ಇದ್ದರೆ ಇರಬೇಕು ಜೀವನ ಇರುವೆಯ ಸಾಲಂಗೆ
ಸವಿಬೇಕು ವಿಷಯವ ಗುಂಪಿರುವೆ ಬೆಲ್ಲವ ಮೆದ್ದಂಗೆ
ಹಂಚಿ ತಿನಬೇಕು ಕಾಗೆ ಇಡಿ ಅನ್ನಕೆ ಬಳಗವ ಕರೆದಂಗೆ
ತ್ಯಾಗದ ಮನಸಿರಬೇಕು ಗೆದ್ದಲು ಹೂಳುವಂಗೆ
- ಮುಕಮಾಸು
ಇದ್ದರೆ ಇರಬೇಕು ಜೀವನ ಇರುವೆಯ ಸಾಲಂಗೆ
ಸವಿಬೇಕು ವಿಷಯವ ಗುಂಪಿರುವೆ ಬೆಲ್ಲವ ಮೆದ್ದಂಗೆ
ಹಂಚಿ ತಿನಬೇಕು ಕಾಗೆ ಇಡಿ ಅನ್ನಕೆ ಬಳಗವ ಕರೆದಂಗೆ
ತ್ಯಾಗದ ಮನಸಿರಬೇಕು ಗೆದ್ದಲು ಹೂಳುವಂಗೆ
- ಮುಕಮಾಸು
ಸಮಯ ಮತ್ತು ಪರಿಸ್ಥಿತಿ ಎನ್ನುವುದು ಚಂಡಮಾರುತದ ಅಲೆಗಳಂತೆ, ಅಲೆಗಳ ಏರಿಳಿತಕ್ಕನುಸಾರವಾಗಿ ಈಜಿದವರು ದಡ ಸೇರುತ್ತಾರೆ, ಅಲೆಗಳೆದುರು ಈಜಲೊದವರು ಜೀವನದ ಗತಿಯಲ್ಲಿ ಕೊಚ್ಚಿ ಹೋಗುತ್ತಾರೆ. ಹಾಗೆಯೇ ಬದುಕಿನ ಪ್ರತಿ ನಡೆ ಮತ್ತು ನಿರ್ಧಾರ ಸ್ವಲ್ಪ ಸೂಕ್ಷ್ಮವಾಗಿರಲಿ, ಇಲ್ಲದಿದ್ದರೆ ಜೀವನವೆ ಚಂಡಮಾರುತವಾಗಿ ಮಾರ್ಪಾಡಾಗುತ್ತದೆ
:- ಮುಕಮಾಸು
ಅತಿಯಾದ ಆಸೆಯಿಂದ ಸಿಗುವುದು ಕೇವಲ ನಿರಾಸೆ ಮತ್ತು ದುಃಖ,
ಅತಿಯಾದ ನಂಬಿಕೆಯಿಂದ ಸಿಗುವುದು ನೋವು ಮತ್ತು ಬೇಸರ,
ಅತಿಯಾದ ಪ್ರೀತಿಯಿಂದ ಸಿಗುವುದು ಮೋಸ ಮತ್ತು ವಂಚನೆ.
ಆಸೆ, ನಂಬಿಕೆ ಮತ್ತು ಪ್ರೀತಿ ಈ ಮೂರನ್ನು ಮಿತವಾಗಿ ಬಯಸುವುದು ಮತ್ತು ಬಳಸುವುದು ಸುಖಕರ ಜೀವನಕ್ಕೆ ನಾಂದಿ ಮತ್ತು ಬುನಾದಿ.
:- ಮುಕಮಾಸು
ಏನೆಂದು ಬಣ್ಣಿಸಲಿ ನಿನ್ನ ನಗುವ ಬಗೆ :-
ಅದ ನೋಡಲು ತಾಯಾಲು ಕುಡಿದ ಮಗುವಿನ ಉಲ್ಲಸದ ಹೂ ನಗೆ
ಕಂಡಾಗ ತಾಯಿಯ ಕರುವೊಂದು ನಿಮಿರಿ ಕೂಗಿ ಕುಣಿವ ನಗೆ
ಹೂ ತಾಕಿದ ದುಂಬಿಯ ಮನಸಿನಲಿ ಹರಿವ ಹರುಷದ ನಗೆ
ಕರೆದಾಗ ಹಾಲ ಕಂಚಿನ ಪಾತ್ರೆಯ ಕೋಳಲಿಂದ ಹೊಮ್ಮುವ ಜೇಂಕಾರದ ನಗೆ
ಗಾಳಿಯ ಕಲರವಕೆ ಮಂಜಾನೆ ಹೂ ಬೀರುವ ಮೋಹಕ ನಗೆ
ಅಲೆಯೊಂದು ಕಡಲ ದಡವ ಬಿಗಿದಪ್ಪುವ ಪ್ರೀತಿಯ ನಗೆ
ಇದರೆಲ್ಲರ ಸಮ್ಮಿಶ್ರಣವೆ ನಿ ನಗುವ ನಗೆಯ ಬಗೆ
ಗೆಳತಿ ಏನಂದು ಬಣ್ಣಿಸಲಿ ನಿನ್ನ ನಗುವ ಬಗೆ.🙂
:- ಮುಕಮಾಸು
ನಗುವ ಸಾಲ ಕೊಡು ನಲ್ಲೆ ಬೆಳ್ಳಿಚುಕ್ಕಿಗೆ
ನೋಟದ ಪರಿಯ ನೀಡು ಸಾಲ ಬೆಳ್ಳಕ್ಕಿಗೆ
ಕಣ್ಣಳತೆ ದೂರಕ್ಕು ನಿನೇ ಕಾಣುತಿರವೆ ಕಾರಣ ಅರಿಯೆ ನಾ
ಮನದ ಕಳವಳ ಮಿತಿಮಿರಿದೆ ಸೇರದೆ ನಿನ್ನ ಉಳಿಯೆ ನಾ.
- ಮುಕಮಾಸು
ನನ್ನ ನಾ ಅರಿವ ಮುಂಚೆಯೆ ನಿನ್ನ ಅರಿಯಲೆತ್ನಿಸಿ ಸೋತಿದೆ ಪಾಪದ ಈ ಮನ
ಕಟ್ಟುವ ಮನಸ್ಸಿದೆ ಜೀವನದರಮನೆಯ ಆದರೆ, ಉಳಿದೆರುವುದು ಕೇವಲ ಮೌನ
ಮತ್ತೆ ಮರುಕಳಿಸಿ ಸೋಲಿನ ಸುನಾಮಿ ಪ್ರೀತಿ ಪ್ರಯತ್ನದಲಿ ಸೊರಗುತಿದೆ ದಿನ
ಎಳ್ಳಷ್ಟೂ ಆಸೆಯಿಲ್ಲ ಬದುಕಲು ನಿನಿಲ್ಲದೆ, ಸಾಯೊಕೆ ಇಷ್ಟವಿಲ್ಲ ನೆನೆದು ಮತ್ತೆ ನಿನ್ನ ನಾ......
-ಮುಕಮಾಸು
ನನ್ನೆದೆ ಮನೆ ಬಾಗಿಲಿಗೆ ತೊರಣ ನಿನ್ನ ನಗು
ನಿ ನಗಲು ಮನಸು ಆಗುವುದು ಮುಗ್ಧ ಮಗು
ನನಗೆ ಅರಿಯದಾಗಿದೆ ಒಲವಿನ ಈ ಸಿಹಿ ನೋವು
ನಿ ದೂರಾಗುವ ಮುನ್ನ ಬರಬಾರದೆ ಚಲುವ ಸಾವು.
- ಮುಕಮಾಸು
ನಿ ನಗಲು ಅರಳುವ ಅಧರಗಳು, ಇಡಿ ಮಿಂಚು ಬರೆದಂತೆ ನಿಳಾಕಾಶದಲಿ ರಂಗೋಲಿಯ
ತುಂಬು ಮೊಗದಲಿ ನೋಡಲು ನನ್ನ, ಸೂರ್ಯ ಹಾಡಿದಂತೆ ಹೊಂಗಿರಣ ಬೀರಿ ಭೂಮಿಗೆ ಸುವ್ವಾಲಿಯ.
- ಮುಕಮಾಸು
ಮನಸೆ ನೆನೆ ಒಮ್ಮೆ ಸವಿನೆನಪ ಮಳೆಯಲಿ ಮರೆವ ಮುನ್ನ
ನೋಡು ಒಲವ ಪುಟದಲಿ ನಿನ್ನ ಹೆಸರಿದೆ ತೆರೆದು ಚಲುವ ಕಣ್ಣ.
- ಮುಕಮಾಸು
"ಜೀವ"
ಜಿಡಿ ಸೊನೆಯ ಸವಿಯ ಬಯಸಿದೆ ಬಿಳಿ ಮೊಡದ ಬಾನಿರಲು
ಸಿಹಿ ಸೊನೆ ತಂದಂತೆ ಬರಿ ಮೊಡ, ಜೊತೆಯಲ್ಲಿ ನೀನಿರಲು.
"ಭಾವ"
ಹೂಗಂಧ ಚಲ್ಲುತಿದೆ ಎಲ್ಲೆಲ್ಲು ಚಂದದಲಿ ಬೆಡೆಂದರು
ಹೂದೊಟವೆ ಮನದೆದುರು ಬಂದಂತೆ ನಿ ನಗುತಿರಲು.
- ಮುಕಮಾಸು
ಕಣ್ಣಿಲ್ಲದೆ ತೆವಳಿ ಗುರಿ ಸೆರಲು ಹರಸಾಹಸ ಪಡುವ ಬಸವನುಳು ದಾರಿಮದ್ಯ ಕಣ್ಣಿರುವ ಮನುಜನ ಕಲ್ತುಳಿತಕ್ಕೆ ಕೋಲೆಯದಂತೆ
ತಾಯಿ ರೆಕ್ಕೆಯೊಡಲಲಿ ಗಟುಕು ತಿಂದು ಬೆಳೆದ ಮರಿಹಕ್ಕಿ ತಾಯೆದುರೆ ಬೇಟೆಗಾರನ ಚಾಣಕ್ಯ ಬಲೆಗೆ ಬಲಿಯದಂತೆ
ಪೂರ್ಣಚಂದ್ರನ ಮನೆಗೆ ಮನದರಸಿ ಅರಸಿ ಬರದಿರಲು ವಿರಹದ ಹಸಿವಿನಾರ್ಭಟ ಉರಗಕ್ಕದಂತೆ
ತನ್ನ ಆಹಾರದಿಂದ ಕಟ್ಟಿದ ಅರಮನೆಗೆ ಉರಗದ ಗೃಹಪ್ರವೇಶವಾಗಲು ಸಾವಿನ ನೋವು ಗೆದ್ದಿಲು ಹುಳುಗಾದಂತೆ
.........ನನ್ನ ಮನಸಿನ ಅಳಲು, ನಿ ಇಲ್ಲದಿರಲು........
- ಮುಕಮಾಸು
ಮನಸು ಹೊರಟಿದೆ ಕಾಣದೂರಿಗೆ ಕೊನೆಯಿರದ ದಾರಿಯಲಿ ಏರಿ ಕನಸಿನ ತೇರು
ನೆನೆದು ಬಿಕ್ಕಳಿಸಿದೆ ಭಾವನೆ ನೀನಿಲ್ಲದೆ, ಬರಿದಾದ ನನ್ನೆದೆಯ ಒಲವಿನ ಸೂರು
ಮಾಡಬಯಸಿದೆ ಸಮರಸದ ಜೀವನ ನಿನ್ನೊಡನೆ ಹಂಗಿಲ್ಲದೆ ಹೊಂಗೆ ನೆರಳಲಿ
ನೀನಿಲ್ಲದ ಪ್ರತಿಕ್ಷಣ ಬಿಡಿಸಲಾಗದ ಹುರುಳುಂಗುರ ಹೊಸೆದು
ಹಾಕಿದಂತೆ ನನ್ನ ಕೊರಳಲಿ
- ಮುಕಮಾಸು
ಭೂಮಿಯೊಳಗೆ ಜ್ವಾಲೆಯಿದೆ, ಆದ್ರು ಮ್ಯಾಲೆ ಹಸಿರು ತುಂಬೈತೆ
ಎದೆಯ ಒಳಗೆ ನೋವುಯಿದೆ, ಅದ್ರು ಮನ್ಸು ತುಂಬ ಹರ್ಸಾಗೈತೆ
ಬೆಂಕಿ ಉರಿದು ಬದ್ಕೊದಕ್ಕೆ ಬೇಕು ಗಾಳಿಯುಸಿರು
ನಾನು ಸಾಯ್ದೆ ಉಳಿಯೊದಕ್ಕೆ ಸಾಕು ನಿನ್ನ ಹೆಸರು
ನಾ ಮಾಡೊ ಪ್ರತಿ ನಿದ್ದೆಲಿ ಅತಿಯಾದ ಕನ್ಸು ನಿನ್ದಿರ್ಬೇಕು
ಕನಸಲ್ಲಿ ಬಂದು ಪ್ರೀತಿಯ ಕಾಗುಣಿತ ನೀನೆ ಕಲಿಸ್ಬೆಕು
ಜೀವ ಸೊರಗೊಗುತ್ತೆ ದೂರ ಸರಿದ್ರೆ ನನ್ನಿಂದ
ಮತ್ತೆ ಬದುಕೈತೆ ನೋವಲ್ಲು, ನೆನೆದು ನಿನ್ನಂದ.
- ಮುಕಮಾಸು
ಮನದ ಸೂರಿನಡಿ ಮನಸೂರೆ ಮಾಡಿರುವ ಮನಸೆ ಎಲ್ಲಿರುವೆ
ಕಣ್ಣಣತೆಯ ಬೆಳಕಲಿ ಬಾಳ ದಾರಿತೋರಿದ ಸೊಗಸೆ ಎಲ್ಲಿರುವೆ ||
ನಿನಿಲ್ಲದೆ ಸುಖ ಮರಿಚಿಕೆಯಾಗಿ ಖುಷಿ ಕಣ್ಮುಚ್ಚಿ ಬೆನ್ನು ಮಾಡಿ ಹೊರಟಿದೆ
ಕಣ್ಣಿರು ಇಂಗಿ ಬಿಸಿ ನೋವಿನ ಶಾಖಕೆ ಮನದಲ್ಲಿ ದುಗುಡ ಮನೆ ಮಾಡಿದೆ ನಿನಿಲ್ಲದೆ
ನಗು ಮರೆತ ತುಟಿಗಳು ಮೌನದ ಮನೆಯಲಿ ಸೆರೆಯಾಗಿ ಅಳುತಿವೆ
ಮನದ ಅಳುವ ಆಕ್ರಂದನ ಕೇಳಿ ಕೇಕೆ ಹಾಕಿ ನಗುತ ಕುಳಿತಿವೆ ನಗು
ಮನದ ಸೂರಿನಡಿ ಮನಸೂರೆ ಮಾಡಿರುವ ಮನಸೆ ಎಲ್ಲಿರುವೆ||
ಹೃದಯದಲಿ ಹೂದೋಟ ಬಾಡಿದೆ ನಿನ್ನ ಮುನಿಸು ಮರುಕಳಿಸಿ ಅರಳಿಸು ಒಲವಿನ ಹೂಗಳ ನಿ ಸುರಿಸಿ ನಗುವಿನ ಪನ್ನಿರು ಹೃದಯದಲಿ
ಕಣ್ಮುಚ್ಚಿ ಮನ ಸಾಗಿದೆ ಪ್ರೀತಿ ಹೆದ್ದಾರಿಯಲಿ ಯಾರ ಮಾತಿಗು ಕಿವಿಗೊಡದೆ
ಒಪ್ಪಿಗೆಯ ನೀಡು ಕೈಹಿಡಿದು ನೆಡೆಸಲು ಜೀವನ ರಸದಾರಿಯಲಿ ಕಣ್ಮುಚ್ಚಿ.
ಮನದ ಸೂರಿನಡಿ ಮನಸೂರೆ ಮಾಡಿರುವ ಮನಸೆ ಎಲ್ಲಿರುವೆ||
- ಮುಕಮಾಸು
ಎದೆಯಲಿ ಅಂತ್ಯವಿಲ್ಲದ ನೋವಿನ ಅಲೆ, ಮೀನಿನ ಗುಂಪಿರುವ ನಿಂತ ನೀರಿನಂತೆ
ಜೀವನದ ಸಂತೆಯಲಿ ಇಷ್ಟಾರ್ಥವಿಲ್ಲದ ಬದುಕು, ಪ್ರೀತಿಅಲೆ ಇರದ ಕಡಲಂತೆ
ಮಾಡಿದೆ ದಿನ, ಅನುದಿನ, ಮೌನದ ಜಪ, ನಿನ್ನೊಲವ ನೆನಪಿನ ಮನೆಯಂಗಳದೊಳಗೆ
ಸಿಲುಕಿ ಅನುಭವಿಸಿದೆ ಮನ ಯಾತನೆಯ ಸುಖ, ಪ್ರೀತಿ ಸುನಾಮಿಯಲೆಯುಂಗುರದೊಳಗೆ.
- ಮುಕಮಾಸು
ಹೂರಣವಿಲ್ಲದ ಹೋಳಿಗೆ, ದಾರಿತೋರದ ದೀವಿಗೆ
ತೋರಣವಿಲ್ಲದ ಹಬ್ಬ
ಸತ್ವವಿಲ್ಲದ ಭಾವನೆ, ಭಾವನೆ ಇಲ್ಲದ ಬಣ್ಣನೆ
ಆಸೆ ಇಲ್ಲದ ಬದುಕು
ಅರ್ಥವಿರದ ಗಾಯನ, ಮೌಲ್ಯವಿರದ ಜೀವನ
ಚಂದ್ರನಿಲ್ಲದ ಹುಣ್ಣಿಮೆ
ನೀನಿಲ್ಲದ ನಾನು, ನಾನಿಲ್ಲದ ನನ್ನ ಬಾಳ ದಾರಿ
ಕಡಲ ಸೇರದ ನದಿಯಂತೆ.
- ಮುಕಮಾಸು
ಹಾಲ್ದುಂಬಿದ ತೆನೆ ಹಕ್ಕಿಗೆ ಪ್ರೀಯ
ಮೈನೆರೆದ ಹೂ ದುಂಬಿಗೆ ಪ್ರೀಯ
ಹಾಲ್ಗೆನ್ನೆ ಚಂದ್ರ ಕಡಲಿಗೆ ಪ್ರೀಯ
ಕೆಮ್ಮುಗಿಲ ಕೆಂಪು ನವಿಲಿಗೆ ಪ್ರೀಯ
ಒಲವ ಕುಲುಮೆಯಲಿ ಕಾದಿರುವ ನನಗೆ ನಿನ್ನ ಸುಮೈತ್ರಿ ಪ್ರೀಯ.
- ಮುಕಮಾಸು
ಕಾಣದ ದಾರಿಯಲ್ಲಿ ಎಲ್ಲಿಗೊ ಈ ಪಯಣ
ಮೌನದ ಮಾತಿಗೆ ಆಗುತಿರಲು ಒಲವಿನ ಅವಸಾನ
ಪ್ರೀತಿ ನದಿಯ ಸುಳಿಯಲಿ ಸಿಕ್ಕ ಅರುಗಲ ನಾ
ಗುಟ್ಟಾಗಿ ಬಂದು ನೀಡುಬಾ ಮರು ಹುಟ್ಟು ನೀ.
- ಮುಕಮಾಸು.
ನಿಲ್ಲಲು ನೀ ನಸುನಾಚಿ, ಇಳಿಸಂಜೆಯ ತಿಳಿಸ್ವರ್ಣ ಬಣ್ಣದ ಬೆಳಕಿನೋಕುಳಿ ಭುವಿಯಲಿ ಮೂಡಿಸಿದಂತೆ ಅಚ್ಚರಿ
ಕೇಷರಾಶಿಗೆ ಮುಡಿದ ಕಣಗಲೆ ಹೂ, ಸೂರ್ಯನೆ ಖುದ್ದು ತಂದು ಮುಡಿಸಿದಂತೆ ಪಾರಿಜಾತವ ಮರೆತು ತನ್ನೆಲ್ಲ ದಿನಚರಿ.
ಕಣ್ಣ ಹೊಳಪದು, ರಾತ್ರಿಯೆಲ್ಲ ನೆನೆದು, ಮಳೆಯ ಮುಂಜಾವಲಿ ಮಂಜಿನೊದಿಕೆಯಿಂದೆದ್ದು ಬಂದ ಮರಿ ಅಣಬೆಯ ನಗುವಂತೆ
ಚಂದದ ಕಾರಳ್ಳದು, ಮೊಗದರಮನೆಯ ಬಾಗಿಲುಗಳಿಗಾಕಿದ ಸೊಗಸಿನ ಬೀಗಕೆ ಮೌನದ ಕೀಲಿಕೈಯಂತೆ.
- ಮುಕಮಾಸು
ಉರಣವಿಲ್ಲದ ಹೊಬ್ಬಟ್ಟು, ತೋರಣವಿಲ್ಲದ ಹಬ್ಬ
ಸತ್ವವಿಲ್ಲದ ಭಾವನೆ, ಸ್ವಾಥ೯ವಿಲ್ಲದ ಬದುಕು
ಅರ್ಥವಿರದ ಮಾತು, ಮೌಲ್ಯವಿರದ ಜೀವನ
ಚಂದ್ರನಿಲ್ಲದ ಹುಣ್ಣಿಮೆ, ಭಾವನೆ ಇಲ್ಲದ ಬಣ್ಣನೆ
ನೀನಿಲ್ಲದ ನಾನು, ನಾನಿಲ್ಲದ ಈ ಬಾಳ ದಾರಿ
ಕಡಲ ಸೇರದ ನದಿಯಂತೆ.
- ಮುಕಮಾಸು
ಮೌಲ್ಯ ನಿ ಅಪರೂಪ, ಅಮೂಲ್ಯ
ಬರಿಬೇಕು ನೀನಗೊಂದು ಸುಂದರ ಕಾವ್ಯ.
ಸದ್ಯಕ್ಕೆ ಇರಿಸಿಕೊ ಈ ಸಣ್ಣದೊಂದು ಕವನ
ನಿನ್ನ ಸೃಷ್ಟಿಸಿದ ಭಗವಂತನಿಗಿರಲಿ ನನ್ನ ನಮನ.
ಬಯಸಿದೆ ಮನಸು ಬರೆಯಲು ಬಾಳ ಮುನ್ನುಡಿಯ, ತನ್ನ ತಾ ಕಂಡು ನಿನ್ನ ಕಣ್ಕನ್ನಡಿಯಲಿ
ನಿನಿದ್ದೆ ಬಲಬದಿಯಲಿ, ನಾ ದಿಟ್ಟಿಸಲಿಲ್ಲ, ಆದರೂ ಬರೆದೆ ಹೇಗೆ, ಏಕೆ...? ಅಳಿಸಲಾಗದ ನಿನ್ನ ಚಿತ್ರವ ನನ್ನ ಕಣ್ಣಲಿ.
ಮರೆಸಿತು ಮನಸ ಕೆಲ ಕಾಲ ಕಂಡಮೇಲಂತೂ, ಮಲ್ಲಿಗೆ ದಿಂಡ ಮೇಲಿನ ದುಂಬಿಯಂತ ಕಾರಳ್ಳನಾ ನಾಸಿಕದ ಕೇಳಗೆ
ನಿ ಯೋಚಿಸಿ, ನಾಚಿ, ಉತ್ತರಿಸಿದ ಪರಿಯದು, ಕಡಲಾಳದಲಿ ಚಿಪ್ಪೊಂದು ಬಾಯ್ತೆರೆದು ಮುತ್ತನು ಮುದ್ದಿಸಿದಂತೆ ಮೆಲ್ಲಗೆ.
- ಮುಕಮಾಸು
ಕರಿ ಉಬ್ಬು ಆಡುತಿವೆ ಕತಕಳಿ ಕಣ್ಣ ಜೋತೆಸೆರಿ ನೀ ಕಾಣದಿರೆ ಕ್ಷಣ
ಕಾಣೊ ಪ್ರತಿ ನೋಟದಲು ನಿನ್ನ ಗುರುತಿರುವಂತೆ ಬಯಸುತಿದೆ ನನ್ನ ಈ ಮನ
ನಗುವ ಚಲ್ಲಿ ಚದುರಂಗದ ಮನೆಯಂತೆ ಚಲಿಸುತಿದೆ ಸಾಗರವ ಸೇರಲು ನೀರು
ನಲ್ಲೆ ಚಂದ್ರನ ಊರ ದಾರಿಗೆ ಬೆಳಕ ನೀಡುತಿರುವೆ ನೀ ಯಾರು, ಯಾವ ಊರು.
- ಮುಕಮಾಸು
ಮೊದಲ ಸೊನೆ ಮಳೆಯಲಿ ನೆನೆದ ಭೂಮಿಯಿಂದೊರಬರುವ ಸುವಾಸನೆಯಂತೆ ನಿನ್ನ ಮೈ ಕಂಪು
ಗಿಳಿ ಕಚ್ಚಿದ ಮೇಲೆ ಮಾಗಿ ರಂಗಾದ ಸೀಬೆಯಂತೆ, ನೀ ನಾಚಲು ಕೆನ್ನೆಯ ಕೆಂಪು.
ಮಳೆನಿಂತ ಮೇಲೆ ಸೂರ್ಯನೊಡಗುಡಿ ಬಂದ ಮಳೆ ಬಿಲ್ಲಂತೆ ನಿನ್ನ ಮೈಮಾಟ
ಒಮ್ಮೆ ಬಿಟ್ಟರೆ ಗುರಿ ತಪ್ಪದ ರಾಮ ಬಾಣದಂತೆ, ಆ ನಿನ್ನ ಸವಿಗಣ್ಣ ಕುಡಿನೋಟ.
- ಮುಕಮಾಸು
ನೀನು ತಿಳಿದಿರೊದು ನನಗೆ ಈಗೀಗ, ಆದರೆ ನನ್ನ ಮನಕೆ ಈಗ ನೀನೇ ಎಲ್ಲಾ.........
ಯಾವತ್ತೂ ನಾವಿರಲಿಲ್ಲ ಮಾತಾಡದೆ, ನಿ ಎದುರು ಕುಳಿತಿದ್ದರು ನಾನಿದ್ದೆ ಜೀವಂತ ಶವದಂತೆ.
ಮನಸು ವರ್ತಸಿದೆ ತನಗಿಷ್ಟ ಬಂದಂತೆ, ಒಮ್ಮೆ ಅಳಲು, ಮತ್ತೊಮ್ಮೆ ನಗಲು
ಈಗೀಗ ಮೌನದ ಮಾತು ಜಾಸ್ತಿ, ಮನಸಿನ ಮಾತು ಕಡಿಮೆ, ಮರೆಮಾಚಲು ಮನದಳಲು.
- ಮುಕಮಾಸು
ಜೀವನ ಚಿಂತೆಗಳ ಸಂತೆಯ ಸಮರವೊ, ಸಂತೆಯೊಳಗಿನ ಶಬ್ದದ ಸ್ವರಸ್ಯಕರವೊ
ಸುಖ ದುಃಖಗಳ ಹಾಲ್ಜೇನ ಸಮ್ಮಿಶ್ರಣವೊ, ಹಾಲ್ಜೇನಿನ ಅನುರಾಗದ ಅತಃಕರಣವೊ
ಸರಿ ತಪ್ಪುಗಳ ನಲ್ಮೆಯ ಪಯಣವೊ, ನಲ್ಮೆಯೋಳಗಿನ ನಗುವಿನ ಹರಣವೊ
ತಿರುವುಗಳೆ ತುಂಬಿರುವ ಒಲವಿನ ದಾರಿಯೊ, ಒಲವಿನ ದಾರಿಯಲ್ಲಿನ ಸಾವಿನ ಪರಿಯೊ
ತಿಳಿಯದೆ ಹಾಗುವ ಅಪರಾಧದಾಗರವೊ, ಅಪರಾಧವನ್ನೆ ಮಾಡಲಿರುವ ಬದುಕಿನ ಭರವೊ........
- ಮುಕಮಾಸು
ಬದುಕುವ ಆಸೆ ಕ್ಷಿಣಿಸುತ್ತಿದೆ, ಸಾಯುವ ಕನಸು ಶುರುವಾಗಿದೆ
ನೋವಿನ ಮೂಟೆಯ ಪ್ರಮಾಣ ಅತಿಯಾಗಿದೆ, ನಾ ಹೇಗೆ ಎಳೆಯಲಿ ಜೀವನದ ಗಾಡಿಯ ನೀನಿಲ್ಲದೆ.
ಸುಡುತಿದೆ ಮನ ಬೆಂಕಿಯ ಸುಳಿವಿಲ್ಲದೆ, ನಗುತಿದೆ ದಿನ ಸಾವಿನ ಅರಿವಿಲ್ಲದೆ
ಪ್ರತಿ ದಿನ ಬದುಕಿ ಸಾಯುವುದಕಿಂತ, ಸತ್ತು ನೆನಪಿನಲ್ಲಿ ಬದುಕುವುದು ಸುಖವಲ್ಲವೆ...ನೀನಿಲ್ಲದೆ ನಾ.....?
- ಮುಕಮಸು
ಮುಳ್ಳಿನ ಹಾಸಿಗೆ ಮುದ ನೀಡದು
ಮುರಿದ ಕೊಳಲಲಿ ಸ್ವರ ಹೊಮ್ಮದು.
ನಲ್ಮೆಯ, ನನ್ನೊಲುಮೆಯ,
ಚೆಲುವಿನ ಚಿಲುಮೆಯ,
ನನ್ನೋಲವೆ, ನೀನಿಲ್ಲದ ಸ್ವರ್ಗ ಎಂದು ಸುಖ ತರದು.
- ಮುಕಮಾಸು.
ನದಿಗಳ ಮೈತ್ರಿ ಸಂಗಮ
ಭಾವನೆಗಳ ಮೈತ್ರಿ ಸಂಬಂಧ
ಮನಸ್ಸುಗಳ ಮೈತ್ರಿ ಸಂಸಾರ
ಸ್ವರಗಳ ಮೈತ್ರಿ ಸರಿಗಮ
ನನ್ನ ನಿನ್ನ ಮೈತ್ರಿ ಸುಮೈತ್ರಿ.
- ಮುಕಮಾಸು.
ಈ ಪ್ರಪಂಚದಲ್ಲಿ ಕಳೆದು ಹೋದ ಕಾಲವನ್ನು ಮರಳಿ ಪಡೆಯುವಷ್ಟು ಶ್ರೀಮಂತರೆ ಇಲ್ಲ. ಕೈಯಲ್ಲಿ ಇರುವ ಅಮೂಲ್ಯವಾದ ಕಾಲವನ್ನು ಯಾರು ಸಂಪೂರ್ಣವಾಗಿ ಬಳಸಿಕೊಂಡು ಅನುಭವಿಸುತ್ತಾರೊ ಅವರೆ ಶ್ರೀಮಂತರು.....
-ಮುಕಮಾಸು
ಜಗದೆಲ್ಲ ಮಹಾಕವಿಗಳು ಸೇರಿ ಮಾಡಿದ ಸ್ವರ ಯಾಗದಲುಟ್ಟಿ ಪಸರಿಸಿದ ಸಾಹಿತ್ಯ ಭಂಡಾರ ನಿ
ಮಲೆನಾಡಿನ ಬೆಟ್ಟದಸಿರ ಸಿರಿ ಸೊಬಗಿನಲಿ ಕವಿಯೊಬ್ಬನ ಕಲ್ಪನೆಗರಳಿದ ಪ್ರೇಮ ಕುಸುಮ ನಿ
ಸುಡು ಭೂಮಿಗೆ ವರುಣನ ವಿರಹದ ಕಕಂಬನಿ ತಾಕಲು ಜನಿಸಿದ ಸರಸದ ಜೆಂಕಾರ ನಿ
ವಿಶ್ವದೆಲ್ಲೆಡೆ ಅರ್ಥಪೂರ್ಣ ಜೀವನದ ತತ್ವ ಸಾರಲು ಉದಯಿಸಿದ ಶಾಂತಿಯುತ ಓಂಕಾರ ನಿ
- ಮುಕಮಾಸು
"ನಾನು" ನನ್ನದೆಂಬುದನ್ನು ಬಿಟ್ಟು, ನಿನ್ನದೆಂದು ಬದುಕಿ ದುಡಿದರೆ, ನೀನೆಂಬ ಪರಮಾತ್ಮ "ನಾನು" ಸಾಯುವತನಕ ಸಂತ್ರುಪ್ತಿಯ ಜೀವನವನ್ನು ಕೊಟ್ಟು ಕಾಪಾಡುತ್ತಾನೆ.
- ಮುಕಮಾಸು
ಜೋಡಿಹಕ್ಕಿ ರೆಕ್ಕೆಯ ಗಾಳಿಯೆ ಹುಡುಕಿ ಆರಿದಂತೆ
ಅನುರಾಗ ಬಯಸಿ ಬಂದ ದುಂಬಿಯ ಹೂವೆ ಇರಿದಂತೆ
ದಾರಿಯೆ ಎದುರಾಗಿ ನಿಂತು ದಿಕ್ಕನ್ನೆ ದಿಕ್ಕು ತಪ್ಪಿಸಿದಂತೆ
ನೀರೆ ಬಾಯಾರಿ ಕಡಲನ್ನೆ ಬರಿದು ಮಾಡಿದಂತೆ
ಅಮೃತ ಉಣಿಸೊ ತಾಯೆ ಕಂದನ ಕೊಂದಂತೆ
ಹಿಮ ಬೀರುವ ಚಂದ್ರ ಬೆಂಕಿಯ ಮಳೆಗರೆದಂತೆ
ಜಗ ಕಯ್ವ ದೈವವೆ ಮನುಜನ ಶಿರ ಕಡಿದಂತೆ
ಸುರ ಪಾನವೆ ಅಸುರರ ಹುಡುಕಿ ಕರೆದಂತೆ
ಚಲುವಿನೊಲವೆ, ನನ್ನೆದೆಯ ಮನೆಗೆ ನಿ ಬೆನ್ನು ಮಾಡಿ ನಿಲ್ಲಲು ಮನದಳದಲಿ ನೋವಿನ ತರಂಗ ತಳಮಳ.......|||
- ಮುಕಮಾಸು
ಕಲ್ಮನಸ ಮೇಲೆ ಚಲ್ಲಿ ನಸುನಗೆಯ ಪನ್ನೀರು ಬೆಳೆದವಳೆ ಪ್ರೀತಿಯ ಗರಿಕೆ
ನನ್ನೊಳು ಬೆಳೆದಾಳೆ ಪ್ರೀತಿಯ ಗರಿಕೆ
ಬಿಂಕವ ಮೈತುಂಬಿ ಬಂದವಳೆ ಕನಸಿನ ಮನೆಯಗೆ, ತಿರಿಸೊಕೆ ಒಲವಿನ ಹರಿಕಿ
ಚಲ್ವಿ ಬಂದಾಳೆ ತಿರಿಸೊಕೆ ಒಲವಿನ ಹರಿಕಿ
ಕಣ್ಣೆರಡು ನೀಡಿರಲು ಬೆಳಕು ತುಪ್ಪದಾರತಿಯಂತೆ, ಚೆಂದಿರನು ಬಂದಿಹ ಪಡುತ್ತ ಸೊಜಿಗ
ಎದುರಾಗಿ ಚೆಂದ್ರ ಪಡುತಿಹನು ಸೊಜಿಗ
ತಲೆ ಬಾಗಿ ನಗುತ ಲಯವಾಗಿ ನಡೆದಿರಲು ನಿ, ದಾರ ಸೆರೆಯಾದಂತೆ ಸೂಜಿಗ
ಸೆರೆಯಾದಂತೆ ದಾರ ಕಣ್ಣಿನ ಸೂಜಿಗ
ಅರಿಯದೆ ಪ್ರೀತಿ ಪ್ರಮಾಣ ಇಳಿದಿಹೆನು ಒಲವಿನ ಕಡಲಿಗೆ ಮಾಡಿ ಮೌನ ಪ್ರಣಾಮ
ಮೌನದಲಿ ಮಾಡಿ ಒಲವ ಕಡಲಿಗೆ ಪ್ರಣಾಮ
ಸುರಿಮಳೆಯ ನುಡುವಲ್ಲಿ ದಾಟಿ ವಿರಹದ ಕೋಟೆ ಬಂದಿರುವೆ ಬಯಸಿ ನಿನ್ನ ಕೊಡಬೇಡ ವಿರಾಮ
ಗೆಳತಿ ಚಲುವಿನಾಟಕೆ ಕೊಡಬೇಡ ನಿ ವಿರಾಮ.
- ಮುಕಮಾಸು
ಭೂಮಿಯೊಳಗೆ ಜ್ವಾಲೆಯಿದೆ, ಆದ್ರು ಮ್ಯಾಲೆ ಹಸಿರು ತುಂಬೈತೆ
ಎದೆಯ ಒಳಗೆ ನೋವುಯಿದೆ, ಅದ್ರು ಮನ್ಸು ತುಂಬ ಹರ್ಸಾಗೈತೆ
ಬೆಂಕಿ ಉರಿದು ಬದ್ಕೊದಕ್ಕೆ ಬೇಕು ಗಾಳಿಯುಸಿರು
ನಾನು ಸಾಯ್ದೆ ಉಳಿಯೊದಕ್ಕೆ ಸಾಕು ನಿನ್ನ ಹೆಸರು
ನಾ ಮಾಡೊ ಪ್ರತಿ ನಿದ್ದೆಲಿ ಅತಿಯಾದ ಕನ್ಸು ನಿನ್ದಿರ್ಬೇಕು
ಕನಸಲ್ಲಿ ಬಂದು ಪ್ರೀತಿಯ ಕಾಗುಣಿತ ನೀನೆ ಕಲಿಸ್ಬೆಕು
ಜೀವ ಸೊರಗೊಗುತ್ತೆ ದೂರ ಸರಿದ್ರೆ ನನ್ನಿಂದ
ಮತ್ತೆ ಬದುಕೈತೆ ನೋವಲ್ಲು, ನೆನೆದು ನಿನ್ನಂದ
- ಮುಕಮಾಸು
ಚಿಂತೆ ಮನಸ್ಸನ್ನು ಸುಟ್ಟು ಚಿತೆಯನ್ನೆರಿಸುತ್ತದೆ
ಚಿತೆ ದೇಹವನ್ನ ಸುಟ್ಟು ಚಿಂತೆಯನ್ನಳಿಸುತ್ತದೆ.
- ಮುಕಮಾಸು
ಮುಂಗುರುಳು ನಿನ್ನ ಕಣ್ಣ ಮರೆ ಮಾಡೊ ಪರಿ ಚನ್ನ
ನೋಡು ಕೂದಲೆಳೆಯ ನಡುವಲಿ ಕೊಲ್ಲುವಂತೆ ನನ್ನ
ಕಲ್ಲು ಶಿಲೆಯಾಗುವುದು ತಿಂದ ಮೇಲೆ ಹುಳಿ ಪೆಟ್ಟ ಅನ್ನ
ಪೂಜಿಸುವೆ ನಿನ್ನಾಕೃತಿಯ ನನ್ನ ಎದೆಗೂಡಿಯಲ್ಲಿಟ್ಟು ಚಿನ್ನ
- ಮುಕಮಾಸು
ಪ್ರತಿನಿತ್ಯ ಬರುವವಳು ಬಂದೆನ್ನ ಕಾಡೊಳು
ಕಣ್ಬಿಟ್ಟರೆ ಮರೆಯಾಗೊ ಮಿಂಚುಳ್ಳಿ ನಿನ್ಯಾರೆ
ನೀರಂತ ಗುಣದೊಳು ತನುಮನವ ಕುಣಿಸೊಳು
ಹಾಲ್ನಗೆಯ ಚೆಲ್ಲೊ ಚಂದುಳ್ಳಿ ನಿನ್ಯಾರೆ
ಇಬ್ಬನಿಯ ತಂಪಿವಳು ಸಂಪಿಗೆಯ ಕಂಪಿವಳು
ನೀರಲೆಗೆ ನಗು ಸಾಲ ಕೊಡುವ ನೀರೆ ನಿನ್ಯಾರೆ
ಹಾಲ್ಗಡಲ ನಗೆಯೊಳು ಸಿಹಿ ಮುತ್ತು ನೀಡೊಳು
ಜೇನಿನ ಹೊಳೆಗೊಡತಿ ನನ್ನೊಲವೆ ನಿನ್ಯಾರೆ
ಹೊತ್ತಿಲ್ಲದೆ ಸುಳಿಯೊಳು ಗೊತ್ತಿಲ್ಲದೆ ಮನ ಮರೆಸೊಳು
ಎತ್ತಿನ ಗಂಟೆ ನಾದದಕ್ಕೆ ನಡೆವ ವಯ್ಯಾರಿ ನಿನ್ಯಾರೆ
- ಮುಕಮಾಸು
ಮಾತು ಮುತ್ತಿನಂತೆ ಸೂಕ್ಷ್ಮ, ಕಾನೂನು ಕಲ್ಲಿನಂತೆ ಕಠೋರ
ಪ್ರೀತಿ ಮತ್ತಿನ ಅಮಲು, ಯಮಾರಿದ್ರೆ ಎಳ್ಳು ನೀರಿನ ಮಜಲು
ಆಸೆ ಆಕಾಶದಷ್ಟು ವಿಶಾಲ, ಆಯಸ್ಸು ದೇವರ ಚಿತ್ತ ಚಂಚಲ
- ಮುಕಮಾಸು
ತಂಗಾಳಿಯ ಜೋತೆ ತುಂತುರು ಚಲ್ಲುವ ಚಲಿಸುವ ಮೋಡ, ಮನಸ್ಸು ನಮ್ಮ ಹಿಡಿತದಲ್ಲಿದ್ದರೆ
ನಡುಹಗಲಿನ ಸುಡುಭಾನಿಗೆ ಉರಿಬೆಂಕಿಯ ಬಿಸಿಗಾಳಿಯ ಹಾಡು, ನಾವು ಮನಸ್ಸಿನ ಹಿಡಿತದಲ್ಲಿದ್ದರೆ.
- ಮುಕಮಾಸು
ಬೆಟ್ಟದಿಂದ ಉಕ್ಕಿ ಹರಿವ ಹಾಲ್ನೊರೆಯ ಝರಿಯು ನಿಂತು ಕೇಳುತಿದೆ, ಚಲುವ ನೀರೆ ನಿನ್ಯಾರೆ
ಗೂಡು ಬಿಟ್ಟು ಹೊರಟ ಹಕ್ಕಿ ರೆಕ್ಕೆಗಳ ಏರಿಳಿತವ ನಿಲ್ಲಿಸಿ ಕೇಳಿಹುದು, ಗಾಳಿಗಿಂತ ಕೋಮಲೆ ನಿನ್ಯಾರೆ
ಪಂಜು ಹಿಡಿದು ಮುಂಜಾನೆಯ ಸೂರ್ಯ ಕೇಳುತಿಹನು, ಸುರಿವ ಮಂಜಿಗಿಂತ ಸೊಗಸಿನ ನಂಜಿ ನಿನ್ಯಾರೆ
ಕಡುಗಪ್ಪು ಕಾನನದಲಿ ಕಾಜಾಣ ಮುಕಾಗಿ ಕೇಳುತಿದೆ, ಮೆಲು ದನಿಯ ಮನಸೆ ನಿನ್ಯಾರೆ
ಮನಸು ಮುದ್ದಾಗಿ ಕೇಳುತಿದೆ ನಿ ಬಂದು ಸೇರು ನನ್ನೊಲವ ಸೂರ ಮನಸಾರೆ.
- ಮುಕಮಾಸು
ಬಾ ಒಲವೆ ಬಳಿಗೆ, ಇಳಿ ಸಂಜೆಯ ಸೂರ್ಯ ಇಳಿದು ಬಂದಂತೆ ಇಳೆಗೆ ಹಾಡುತ ಗೋಧೂಳಿ ರಾಗ
ಶ್ರುಂಗಾರ ಮಜಲಿನ ರೋಮಾಂಚನ ರಾಗಕೆ, ಕರಗಿ ಪನ್ನೀರಾಗಿ ಹರಿದಂತೆ ತುಂಬು ಗರ್ಭಿಣಿ ಮೇಘ.
ಪ್ರೇಮದ ಸುಧೆ ಬಡಿಸು, ಮೂಡಣ ತಿಳಿ ಸೂರ್ಯನ ರಶ್ಮಿ ಬರೆದಂತೆ ಕಡಲಲೆಗಳ ಮೇಲೆ ಹೊಂಬೆಳಕ ಕವನ
ಅದಂತೆ ಕಡುಗೆಂಪು ನಿನ್ನ ಕೆನ್ನೆ, ಆದಾಗ ಅಗಾಧ ನನ್ನೊಲವ ಸೌಂದರ್ಯ ಜನನ.
- ಮುಕಮಾಸು
ಚಂದ್ರ ಚಳಿ ತಾಳದೆ ಮೊಡದ ಮೊರೆ ಹೊದಂತೆ, ಗೆಳತಿ ನಿ ರೇಷಿಮೆಯ ನೆರಿಗೆಯ ಸೆರಗಲ್ಲಿ ಮರೆಯಾಗಲು
ನಕ್ಷತ್ರಕ್ಕೆ ನಗುವ ಪಾಠ ಕಲಿಸಿದಂತೆ, ನಲ್ಲೆ ಸಿಂಧೂರ ನಿನ್ನಣೆಯ ಮೇಲೆ ನಾಚುತಿರಲು
ಕಾಡಿಗೆಯ ಕಣ್ಣದು ಕಾಡುತಿದೆ ಕನಸಲಿ, ಹುಣ್ಣಿಮೆಯದು
ರಮಿಸುವಂತೆ ಕಡಲ
ಬಾಡುತಿದೆ ನನ್ನೆದೆಯ ಕಮಲ, ಸೆರದಿರಲು ಪ್ರೀತಿ ಪನ್ನಿರಂತ ನಿನ್ನೊಡಲ.
- ಮುಕಮಾಸು
ಮಿಂಚಿಹೊದ ಕಾಲಕ್ಕೆ ಚಿಂತಿಸಿ, ಮುಂದೆಂದೊ ಬರುವ ಬರಗಾಲದ ಬಗ್ಗೆ ಯೋಚಿಸಿ, ಕೈಲಿರುವ ಸವಿಗಾಲವನು ಕೈ ಚೆಲ್ಲಿ ಕೂರುವುದು ಮುರ್ಖತನದ ಪರಮಾವಧಿ ಅಲ್ಲವೆ....?
- ಮುಕಮಾಸು
ಅಲೆಯೊಂದು ಅಲೆದಾಡಿ, ಅನುರಾಗ ತಾ ಬಯಸಿ ಬಂದಾಗಿದೆ ದಡಕೆ
ಅಲೆದಾಟ ಸಾಕಾಗಿ, ಮನಸಾರೆ ನಿನ್ನೊಲವ ಸಿಹಿ ಕಾಟ ಬೇಕಾಗಿದೆ ಮನಕೆ
ಹಿಮದ ಚಲುವೆಲ್ಲ ಕರಗಿ ನೀರಾಗಿ ಹರಿಯುತಿದೆ, ಸೂರ್ಯನ ಸಿಹಿ ಶಾಖಕೆ
ನನ್ನ ಮನದ ಹಸಿರಿಲ್ಲ ಕೋರಗಿ ಸೊರಗುತಿದೆ, ಚಂದ್ರನ ಹಸಿ ತಾಪಕೆ
- ಮುಕಮಾಸು
ಎನೊ ಒಂತರ ಮನಸಿಗೆ ಹರುಷ ಕಂಡಗ ನಿನ್ನ, ತಾಯಿ ಹಾಲ್ಕುಡಿದು ಬಿಗುವ ಕರುತರ
ಕಣದ ಮರುಕ್ಷಣ ತಾಳದ ತಳಮಳ ನನ್ನೊಳಗೆ, ತಾಯಿ ಹಾಲ್ ಬಿಡಿಸಿದ ಮಗುತರ
ಮನಸು ಹೆದರಿ ಅಳುತಿದೆ ನೋವಲಿ, ರಣ ಹದ್ದುಗಳ ಗುಂಪಲಿ ಸಿಕ್ಕ ಪಾರಿವಾಳದಂಗೆ
ಉಳಿಸು ನಿ ಬಂದು ಈ ಜೀವವ, ಸಾವನ್ನೆ ಸಾಯಿಸೊ ಪ್ರೀತಿ ಅಮೃತದಂಗೆ.
- ಮುಕಮಾಸು
ಮನ ಕೋರಗಿ ಕರಗುತಿದೆ, ಆಸೆಯಲ್ಲ
ನನ್ನ, ನಗು ಮರೆಯಾಗುತಿದೆ, ನಿನ್ನ ನಗುವಲ್ಲ
ನನ್ನ ಜೀವನದ ದಿನ ಸವೆಯುತಿದೆ, ನಿನ್ನ ನೆನಪಲ್ಲ
ನಾ ಹಿಂತಿರುಗಿ ನೋಡಲು ನಾ ಬಂದ ಜೀವನದ ದಾರಿಯಿದೆ, ನೀನಿಲ್ಲ.
ನೀನಿರದ ಮೇಲೆ ನಾನಿಲ್ಲ, ನೀ ಇಲ್ಲದಿರೊ ನನ್ನ ಈ ಬಾಳ ದಾರಿಗೆ ಅರ್ಥವೇ ಇಲ್ಲ.
ಅರ್ಥವಿರದ ಈ ಸ್ವಾರ್ಥ ಬದುಕಿನಲಿ ಪ್ರೀತಿಯ ಪಾತ್ರವೆ ಇಲ್ಲದ ಮೇಲೆ ನಾ ಬದುಕಿ, ಏನು ತಪ್ಪನ್ನೆ ಮಾಡದ ನನ್ನ ಹಾಗು ಹಲವು ಮುಗ್ಧ ಮನಗಳಿಗೆ ನೋವು ನೀಡುವುದು ಕನಸಲ್ಲಿ ಕಾಣದ ಮರಿಚಿಕೆಗೆ ಅರಿಯದೆ ಭೇಟಿಯಾಗಿ ಭೇಟೆಯಾದಂತೆ.
- ಮುಕಮಾಸು
ನಮ್ಮ ಬುದ್ಧಿಯನ್ನು ಕೋಪದ ಕೈಗೆ ಕೊಡದೆ, ಪರಿಸ್ಥಿತಿಗಳನ್ನು ಸಮಯದ ಬುನಾದಿಯ ಮೇಲಿಟ್ಟು, ಹೊಂದಾಣಿಕೆ ಮತ್ತು ಪರಿಶ್ರಮದ ಗೋಡೆಗಳನ್ನು ಕಟ್ಟಿ, ತಾಳ್ಮೆಯ ಚಾವಣಿ ಹಾಕಿದರೆ ಜೀವನವೆನ್ನುವುದು ಮುತೈದೆ ಪೂಜಿಸುವ ತುಳಸಿಕಟ್ಟೆಯ ಆರೋಗ್ಯಕರ ನಗುವಿನಂತೆ.
- ಮುಕಮಾಸು
ದೂರವಿದ್ದರು ಮನದ ಪ್ರೀತಿಯ ದುಡಿಮೆಗೆ ಕಮ್ಮಿಯಿಲ್ಲ
ನೆನೆದಾಗ ನಿನ್ನ ನನ್ನಿಯಿ ಮನ ಎನಿದ್ದರೂ ಕಡಿಮೆನೆ ಎಲ್ಲ.
ಯಾರು ಎನೆ ಹೇಳಿದ್ರು ಕೇಳೋಕೆ ರೆಡಿಯಿಲ್ಲ ನನ್ನ ಕಟ್ಟತನ
ಹಟದ ಮನೆಯಲ್ಲೇ ವಾಸ ಮಾಡುತಿದೆ ಗೊತ್ತಿದ್ರು ನನ್ನ ಹುಚ್ಚತನ.
ನಿನ್ನ ಮರೆಯುವುದು ಮನಕೆ ಮುಗಿಯದ ಕರಿಮೊಡ ಚಂದ್ರನ ಆವರಿಸಿದಂತೆ
ಇದಕೆಲ್ಲ ಪರಿಹಾರ ನಿನ್ನ ವರಿಸಿ ನಾವಿಬ್ಬರು ನಡೆಸುವುದು ಜೀವನದ ಸಂತೆ.
- ಮುಕಮಾಸು
ಮುಂಜಾವಿನ ಮಂಜದು ಹಾಸುತಿದೆ ಒಲವಿನ ಮುತ್ತಿನ ಹನಿ ಹೃದಯದೂರಿಗೆ
ಮತ್ತೆಕೆ ತಡವರಿಕೆ ಮುಂದಿಟ್ಟು ಬಾ ಹಸಿ ಬಿಸಿ ಪಾದಗಳ ನೀಡುತ ಪ್ರೀತಿ ದೇಣಿಗೆ
ಮನಸದು ಕೇಳದೆ ಮನದ ಮಾತು ಹೆಜ್ಜೆ ಹಾಕಿದೆ ಒಂಟಿ ಒಲವಿನಾಟಕೆ
ಹಟವೆಕೆ ಚಲುವೆ ದಯಮಾಡಿ ಬಾ ನೀಡಬೇಡ ಭಡ್ತಿ ಈ ವಿರಹದೂಟಕೆ
- ಮುಕಮಾಸು
ನೀರ್ಗನ್ನಡಿಯಲಿ ನೋಡಲೆತ್ನಿಸಿ ನಿನ್ನ ನಗು ಮುಖವ, ಚೂರಾಗಿದೆ ಮನಸು
ಮಾಡುತ ಪದೆ ಪದೆ ದಾಳಿ, ಪ್ರೀತಿ ಅನಭವಿಸುತ್ತಿದೆ ನನ್ನ ನೋವಿನ ಸೊಗಸು
ಅಳಲು ಖಾಲಿಯಾಗಿದೆ ನೀರು ಕಣ್ಕೋಳದಲಿ, ಮರೆತು ಬದುಕಿದೆ ಮನಸು ನಗುವ
ಕೊಟ್ಟ ಬಿಡು ಚಲುವೆ ಪುಟ್ಟ ಮನವ, ಸುಡಬೆಡ ವಿರಹದ ಕಿಡಿಯಲಿ ಈ ಬಾಳ ಬನವ.
- ಮುಕಮಾಸು
ಬೆಂಬಿಡದೆ ಹಿಂಬಾಲಿಸಿದಂತೆ ಸೂರ್ಯ, ನೀ ಭೂಮಿಯಲ್ಲಿ ಕಾಂತೀಯ ಶಿಲೆಯಾಗಿ ಸೆಳೆಯುತಿರಲು
ಹಂಬಲಿಸಿ ಬಂದಂತೆ ರಶ್ಮಿ ಭೂಮಿಗೆ ತಂಪನುಡುಕುತ ಸೂರ್ಯನ ಶಾಖ ಅತಿಯಾಗಿರಲು
ನಲ್ಲೆ ನಯನಗಳು ಕೋರಗುತಿವೆ ಹುಡುಕಿ ನಿನ್ನ, ಯುದ್ಧದಲ್ಲಿ ಎಲ್ಲವನ್ನು ಕಳೆದುಕೊಂಡ ರಾಜನಂತೆ
ಮನಸು ಮಾಸಿ ಹೋಗುತಿದೆ ಚಲುವೆ ಕಣದೆ ನಿನ್ನ, ಸೂರ್ಯನಿಲ್ಲದ ತಾವರೆ ಮುದುಡಿದಂತೆ.
- ಮುಕಮಾಸು
ನಿಜ ಹೇಳಿದ್ರೆ ತಾತ್ಕಾಲಿಕವಾಗಿ ಬೆಲೆ ಸಿಗಲ್ಲ, ಅದೆ ಸುಳ್ಳು ಹೇಳಿದ್ರೆ ಶಾಶ್ವತವಾಗಿ ಜೀವನನೆ ಸಿಗಲ್ಲ.
ಅದ್ದರಿಂದ ಸುಳ್ಳು ಹೇಳಿ ಬೆರೆಯವರ ಜೀವನದಿಂದ ದೂರ ಅಥವಾ ಬೇರೊಬ್ಬರನ್ನ ನಮ್ಮ ಜೀವನದಿಂದ ಶಾಶ್ವತವಾಗಿ ಕಳೆದುಕೋಳ್ಳುವ ಬದಲು, ನಿಜ ಹೇಳಿ ತಾತ್ಕಾಲಿಕವಾಗಿ ಬೆಲೆ ಕಳೆದುಕೋಳ್ಳುವುದು ಎಷ್ಟೋ ಮೇಲು, ಯಾಕೆಂದರೆ ಸತ್ಯ ಗೊತ್ತಾದಾಗ ಬೆಲೆ ಸಿಗುತ್ತೆ, ಜೀವನ ಅಲ್ಲ.
- ಮುಕಮಾಸು
ಅರಳುತಿದೆ ಪ್ರೇಮಕವನ, ಮುಗಿಯುತಿರಲು ಜೀವನ ಪಯಣ
ಉಕ್ಕಿದಂತೆ ಮನದ ಕಡಲು ಗೆಳತಿ, ಅತಿಯಾಗಿ ಮೌನದಳಲು||
ಮನಸೆ ನಿನ್ನೆಸರು ಕನಸು, ಕನಸಲ್ಲಿ ಬರೊಕೆ ನಿಂಗ್ಯಾಕೆ ಮುನಿಸು
ಹೇಳೋಕೆ ಸಾಲಲ್ಲ ಪದಗಳ ಸಾಲು, ನೊರೆಹಾಲ ಸಿರಿಯಂತ ನಿನ್ನೊಲವ ಸೊಗಸು
ಅಕ್ಕರೆಯ ಮಾತಾಡಲು ನಿ ಸಕ್ಕರೆಯ ಗೊಂಬೆ, ಬೀರಿದಾಗ ಬಾಯ್ತುಂಬ ದಾಳಿಂಬೆ ಸಂತೆ
ಹಸಿ ಕೆನ್ನೆ ಕುಡಿನೋಟ ಕತ್ತಿಯಂತೆ, ಅಂಬರದ ಅಂಚಲ್ಲಿ ಬುಗಿಲೆದ್ದ ಹಿಮರಾಶಿಯ ಕಂತೆ
ಅರಳುತಿದೆ ಪ್ರೇಮಕವನ, ಮುಗಿಯುತಿರಲು ಜೀವನ ಪಯಣ||
ನಿನ್ನೋಡಲ ದನಿಯದು ಬೆಳಗೆದ್ದು ಕಾಜಾಣ ಕಾನನದ ನಡುವಲ್ಲಿ ನನ್ನೆಸರ ಕರೆದಂತೆ
ತರುಣಿ ನಿನ್ನ ಕಣ್ಣೋಟದ ಕರೆಯದು ಹರಿಣಿಯ ಮೈ ಮೇಲೆ ಬರೆದ ರಂಗೋಲಿಯ ಚುಕ್ಕಿಯಂತೆ
ಮಯುರ ಮರೆತಂತೆ ನಾಟ್ಯವ ನವಿಲೆ ನೋಡಿ ನಿನ್ನ ವಾಯ್ಯರದ ಬಿಂಕದ ನಡತಿ
ನಿನೊಂತರ ನಿರಂತರ ಹರಿಯವ ಮಹಾನದಿಗಳ ಚಲವಿನ ಚಿಲುಮೆಯ ನಗೆಹಬ್ಬದ ಒಡತಿ.
- ಮುಕಮಾಸು
ಜೀವನದಲ್ಲಿ ಬರುವ ಎಲ್ಲಾ ಪರಿಸ್ಥಿತಿ, ಘಟನೆ ಮತ್ತು ಪ್ರಶ್ನೆಗಳಿಗೆ ಸಮಯ ಎನ್ನುವುದು ಪರಿಪಕ್ವವಾದ ಸೂಕ್ತ ಉತ್ತರವನ್ನು ನೀಡುತ್ತದೆ, ಅದು ನಮ್ಮ ಪ್ರಯತ್ನ ಮತ್ತು ಪರಿಶ್ರಮ ಸಮಯಪ್ರಙ್ನೆ ಮತ್ತು ಸಮಯೋಚಿತವಾಗಿದ್ದರೆ. ಏಕೆಂದರೆ ಹಲವಾರು ಸಂದರ್ಭಗಳಲ್ಲಿ ನಮ್ಮ ಪ್ರಯತ್ನ ಎಷ್ಟೇ ಇದ್ದರೂ ಸೂಕ್ತ ಉತ್ತರಕ್ಕಾಗಿ ನಾವು ಸರಿಯಾದ ಸಮಯ ಬರುವ ತನಕ ಕಾಯಲೆಬೇಕು.
- ಮುಕಮಾಸು
ನಿನ್ನ ಮೈ ಕಾಂತಿಯದು ಸೂರ್ಯನ ರಷ್ಮಿಗೆ ಪೊರೆ ಬಿಟ್ಟ ಮರಿ ಹಾವು ಮಿಂಚಿದಂಗೆ
ನೆನಪಿನ ಪರಿಪಾಠವದು ಬೆಳಗ್ಗೆ ಎದ್ದು ಅರುಣ ಕಡಲಲಿ ಮಿಂದು ತನ್ನ ತಾನೆ ನೋಡಿದಂಗೆ
ಅರಿಯದ ಹೃದಯಕೆ ನಿನ್ನಾಗಮನ ಶಾಂತ ಕಡಲಿಗೆ ಸಣ್ಣ ಕಲ್ಲಿನ ಚುಂಬನದ ನಗೆಅಲೆಯಂತೆ
ಅಗಲಿಕೆಯ ನೋವದು ದಡದಲ್ಲಿ ಬಿದ್ದಿರುವ ಅರೆಜೀವದ ಕರಿಮೀನನ್ನು ರಣಹದ್ದು ಹೆಕ್ಕಿದಂತೆ
- ಮುಕಮಾಸು
ನಮ್ಮ ಜೀವನದ ದಾರಿಯಲ್ಲಿ ನಡೆಯುವ ಪ್ರತಿಯೊಂದು ಘಟನೆಗಳಿಗೆ ಅದರದೇ ಆದ ಬೆಲೆ ಇರುತ್ತದೆ, ಕೇಲವೊಂದು ನಮಗೆ ಬೆಲೆ ತಂದು ಕೋಡುತ್ತವೆ, ಮತ್ತೆ ಕೇಲವಕ್ಕೆ ನಾವು ಬೆಲೆ ತೆರಬೇಕಾಗುತ್ತದೆ, ಮುಖ್ಯವಾಗಿ ಖುಷಿ ಮತ್ತು ದುಃಖ.ಖುಷಿಗಿಂತ ದುಃಖದ ನೋವಿಗೆ ಬೆಲೆ ಜಾಸ್ತಿ.
ಯಾಕೆಂದರೆ ಖುಷಿ,ಸಂತೋಷ,ಸಡಗರ, ಹೆಚ್ಚೆಂದರೆ ಮರೆಯಲಾರದ ನೆನಪೊಂದನ್ನ ಕೊಡಬಹುದು, ಅದೆ ದುಃಖದ ನೋವಿನ ಸಂಕಟ ಮರೆಯಲಾರದ ನೆನಪನ್ನ ಮತ್ತೆಂದು ನೆನೆಯದಂತೆ ಬೆಲೆ ಕಟ್ಟಲಾಗದ ನಮ್ಮನ್ನೆ ಶಾಶ್ವತವಾಗಿ ಮರೆಮಾಡಬಹುದು.
- ಮುಕಮಾಸು
ಜೀವನ ಅನ್ನೋದು ಕಡಲಿದ್ದಂಗೆ, ಹೊರಗೆ ನಿಂತು ನೋಡಿದವರಿಗಲ್ಲ ಕೇವಲ ಅಲೆಗಳ ಅಬ್ಬರ ಮತ್ತು ನೀರಿನ ಭಯದ ಸೌಂದರ್ಯ ಇವೆರಡರ ಗೊಂದಲದ ಅನುಭವ ಸಿಗುತ್ತೆ, ಆದರೆ ನಿಜವಾದ ಜೀವನದ ಸುಖ ಮತ್ತು ಸುಖದ ಪ್ರಶಾಂತತೆಯ ನೈಜ ಅನುಭವ ಸಿಗಬೆಕೆಂದರೆ, ಕಡಲ ಆಳಕ್ಕಿಳಿದು ಛಲ ಬಿಡದೆ ಹುಡುಕಿ ಮುತ್ತು ಪಡೆವ ಅಂಬಿಗನಂತೆ ಜೀವನವನ್ನು ತಾಳ್ಮೆಯ ತರ್ಕದ ತಕ್ಕಡಿಯಲಿಟ್ಟು ತೂಗಬೇಕು.
- ಮುಕಮಾಸು
ಸಂಸಾರ ಅನ್ನೋದು ಕಾಲಿಗೆ ಆಗಿರೋ ಹುಣ್ಣಿದ್ದಂಗೆ, ಒಂದು ಕಡೆ ನಿಲ್ಲೋಕೆ ಆಗಲ್ಲ ಮುಂದೆ ನಡೆಯೋಕು ಆಗಲ್ಲ ನೋವು ಕೋಡ್ತಯಿರುತ್ತೆ, ಆಗಂತ ಕಾಲನ್ನ ಕತ್ತರಿಸೋಕಾಗಲ್ಲ, ಪ್ರತಿ ನೋವಿನ ಹಿಂದೆ ಒಂದಲ್ಲ ಒಂದು ಸುಖ ಇದ್ದೆ ಇರುತ್ತದೆ, ಆದರೆ ತಾಳ್ಮೆಯ ನಡೆ ತುಂಬ ಮುಖ್ಯ ಯಾಕೆಂದರೆ, ನೋವಿನ ಅಲೆಗಿಂತ ಸುಖ ಅನ್ನೋ ಸಂಸಾರ ಸಾಗರ ಡೊಡ್ಡದು ಮತ್ತದೇ ಸಂಸಾರ ಸಾಗರದಲ್ಲಿ ಅಲೆ ಅನ್ನೋದು ಕೇವಲ ಒಂದು ಚಿಕ್ಕ ಭಾಗ ಅಷ್ಟೆ.
- ಮುಕಮಾಸು
ಹೂದೋಟದ ಬಯಲು ಮನೆಯಲಿ ಮಂಜಿನ ಮುತ್ತಿನನಿಯ ಸ್ನಾನ ಮಾಡಿ ಸೂರ್ಯನ ಶಾಖಕೆ ಮೈ ಒಣಗಿಸಿ ಹಸಿರು ಎಲೆಯ ಸಿರೆಯುಟ್ಟು ಶ್ರಂಗಾರವಾಗಿ ನಾಚಿ ನೆಲ ನೋಡುವ ಮುದ್ದಾದ ಗುಲಬಿಯಂತೆ,
ಕಂದಮ್ಮ ತಾಯಾಲ್ಕುಡಿದು ಹರುಷದಿ ನಕ್ಕು ನಗಿಸಿ ಆಯಾಸ ಆದಮೇಲೆ ನೀದಿರಮ್ಮನ ನಲ್ಮೆಯ ಮಡಿಲಿಗೆ ತನ್ನನ್ನು ಒಪ್ಪಿಸಿ ಲೋಕದ ಪರಿವನ್ನು ಮರೆತು ತಾಯೊಡಲ ಬಾಚಿ ಅಪ್ಪುವ ಮುಗ್ಧತೆಯಂತೆ.
" ನಿದಿರೆಯಿಂದೆದ್ದ ನಿನ್ನ ಕೋಮಲ ನಗೆಹೊನಲಿನ ಕಣ್ಮನಸು"
ಗರಿ ಬಂದ ಮರಿಹಕ್ಕಿ ಚಿಗುರೊಡೆದ ಮಾಮರದ ಮನೆಯ ಅಂಗಳದಲ್ಲಿ ಮೊದಲ ಬಾರಿ ಗಾಳಿಯ ಏರಿಳಿತ ನಾಚುವಂತೆ ಅಕ್ಕರೆಯ ಎಳೆ ರೆಕ್ಕೆಗಳ ತಾಯಿಯ ಅರಿವು ಮತ್ತು ನೆರವಿಲ್ಲದಂತೆ ಹರುಷದರಿ ಬಿಸಿದಂತೆ,
ಮೇಘರಾಜರಿಬ್ಬರ ಕದನದಲಿ ಕಂಗಾಲಾದ ಮಳೆ ಹಿಂಡು ಚದುರಿ ಹನಿಯಾಗಿ ಅಳುತ ಬರುವಾಗ ಮಿಂಚೊಂದು ಕತ್ತಲೆಯ ದಾರಿಗೆ ದೈರ್ಯದ ಬೆಳಕು ಚೆಲ್ಲಿ ಮರೆಯಾಗಿರೆ ಮಳೆಹನಿಯದು ಹರುಷದಲಿ ಅಮೃತ ಬಿಂದು ಆದಂತೆ.
"ಸುಳಿವಿಲ್ಲದೆ ಸುಳಿದ ನಿನ್ನ ಕಂಡಾಗ ನನ್ನ ಮನಸು"
- ಮುಕಮಾಸು