ಹೂದೋಟದ ಬಯಲು ಮನೆಯಲಿ ಮಂಜಿನ ಮುತ್ತಿನನಿಯ ಸ್ನಾನ ಮಾಡಿ ಸೂರ್ಯನ ಶಾಖಕೆ ಮೈ ಒಣಗಿಸಿ ಹಸಿರು ಎಲೆಯ ಸಿರೆಯುಟ್ಟು ಶ್ರಂಗಾರವಾಗಿ ನಾಚಿ ನೆಲ ನೋಡುವ ಮುದ್ದಾದ ಗುಲಬಿಯಂತೆ,
ಕಂದಮ್ಮ ತಾಯಾಲ್ಕುಡಿದು ಹರುಷದಿ ನಕ್ಕು ನಗಿಸಿ ಆಯಾಸ ಆದಮೇಲೆ ನೀದಿರಮ್ಮನ ನಲ್ಮೆಯ ಮಡಿಲಿಗೆ ತನ್ನನ್ನು ಒಪ್ಪಿಸಿ ಲೋಕದ ಪರಿವನ್ನು ಮರೆತು ತಾಯೊಡಲ ಬಾಚಿ ಅಪ್ಪುವ ಮುಗ್ಧತೆಯಂತೆ.
" ನಿದಿರೆಯಿಂದೆದ್ದ ನಿನ್ನ ಕೋಮಲ ನಗೆಹೊನಲಿನ ಕಣ್ಮನಸು"
ಗರಿ ಬಂದ ಮರಿಹಕ್ಕಿ ಚಿಗುರೊಡೆದ ಮಾಮರದ ಮನೆಯ ಅಂಗಳದಲ್ಲಿ ಮೊದಲ ಬಾರಿ ಗಾಳಿಯ ಏರಿಳಿತ ನಾಚುವಂತೆ ಅಕ್ಕರೆಯ ಎಳೆ ರೆಕ್ಕೆಗಳ ತಾಯಿಯ ಅರಿವು ಮತ್ತು ನೆರವಿಲ್ಲದಂತೆ ಹರುಷದರಿ ಬಿಸಿದಂತೆ,
ಮೇಘರಾಜರಿಬ್ಬರ ಕದನದಲಿ ಕಂಗಾಲಾದ ಮಳೆ ಹಿಂಡು ಚದುರಿ ಹನಿಯಾಗಿ ಅಳುತ ಬರುವಾಗ ಮಿಂಚೊಂದು ಕತ್ತಲೆಯ ದಾರಿಗೆ ದೈರ್ಯದ ಬೆಳಕು ಚೆಲ್ಲಿ ಮರೆಯಾಗಿರೆ ಮಳೆಹನಿಯದು ಹರುಷದಲಿ ಅಮೃತ ಬಿಂದು ಆದಂತೆ.
"ಸುಳಿವಿಲ್ಲದೆ ಸುಳಿದ ನಿನ್ನ ಕಂಡಾಗ ನನ್ನ ಮನಸು"
- ಮುಕಮಾಸು
No comments:
Post a Comment