇಕು.

- ಮುಕಮಾಸು

Sunday, 24 January 2016

ಸಂಸಾರ

ಸಂಸಾರ ಅನ್ನೋದು ಕಾಲಿಗೆ ಆಗಿರೋ ಹುಣ್ಣಿದ್ದಂಗೆ, ಒಂದು ಕಡೆ ನಿಲ್ಲೋಕೆ ಆಗಲ್ಲ ಮುಂದೆ ನಡೆಯೋಕು ಆಗಲ್ಲ ನೋವು ಕೋಡ್ತಯಿರುತ್ತೆ, ಆಗಂತ ಕಾಲನ್ನ ಕತ್ತರಿಸೋಕಾಗಲ್ಲ, ಪ್ರತಿ ನೋವಿನ ಹಿಂದೆ ಒಂದಲ್ಲ ಒಂದು ಸುಖ ಇದ್ದೆ ಇರುತ್ತದೆ, ಆದರೆ ತಾಳ್ಮೆಯ ನಡೆ ತುಂಬ ಮುಖ್ಯ ಯಾಕೆಂದರೆ, ನೋವಿನ ಅಲೆಗಿಂತ ಸುಖ ಅನ್ನೋ ಸಂಸಾರ ಸಾಗರ ಡೊಡ್ಡದು ಮತ್ತದೇ ಸಂಸಾರ ಸಾಗರದಲ್ಲಿ ಅಲೆ ಅನ್ನೋದು ಕೇವಲ ಒಂದು ಚಿಕ್ಕ ಭಾಗ ಅಷ್ಟೆ.

- ಮುಕಮಾಸು

Friday, 22 January 2016

ನನ್ನ ನಿನ್ನ ಮನಸು

ಹೂದೋಟದ ಬಯಲು ಮನೆಯಲಿ ಮಂಜಿನ ಮುತ್ತಿನನಿಯ ಸ್ನಾನ ಮಾಡಿ ಸೂರ್ಯನ ಶಾಖಕೆ ಮೈ ಒಣಗಿಸಿ ಹಸಿರು ಎಲೆಯ ಸಿರೆಯುಟ್ಟು ಶ್ರಂಗಾರವಾಗಿ ನಾಚಿ ನೆಲ ನೋಡುವ ಮುದ್ದಾದ ಗುಲಬಿಯಂತೆ,
ಕಂದಮ್ಮ ತಾಯಾಲ್ಕುಡಿದು ಹರುಷದಿ ನಕ್ಕು ನಗಿಸಿ ಆಯಾಸ ಆದಮೇಲೆ ನೀದಿರಮ್ಮನ ನಲ್ಮೆಯ ಮಡಿಲಿಗೆ ತನ್ನನ್ನು ಒಪ್ಪಿಸಿ ಲೋಕದ ಪರಿವನ್ನು ಮರೆತು ತಾಯೊಡಲ ಬಾಚಿ ಅಪ್ಪುವ ಮುಗ್ಧತೆಯಂತೆ.

" ನಿದಿರೆಯಿಂದೆದ್ದ ನಿನ್ನ ಕೋಮಲ ನಗೆಹೊನಲಿನ ಕಣ್ಮನಸು"

ಗರಿ ಬಂದ ಮರಿಹಕ್ಕಿ ಚಿಗುರೊಡೆದ ಮಾಮರದ ಮನೆಯ ಅಂಗಳದಲ್ಲಿ ಮೊದಲ ಬಾರಿ ಗಾಳಿಯ ಏರಿಳಿತ ನಾಚುವಂತೆ ಅಕ್ಕರೆಯ ಎಳೆ ರೆಕ್ಕೆಗಳ ತಾಯಿಯ ಅರಿವು ಮತ್ತು ನೆರವಿಲ್ಲದಂತೆ ಹರುಷದರಿ ಬಿಸಿದಂತೆ,
ಮೇಘರಾಜರಿಬ್ಬರ ಕದನದಲಿ ಕಂಗಾಲಾದ ಮಳೆ ಹಿಂಡು ಚದುರಿ ಹನಿಯಾಗಿ ಅಳುತ ಬರುವಾಗ ಮಿಂಚೊಂದು ಕತ್ತಲೆಯ ದಾರಿಗೆ ದೈರ್ಯದ ಬೆಳಕು ಚೆಲ್ಲಿ ಮರೆಯಾಗಿರೆ ಮಳೆಹನಿಯದು ಹರುಷದಲಿ ಅಮೃತ ಬಿಂದು ಆದಂತೆ.

"ಸುಳಿವಿಲ್ಲದೆ ಸುಳಿದ ನಿನ್ನ ಕಂಡಾಗ ನನ್ನ ಮನಸು"

- ಮುಕಮಾಸು

Thursday, 21 January 2016

ಅಲೆಮಾರಿ

ಅಲೆಮಾರಿಯ ಜೀವನ ನೀರ ಮೇಲಿನ ಅಲೆಯ ಸಂಗಿತದಂತೆ ಎಲ್ಲವನ್ನೂ ಹೊತ್ತು ತರುತ್ತಾರೆ ಮತ್ತು ಎಲ್ಲರಿಂದ ದೂರ ಉಳಿದಿರುತ್ತಾರೆ.
ಆದರೆ ಅವರ ಜೀವನಾನುಭವ ಮತ್ತು ಜೀವನ ಶೈಲಿಯ ಒಳಅರ್ಥದ ಪರಿಕಲ್ಪನೆಯ ಅರಿವು ಕೆಮ್ಮುಗಿಲ ಮೇಲೆ ಒಮ್ಮೊಮ್ಮೆ ಮುಡುವ ಕಾಮನಬಿಲ್ಲಿನ ತಿಳಿ ಬಣ್ಣಗಳ ಕಲರವದಂತೆ.

- ಮುಕಮಾಸು

Wednesday, 20 January 2016

ಸ್ವರ್ಗ

ಮಾಡೊ ಪ್ರತಿಯೊಂದು ಕೆಲಸದಲ್ಲಿ ಗುರಿ
ಮಾತಿನಲ್ಲಿ ತುಂಬಿದ ಅರ್ಥ
ನೋಟದಲ್ಲಿ ಒಳ್ಳೆಯ ಮನಸ್ಸಿದ್ದರೆ
ಈ ಭೂಮಿಯೇ ನೀ ಸ್ರುಷ್ಟಿಸಿದ ಸ್ವರ್ಗದಂತೆ.

- ಮುಕಮಾಸು

ಮೌನದ ಕೊನೆ

ಕಾಣೆಯಾದ ಹೊನ್ನ ಮಿಂಚು ಬಾನ ಅಂಚಲಿ
ಚಂದ್ರನಂತೆ ಹೊಮ್ಮಿಬಂತು ನೀನ್ನ ಕಣ್ಣಲಿ
ಮಂದಹಾಸ ಮೂಡಿದಂತೆ ಮನದ ಮೊಗದಲಿ
ಮೌನವನ್ನು ನೀ ಮುರಿದ ಆ ಮಧುರ ಕ್ಷಣದಲಿ.

-ಮುಕಮಾಸು

Monday, 18 January 2016

ಸತ್ಯ

ಕಣ್ಮುಂದೆ ಕಾಣೊ ಸುಳ್ಳೆಂಬ ನಾಟಕ ನೋಡೊಕೆ ಚೆನ್ನಾಗಿರುತ್ತೆ ಆದರೆ
ಬೆನ್ನಿಂದೆ ಮರೆಯಾಗಿರೊ ಸತ್ಯದ ಅಲೇದಾಟದ ಕೂಗು ಯಾರು ಕೇಳಲ್ಲ ಮತ್ತು ನೋಡಲ್ಲ.
ತಾಳ್ಮೆಯಿಂದ ಒಮ್ಮೆ ತಿರುಗಿ ನೋಡಿದಾಗ ಸತ್ಯ ಎನ್ನುವ ಸುಳ್ಳು, ಸುಳ್ಳಾಗಿರುವ ಸತ್ಯದ ಅಂಶ ತಿಳಿಯುತ್ತದೆ.
ಪ್ರತ್ಯಕ್ಷವಾಗಿ ಕಂಡರು, ಪ್ರತ್ಯೇಕವಾಗಿ ನೋಡು.

- ಮುಕಮಾಸು

ಸಂಕ್ರಾಂತಿಯ ಶುಭಾಶಯಗಳು

ತುಂಬಲಿ ಬಂದೆಮ್ಮ ಮನೆ ಮನವ, ಶಂಕರನ ಆಕೃತಿ
ನೀಡುತ ಎದುರಿಸಲು ಜೀವನವ, ಸರಿಸಮ ದೈರ್ಯದ ಸ್ಮೃತಿ
ಸಂಕ್ರಮಣ ಬದಲಿಸುವಂತೆ ದಾರಿಯ, ನೀಡುತ ಬೆಳಕಿನ ಸಿಹಿ
ನೆಡೆಸೊಣ ಜೀವನದ ಪಥ ಹಾಕುತ ನಗೆ ಹೊನಲಿನ ಸಹಿ
ಆಕ್ರಮಣ ಮಾಡಲಿ ಗೆಲುವು ಕಬ್ಬಿನ ರಸ ಕಾದು ಹಾದಂತೆ ಬೆಲ್ಲ       
ಈ ಸಂಕ್ರಾಂತಿ ಪರಿಹರಿಸಲಿ ಕಷ್ಟವ ಎಳ್ಳಷ್ಟೂ ಇರದಂತೆ ಎಲ್ಲ.

- ಮುಕಮಾಸು

Wednesday, 13 January 2016

ನನ್ನ ಪ್ರೇಮದ ಪರಿಯ ನಿನರಿಯೆ ಕನಕಾಂಗಿ

ನನ್ನ ಪ್ರೇಮದ ಪರಿಯ ನಿನರಿಯೆ ಕನಕಾಂಗಿ
ನಾನಿರುವೆ ಕೊನೆತನಕ ನದಿ ಸಾಗರದ ಮೈತ್ರಿಯಾಗಿ
ನುಡಿ ಒಂದೊಳ್ಳೆ ಮಾತನು ಹುಣ್ಣಿಮೆಯ ಬೆಳಕಾಗಿ
ನಾನಾಗುವೆ ನಿನ್ನ ಸುಖ ದುಃಖದ ಬಾಳಲಿ ಸಹಭಾಗಿ

ನನ್ನ ಪ್ರೇಮದ ಪರಿಯ ನಿನರಿಯೆ ಕನಕಾಂಗಿ ||

ನಿನ್ನ ಮೊಗ ಕಾಣದಿರಲು ನನ್ನೆದೆ ಕಡಲಲಿ ಶುರು ಭಾವನೆಯ ತಳಮಳದ ತರಂಗ
ಮನಕೆ ಬೆರೆನು ಬೆಡ ಸವೆಸಿದರೆ ಸಾಕು ಸವಿದು ಸಿಹಿ ದಾರಿಯ ನಿನ್ನ ಸಂಘ
ಚಲುವೆ ಚಂಚಲೆ ನಿ ಬರುವ ಸುಳಿವು ನಿಡದಿರಲು ಮನ ಬಾರಿಸಿದೆ ಮೌನದ ಮೃದಂಗ
ಒಲವಿನೂರಿನಲಿ ನನೊಬ್ಬನೆ ಇರುವೆ ದಯಮಾಡಿ ಬಂದು ಮಾಡು ನನ್ನ ಮೌನದ ಭಂಗ

ನನ್ನ ಪ್ರೇಮದ ಪರಿಯ ನಿನರಿಯೆ ಕನಕಾಂಗಿ ||

ಕಡಲ ದಡದಲಿ ಸುಡುವ ಬಿಸಿಲು ಬರೆಯುತಿದೆ ನಿನ್ನೆಸರ ನನ್ನೆದೆಯ ಮೇಲೆ ತಂಪು ಬೆವರ ಹನಿಯಲಿ
ಹಟಮಾಡಿ ಅಗಲದಿರು ಅರಸಿ ಮನದ ಪ್ರೇಮದರಮನೆಯ ನಾನಿರಲು ಜೋತೆಯಲಿ
ಸಾವೆಂಬ ಸೈನಿಕರು ಸುತ್ತುವರಿದಂತಾಗಿದೆ ಒಲವೆ ಅನುರಾಗದ ಸೆಲೆ ಇಲ್ಲದಿರೆ ನಿನ್ನೊಡಲಲಿ
ಗಾಳಿಯ ಅಕ್ರಮಣಕ್ಕೆ ನಲುಗುತಿರುವ ನನ್ನೆದೆ ಹಣತೆಯ ಬಂದು ಮರೆಮಾಚು ನಿನ್ನ ಪ್ರೀತಿ ಸೆರಗಲಿ.

ನನ್ನ ಪ್ರೇಮದ ಪರಿಯ ನಿನರಿಯೆ ಕನಕಾಂಗಿ

- ಮುಕಮಾಸು

Saturday, 9 January 2016

ನನ್ನೆದೆಯ ಹಾಡು

ಹೇಳೊಕೆ ಇನ್ನೊಂದಿದೆ ಮನಸಲ್ಲಿ ಕೆಮ್ಮೊಂದಿದೆ
ಆ ಕೆಮ್ಮು ಕೂಡ ನಿನ್ನೆಸರ ಗುನುಗುತ್ತಿದೆ
ಕಾಣೊಕೆ ಕನಸೊಂದಿದೆ ಕನಸಲ್ಲಿ ನಿನಿಲ್ಲದೆ
ಕಣ್ಣೆರಡು ನಿನ್ನನ್ನೆ ಕಣ್ಬಿಟ್ಟು ಹುಡುಕುತ್ತಿವೆ.

ಹೇಳೊಕೆ ಇನ್ನೊಂದಿದೆ ಮನಸಲ್ಲಿ ಕೆಮ್ಮೊಂದಿದೆ||

ಪ್ರೀತಿ ಅತಿಯಾಗಿ, ಆಸೆ ಮಿತಿಮೀರಿ
ಜೀವ ಜೋಕಾಲಿ ಆಡುತಿದೆ ಜೋರಾಗಿ ನನ್ನೆದೆಯ ಮರದಲಿ.
ನಾನು ತೇರಾಗಿ, ನೀನು ದೇವಿಯಾಗಿರಲು
ಮನ ಹೂವಾಗಿ ಕಾಯುತಿದೆ ನಲಿಯಲು ನಿನ್ನೆದೆಯ ಗುಡಿಯಲಿ.

ಹೇಳೊಕೆ ಇನ್ನೊಂದಿದೆ ಮನಸಲ್ಲಿ ಕೆಮ್ಮೊಂದಿದೆ||

ಉಲ್ಲಾಸ ಉಸಿರಾಗಿ, ಬಾಳೆಲ್ಲ ಹಸಿರಾಗಿ
ಭಾವನೆಯ ಭನದಲ್ಲಿ ಹಾರಾಡಿದೆ ಮನ ಬಾನಾಡಿಯಾಗಿ.
ಭಾವನೆ ಭಾರವಾಗಿ, ಪ್ರೀತಿಯಲಿ ಸೇರೆಯಾಗಿ
ಹರಿದಿದೆ ನಿನ್ ಕಣ್ಬೆಳಕು ನನ್ನ ನರನಾಡಿಯಲಿ ಕೊಲ್ಮಿಂಚಾಗಿ.

ಹೇಳೊಕೆ ಇನ್ನೊಂದಿದೆ ಮನಸಲ್ಲಿ ಕೆಮ್ಮೊಂದಿದೆ||

- ಮುಕಮಾಸು

Wednesday, 6 January 2016

ನೀ

ಹುಣ್ಣಿಮೆಯ ತಂಪಲಿ ನಿನ್ನ ನೆನೆದು ಮನ ಬೆವರುತಿದೆ
ನನ್ನ ಮೈಮರೆಸೊ ನಿನ್ನ ನಗೆ ನನ್ನನ್ನೆ ಮರೆಯುತಿದೆ
ಸುಳಿವು ಕೊಡದೆ ಸುಟ್ಟುಬಿಡು ಕುಡಿಗಣ್ಣ ನೋಟದಲಿ ನನ್ನ
ಕುಣಿವ ಕಡಲು ಸುಮ್ಮನಾಗಿದೆ ಸಂಜೆಯಲ್ಲಿ ಕಾಣದೆ ನಿನ್ನ
ಜಗವೆಲ್ಲ ಹಗೆಯಾದರು ಜೋತೆಯಿರು ನೀನು
ನೀ ಜೋತೆ ನೆಡೆದರೆ ತಂಪದಂತೆ ಸುಡುಬಾನು

- ಮುಕಮಾಸು

Tuesday, 5 January 2016

ಮನಸಿನ ಮಾತು

ಅಳುವ ಮನಸು ಒಳಗಿರಲು ಮೊಗಕೆ ನಾ ಹೇಗೆ ಹಾಕಲಿ ನಗುವಿನ ಪರದೆ
ನೀನಿರದೆ ಜಗದ ನಗೆ ಜಾತ್ರೆಯ ಸಡಗರದ ನಶೆಯ ಸಂತೆಯು ಕೂಡ ಖುಷಿ ತರದೆ
ನನ್ನೋಳ ತುಟಿಯಲಿ ನಗುವಾಗುವ ನನ್ನಾಸೆ ಅರಳುವ ಮುಂಚೆಯೆ ಕಮರುತಿದೆ
ಕಾಣದ ಹಣೆ ಬರಹವ ಓದಲು ಮನಸು ಮಾಡಿ ಅರಿಯದೆ ಮನ ಕೊರಗುತಿದೆ

- ಮುಕಮಾಸು