ಅಳುವ ಮನಸು ಒಳಗಿರಲು ಮೊಗಕೆ ನಾ ಹೇಗೆ ಹಾಕಲಿ ನಗುವಿನ ಪರದೆ ನೀನಿರದೆ ಜಗದ ನಗೆ ಜಾತ್ರೆಯ ಸಡಗರದ ನಶೆಯ ಸಂತೆಯು ಕೂಡ ಖುಷಿ ತರದೆ ನನ್ನೋಳ ತುಟಿಯಲಿ ನಗುವಾಗುವ ನನ್ನಾಸೆ ಅರಳುವ ಮುಂಚೆಯೆ ಕಮರುತಿದೆ ಕಾಣದ ಹಣೆ ಬರಹವ ಓದಲು ಮನಸು ಮಾಡಿ ಅರಿಯದೆ ಮನ ಕೊರಗುತಿದೆ
- ಮುಕಮಾಸು
No comments:
Post a Comment