ನನ್ನ ಪ್ರೇಮದ ಪರಿಯ ನಿನರಿಯೆ ಕನಕಾಂಗಿ
ನಾನಿರುವೆ ಕೊನೆತನಕ ನದಿ ಸಾಗರದ ಮೈತ್ರಿಯಾಗಿ
ನುಡಿ ಒಂದೊಳ್ಳೆ ಮಾತನು ಹುಣ್ಣಿಮೆಯ ಬೆಳಕಾಗಿ
ನಾನಾಗುವೆ ನಿನ್ನ ಸುಖ ದುಃಖದ ಬಾಳಲಿ ಸಹಭಾಗಿ
ನನ್ನ ಪ್ರೇಮದ ಪರಿಯ ನಿನರಿಯೆ ಕನಕಾಂಗಿ ||
ನಿನ್ನ ಮೊಗ ಕಾಣದಿರಲು ನನ್ನೆದೆ ಕಡಲಲಿ ಶುರು ಭಾವನೆಯ ತಳಮಳದ ತರಂಗ
ಮನಕೆ ಬೆರೆನು ಬೆಡ ಸವೆಸಿದರೆ ಸಾಕು ಸವಿದು ಸಿಹಿ ದಾರಿಯ ನಿನ್ನ ಸಂಘ
ಚಲುವೆ ಚಂಚಲೆ ನಿ ಬರುವ ಸುಳಿವು ನಿಡದಿರಲು ಮನ ಬಾರಿಸಿದೆ ಮೌನದ ಮೃದಂಗ
ಒಲವಿನೂರಿನಲಿ ನನೊಬ್ಬನೆ ಇರುವೆ ದಯಮಾಡಿ ಬಂದು ಮಾಡು ನನ್ನ ಮೌನದ ಭಂಗ
ನನ್ನ ಪ್ರೇಮದ ಪರಿಯ ನಿನರಿಯೆ ಕನಕಾಂಗಿ ||
ಕಡಲ ದಡದಲಿ ಸುಡುವ ಬಿಸಿಲು ಬರೆಯುತಿದೆ ನಿನ್ನೆಸರ ನನ್ನೆದೆಯ ಮೇಲೆ ತಂಪು ಬೆವರ ಹನಿಯಲಿ
ಹಟಮಾಡಿ ಅಗಲದಿರು ಅರಸಿ ಮನದ ಪ್ರೇಮದರಮನೆಯ ನಾನಿರಲು ಜೋತೆಯಲಿ
ಸಾವೆಂಬ ಸೈನಿಕರು ಸುತ್ತುವರಿದಂತಾಗಿದೆ ಒಲವೆ ಅನುರಾಗದ ಸೆಲೆ ಇಲ್ಲದಿರೆ ನಿನ್ನೊಡಲಲಿ
ಗಾಳಿಯ ಅಕ್ರಮಣಕ್ಕೆ ನಲುಗುತಿರುವ ನನ್ನೆದೆ ಹಣತೆಯ ಬಂದು ಮರೆಮಾಚು ನಿನ್ನ ಪ್ರೀತಿ ಸೆರಗಲಿ.
ನನ್ನ ಪ್ರೇಮದ ಪರಿಯ ನಿನರಿಯೆ ಕನಕಾಂಗಿ
- ಮುಕಮಾಸು
No comments:
Post a Comment